ಜೇನು ತುಟಿಯ ಹುಡುಗೀ,

rose for u

ನನ್ನ ಸಂತೋಷಕ್ಕಾದ್ರೂ
ಒಂದ್ಸಲ ಮಾತಾಡು, ಪ್ಲೀಸ್…
ಜೇನು ತುಟಿಯ ಹುಡುಗೀ,
ಹೌದು ಕಣೇ, ಇದು ಐನೂರನೇ ಪತ್ರ. ನಿನಗೆ ಮತ್ತು ನನಗೆ!
ಮೊದಲ ಪತ್ರ ಬರೆದಾಗ ಕೈತುಂಬ ಮತ್ತು ಮೈ ತುಂಬ ನಿನ್ನ ನೆನಪಿತ್ತು. ಅವನ್ನು ಇಷ್ಟಿಷ್ಟೇ ಬರಿದು ಮಾಡಿಕೊಳ್ಳುವ ಆಸೆಯಿಂದ ಬರೆಯುತ್ತಾ ಹೋದೆ. ಈಗ ಏನಾಗಿದೆ ಅಂದರೆ-ಐನೂರು ಪತ್ರ ಬರೆದ ನಂತರವೂ ನಿನ್ನ ನೆನಪು ಹಾಗೇ ಇದೆ-ಅಮ್ಮನ ಹಾರೈಕೆಯಂತೆ; ಕಂದನ ಕಿರುನಗೆಯಂತೆ; ಚಂದಿರನ ಬೆಳದಿಂಗಳಂತೆ!
ಆಕಸ್ಮಿಕವಾಗಿ ಬದುಕಿಗೆ ಬಂದು ಅಷ್ಟೇ ಆಕಸ್ಮಿಕವಾಗಿ ದಿಢೀರ್ ಎದ್ದು ಹೋದವಳು ನೀನು. ಹಾಗೆ ಹೋಗುವ ಮೊದಲು ‘ಹೇಳಿ ಹೋಗು ಕಾರಣ’ ಎಂದೆ ನಾನು. ಉಹುಂ, ನೀನು ಹೇಳಲೇ ಇಲ್ಲ. ನಾನು ಚರ್ಚೆಗೆ ನಿಂತೆ. ನೀನು ಮಾತೇ ಆಡಲಿಲ್ಲ. ನಾನು ಕಣ್ಣೀರಿಟ್ಟೆ. ನೀನು ನೋಡಲೇ ಇಲ್ಲ. ನಾನು ನೋವಿಂದ ಹಾಡಿದೆ. ನೀನು ಅದೇನನ್ನೂ ಕೇಳಲೇ ಇಲ್ಲ!
ನಿನ್ನ ನಂಬಿಕೆ, ನಿನ್ನ ಕಲ್ಪನೆ, ನಿನ್ನ ತಿಳಿವಳಿಕೆ ಹೇಗೊ ಕಾಣೆ, ಆದರೆ ನಾನು ಅರ್ಥಮಾಡಿಕೊಂಡಂತೆ; ಪ್ರೀತಿ-‘ವನೆಗಳ ಜತೆಗಿನ ಸುದೀರ್ಘ ಪಯಣ, ಪ್ರೀತಿ-ನಡುರಾತ್ರಿಯಲ್ಲಿ ದಾರಿ ತಪ್ಪಿದಾಗ ನೆರವಾಗುವ ಪುಟ್ಟ ಹಣತೆ, ಪ್ರೀತಿ-ಮರು‘ಮಿಯಲ್ಲಿ ದಿಢೀರ್ ಸಿಗುವ ಓಯಸಿಸ್ಸು. ಪ್ರೀತಿ-ಅಂತ್ಯವಿಲ್ಲದ ಪಯಣದಲ್ಲಿನ ಸಹ ಪ್ರಯಾಣಿಕ, ಪ್ರೀತಿ-ಸೂರ್ಯೋದಯದ ಮೊದಲ ಕಿರಣ. ಅದು, ಹೂವಿನೊಳಗಿರುವ ಶುದ್ಧ ಮಕರಂದ. ಪ್ರೀತಿಯೆಂದರೆ ಬೆಳದಿಂಗಳು. ಅದು, ಹೀಗೆ ಕಂಡು ಕಣ್ಮರೆಯಾಗುವ ಮಿಂಚು. ಪ್ರೀತಿ-ಸುನಾಮಿಯನ್ನೂ ಒಡಲಲ್ಲಿ ಇಟ್ಟುಕೊಂಡ ಸುಪ್ತ ಕಡಲು. ಪ್ರೀತಿ-ಒಲವಿನ ರಂಗೋಲಿಗೆ ಇಡುವ ಕಡೆಯ ಚುಕ್ಕಿ. ಪ್ರೀತಿ- ಊಟಞ Zbbಛಿoo ಇಲ್ಲದೆ ಬಂದ ಅವಳ ಪತ್ರ. ಪ್ರೀತಿ-ಅಂದರೆ ಬಿಸಿಯುಸಿರು. ಪ್ರೀತಿ-ಎಂದರೆ ಸುಳ್ಳನ್ನೂ ನಂಬುವ ಶುದ್ಧ ನಂಬಿಕೆ! ಪ್ರೀತಿ-ದಣಿವೇ ಆಗದ ನಡಿಗೆ. ಪ್ರೀತಿ-ಇಬ್ಬರನ್ನೂ ದಾರಿ ತಪ್ಪಿಸುವ ರಸ್ತೆ. ಪ್ರೀತಿ-ಅವಳನ್ನು ಮೊದಲ ಸಲ ಕಂಡಾಗ ಆದ ಫುಳಕ. ಪ್ರೀತಿ-ಗ‘ಗುಡಿಯಲ್ಲಿನ ವಿಗ್ರಹ!
ಅಷ್ಟೇ ಅಲ್ಲ-ಪ್ರೀತಿ ಅಂದರೆ ಕಣ್ಣಾಮುಚ್ಚಾಲೆ! ಪ್ರೀತಿಯೆಂದರೆ ಮಳೆಬಿಲ್ಲು. ಪ್ರೀತಿ-ಕಲ್ಪವೃಕ್ಷ. ಪ್ರೀತಿ-ಎಂದೆಂದೂ ಬರಿದಾಗದ ಅಕ್ಷಯಪಾತ್ರೆ. ಪ್ರೀತಿ-ಎಂದೂ ಮರೆಯದ ಹಾಡು! ಪ್ರೀತಿ ಅನ್ನೋದು ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ. ಪ್ರೀತಿ ಅಂದರೆ ಶರಣಾಗತಿ. ಪ್ರೀತಿ-ಸೋಲು, ಪ್ರೀತಿ ಅಂದ್ರೆ ಬಿಸಿಯುಸಿರ ಕದನ. ಪ್ರೀತಿ-ಕಾಲ್ ಮಾಡದೆಯೂ ಖಾಲಿಯಾಗುವ ಕರೆನ್ಸಿ. ಪ್ರೀತಿ ಮಿಸ್ಡ್ ಕಾಲು. ಪ್ರೀತಿ-‘ಕ್ತಿ, ಶಕ್ತಿ, ಮುಕ್ತಿ! ಪ್ರೀತಿ ಅಂದರೆ ನಾನು. ನನ್ನ ತುಂಬಾ ನೀನು…!
ಹೀಗೆಲ್ಲಾ ಹೇಳುವುದಿತ್ತು ನಿನಗೆ. ಆದರೆ ಅದಕ್ಕೊಂದು ಅವಕಾಶವೇ ಒದಗಿ ಬರಲಿಲ್ಲ. ನಾನು ಎಲ್ಲವನ್ನೂ ವಿವರಿಸುವ ವೇಳೆಗೆ, ನೀನು ಹೇಳದೇ ಕೇಳದೆ ಹೊರಟು ಹೋಗಿದ್ದೆ-ಇನ್ನೊಂದು ಮನೆಗೆ! ಈ ಬದುಕೆಂಬುದು ನಾವಿಬ್ಬರೂ ಸೇರಿ ಅಂಗಳದಲ್ಲಿ ಬಿಡಿಸಿದ ರಂಗವಲ್ಲಿ. ಅದಕ್ಕೆ ನಾವೇ ಬಣ್ಣ ತುಂಬಬೇಕು ಅಂದುಕೊಂಡಿದ್ದೆ ನಾನು-ನೀನು ಕೈತಪ್ಪಿದ ನಂತರ ನಾನು ಏನೇನೋ ಆಗಿ ಹೋದದ್ದು ನನಗಂತೂ ಗೊತ್ತಾಗಿದೆ. ಆದರೂ, ದಿನ, ವಾರ, ತಿಂಗಳುಗಳು ಕಳೆದು ಹೋಗಿವೆ. ನನಗಷ್ಟೇ ಅಲ್ಲ, ನಿನಗೂ ವಯಸ್ಸಾಗಿದೆ! ಬಹುಶಃ ನೀನು ಹಳೆಯದನ್ನೆಲ್ಲ ಮರೆತಿದ್ದೀ. ನಾನು-ಮರೆತವನಂತೆ ತೋರಿಸಿಕೊಂಡು ಬದುಕುತ್ತಿದ್ದೇನೆ!

Advertisements

3 Comments »

 1. 1
  somu Says:

  ಈ ಬದುಕೆಂಬುದು ನಾವಿಬ್ಬರೂ ಸೇರಿ ಅಂಗಳದಲ್ಲಿ ಬಿಡಿಸಿದ ರಂಗವಲ್ಲಿ. ಅದಕ್ಕೆ ನಾವೇ ಬಣ್ಣ ತುಂಬಬೇಕು…adbhuta kalpane sir[:)]….neevu blg lokhakke bandiddu namagella tumba santoshavaagide[:)]….:)

 2. 2
  sowmya Says:

  Vijaya Karnatakadhalli mathra sigutthiddha nimma preethiya hani sinchana blog lokakku kaalittiddhu athiva santhasavannu neeDidhe.. adharallu nannantha pecchu manadha hucchu bhaavukarige preethiya kulumeyalli bendhu parishuddhathe paDethukonDa dhanyathabhaava… neevu nuru varusha prithigaagi preethiyindhale naguva gulabiyanthe baali. nimmindha aa nuru varushagala kaalavu gulabiya narugampu susutthale irale..

  hecchu preethi matth ondsolpa abhimaanadhindha
  Sowmya

 3. 3

  Akkareya Medam,
  Namaskara. Tumbaa tadavaagi nimage reply kodtaa iddene.
  kshamisi. nimma preetiya maatugalige 1000 thanx.
  Manikanth.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: