ಅವನೊಬ್ಬ ಮೀನುಗಾರ. ತುಂಬ ಉತ್ಸಾಹಿ. ಅದೇನು ಕಾರಣವೋ ಕಾಣೆ, ಅವನಿಗೆ ತುಂಬ ಬೇU ಎಚ್ಚರಾಗಿಬಿಡುತ್ತಿತ್ತು. ಅವನ ಹೆಂಡತಿ-ಮಕ್ಕಳೋ-ಇವನ ಗುಣಕ್ಕೆ ಉಲ್ಟಾ ಎಂಬಂತಿದ್ದರು.
ಹೀಗಿದ್ದಾಗಲೇ ಅದೊಂದು ದಿನ ಇವನಿಗೆ ಯಥಾಪ್ರಕಾರ ತುಂಬ ಬೇಗನೆ ಎಚ್ಚರವಾಯಿತು. ಮತ್ತೆ ಬೆಳಗ್ಗೆ ಆಗುವವರೆಗೂ ನಿದ್ರೆ ಬರುವುದಿಲ್ಲ ಎಂದು ಗೊತ್ತಾದಾಗ ಟೈಂಪಾಸ್ ಮಾಡಲು ಅತ್ತಿತ್ತ ನೋಡಿದ. ನಿದ್ದೆಯ ಮಂಪರಿನಲ್ಲಿದ್ದವನಿಗೆ ಪಕ್ಕದಲ್ಲೇ ಒಂದು ಮಡಿಕೆ ಮತ್ತು ಅದರೊಳಗೆ ಕಲ್ಲಿನಂಥ ವಸ್ತುಗಳಿರುವುದು ಕಾಣಿಸಿತು.
ಸರಿ, ಒಂದೊಂದೇ ಕಲ್ಲನ್ನು ಸಮುದ್ರಕ್ಕೆ ಬೀಸಿ ಎಸೆಯೋಣ. ಹಾಗೇ ಸಮಯ ಕಳೆಯೋಣ ಅಂದುಕೊಂಡವನು ಹಾಗೇ ಮಾಡಿದ. ಮಡಕೆಯಲ್ಲಿ ಉಳಿದಿರುವುದು ಒಂದೇ ಒಂದು ಕಲ್ಲು ಅನ್ನಿಸಿದಾಗ ಇತ್ತ ಬೆಳಗಾಗಿ ಹೋಗಿತ್ತು.ಕಡೆಯ ಕಲ್ಲನ್ನು ರೊಯ್ಯನೆ ಎಸೆಯುವ ಮುನ್ನ ನೋಡಿದರೆ-ಅದು ಕಲ್ಲಲ್ಲ, ಮುತ್ತಾಗಿತ್ತು! ಅಷ್ಟು ಹೊತ್ತಿಂದ ಎಸೆದದ್ದು ಮುತ್ತುಗಳನ್ನೇ ಎಂಬುದೂ ಅದೇ ವೇಳೆಗೆ ಮೀನುಗಾರನಿಗೆ ಅರಿಯವಾಯಿತು!
ನೀತಿ: ಬೆಳಗ್ಗೆ ಬೇಗ ಏಳಬರದು. ಎದ್ದರೆ ಇಂಥ ಫಜೀತಿಗಳಾಗುತ್ತವೆ!
( ಸೋಮಾರಿ ಗೆಳತಿಯೊಬ್ಬಳು ಕಳಿಸಿದ ಎಸ್ಸೆಮ್ಮೆಸ್ಸು!)