ಇದು ಮನೆ ಮನೆಯ ಮಕ್ಕಳ ಕಥೆ..!!!

ನಮ್ಮ್ ಮಗು

ನಮ್ಮ ಮಗು ವಿಪರೀತ ಆಟ ಆಡುತ್ತೆ. ಚನ್ನಾಗಿ ಊಟ ಮಾಡುತ್ತೆ. ತನ್ನದೇ ವಿಚಿತ್ರ ‘ಷೇಲಿ ಕಥೆ ಹೇಳುತ್ತೆ. ಮುದ್ದು ಮುದ್ದಾಗಿ ಮಾತಾಡುತ್ತೆ. ಗಡದ್ದಾಗಿ ನಿದ್ರೆ ಹೊಡೆಯುತ್ತೆ. ಆಟ ಅಂದರಂತೂ ಸರಿಯೇ ಸರಿ. ಶನಿವಾರ-‘ನುವಾರ ಕೇಳೋದೇ ಬೇಡ ಕಣ್ರೀ-ಬೆಳಗಿನಿಂದ ಸಂಜೆಯತನಕ ಟಿ.ವಿ. ಮುಂದೇನೇ ಠೀವಿಯಿಂದ ಕೂತ್ರೆ- ಬರೀ ಕಾರ್ಟೂನ್ ನೆಟ್ವರ್ಕು! ಆದ್ರೆ ಸಂಕಟದ ಸಂಗತಿ ಅಂದ್ರೆ – ನಮ್ಮ ಮಗು ಓದೋದ್ರಲ್ಲಿ ವಿಪರೀತ ಹಿಂದಿದೆ ಕಣ್ರೀ. ಮೊದಲಿಂದಾನೂ ‘ಸಿ’ ಗ್ರೇಡು! ದಿನಾ ಸಂಜೆ ನಾವೇ ಪಾಠ ಹೇಳಿಕೊಡ್ತೀವಿ! ಟ್ಯೂಶನ್ಗೆ ಹಾಕಿದೀವಿ. ಸ್ಕೂಲಲ್ಲಿ ಮೇಡಂಗೆ ಹೇಳಿ ಶಿಕ್ಷೆ ಕೊಡಿಸಿದ್ದೀವಿ. ಆದ್ರೆ ಏನೂ ಪ್ರಯೋಜನ ಆಗಲಿಲ್ಲ. ನಮಗಂತೂ ಸಾಕಪ್ಪಾ ಸಾಕು ಅನ್ನಿಸಿಬಿಟ್ಟಿದೆ. ಮುಂದಿನ ವರ್ಷದಿಂದ ಯಾವುದಾದ್ರೂ ಬೋರ್ಡಿಂಗ್ ಸ್ಕೂಲ್ಗೆ ಹಾಕಿಬಿಡೋಣ ಅಂತ ಯೋಚನೆ ಮಾಡಿದೀವಿ…’
ಹೌದಲ್ಲವಾ? ಹೀಗೆಲ್ಲ ಯೋಚಿಸುವ ಲಕ್ಷಾಂತರ ತಾಯ್ತಂದೆಯರು ನಮ್ಮ ಜತೆಗಿದ್ದಾರೆ. ನಮ್ಮ ಮನೆಗಳಲ್ಲೇ ಇದ್ದಾರೆ. ಮಗು ಓದುವುದಿಲ್ಲ; ಪರೀಕ್ಷೇಲಿ ‘ಎ’ ಗ್ರೇಡು ತಂದಿಲ್ಲ ಎಂದು ಮಾತ್ರ ಅವರು ಲೆಕ್ಕ ಹಾಕುತ್ತಾರೆ. ಅದೊಂದೇ ಕಾರಣಕ್ಕೆ ಹೊಡೆಯುತ್ತಾರೆ. ಹೆದರಿಸುತ್ತಾರೆ. ಹೀಯಾಳಿಸುತ್ತಾರೆ. ಗೆಟ್ಔಟ್ ಎಂದು ಮುದ್ದು ಮಕ್ಕಳ ಮೇಲೆ ಸಿಡುಕುತ್ತಾರೆ. ಮನೆಯಿಂದ ಹೊರಗೆ ನಿಲ್ಲಿಸುತ್ತಾರೆ. ಆದರೆ, ಯಾವುದೇ ಸಂದ‘ದಲ್ಲೂ ನಮ್ಮ ಮಗು ಮಂಕಾಗಲು; ಓದಿನಿಂದ ದೂರ ಉಳಿಯಲು ಕಾರಣವೇನು ಎಂದು
ಯೋಚಿಸುವುದಿಲ್ಲ. ನಮಗೆಲ್ಲ ಎದುರು ಮನೆಯ ಹುಡುಗನ ‘ಎ’ ಗ್ರೇಡ್ ಟ್ಯಾಲೆಂಟ್ ಕಾಣಿಸುತ್ತದೆಯೇ ಹೊರತು, ಆತ ಆಟದಲ್ಲಿ, ಪೇಂಟಿಂಗ್ನಲ್ಲಿ, ನಯ ವಿನಯದ ನಡವಳಿಕೆಯ ‘ಡಿ’ ಗ್ರೇಡ್ನಲ್ಲಿದ್ದಾನೆ ಎಂಬುದು ಅರ್ಥವಾಗುವುದೇ ಇಲ್ಲ. ಹಾಗೆಂದೇ ಹಿಂದೆ ಮುಂದೆ ನೋಡದೆ- ‘ಎದುರು ಮನೆ ಮಕ್ಕಳನ್ನು ನೋಡಿ ಕಲಿತುಕೋ. ನೀನೂ ಇದ್ದೀಯ, ದನ ಇದ್ದ ಹಾಗೆ… ವೇಸ್ಟು, ಶುದ್ಧ ವೇಸ್ಟು. ನಮ್ಮ ಮನೇಲಿ ಯಾಕಾದ್ರೂ ಹುಟ್ಟಿಬಿಟ್ಟೆ. ನಮ್ಮ ಜೀವ ತಿನ್ನೋಕೆ ಎಂದೆಲ್ಲಾ ಮಾತಾಡಿ ಬಿಡುತ್ತೇವೆ!
ಕೇಳಿ-ಹೀಗೆಲ್ಲ ಬಯ್ಯಿಸಿಕೊಂಡ ಮರುದಿನದಿಂದಲೇ ನಮ್ಮ ಮಗು ಛಕಾಚಕ್ ಬದಲಾಗಿಬಿಡುವುದಿಲ್ಲ. ಬದಲಿಗೆ ಇನ್ನಷ್ಟು ಮಂಕಾಗುತ್ತದೆ. ದುರಂತವೆಂದರೆ, ಮಗು ರ್ಯಾಂಕ್ ಬರಲಿ ಎಂಬ ಒಂದೇ ಒಂದು ಆಸೆಯಿಂದ ಅದರ ಮ‘ರ ಬಾಲ್ಯವನ್ನೇ ಕೊಂದು ಹಾಕುತ್ತಿದ್ದೇವೆಂಬ ಸರಳ, ಸೂಕ್ಷ್ಮ ಸಂಗತಿ ಅಪ್ಪ-ಅಮ್ಮಂದಿರಿಗೆ ಅರ್ಥವಾಗುವುದೇ ಇಲ್ಲ. ಮಗು ಎಂದರೆ ಅದು ಕೇವಲ ಮಗುವಲ್ಲ. ಅದು ಈ ‘ಮಿಗೆ ‘ಗವಂತ ಕಳಿಸಿದ ನಕ್ಷತ್ರ ಎಂಬುದು ಗೊತ್ತಾಗುವುದೇ ಇಲ್ಲ!
****
ಇಷ್ಟೆಲ್ಲವನ್ನೂ ವಿವರಿಸಿ ಹೇಳುವ ಬದಲು ಅಮೀರ್ಖಾನ್ನ ‘ತಾರೆ ಜಮೀನ್ ಪರ್’ ಸಿನಿಮಾ ನೋಡಿ ಎಂದು ಹೇಳಿ ಬಿಡುವುದೇ ಚೆಂದ. ಕೇಳಿ, ಆ ಸಿನಿಮಾದಲ್ಲೂ ನಮ್ಮ ನಿಮ್ಮ ಮನೇಲಿರುವಂಥ ಹುಡುಗನಿದ್ದಾನೆ. ಅವನ ಹೆಸರು-ಇಶಾನ್ ಅವಸ್ಥಿ. ಅವನು ಹಲ್ಲುಬ್ಬ. ಶುದ್ಧ ತುಂಟ. ಆಟ, ಊಟ, ಓಟ, ಕಾಟ ಎಲ್ಲದರಲ್ಲೂ ಫಸ್ಟು. ಓದು ಅಂದ್ರೆ ಅವನೇ ಲಾಸ್ಟು! ಮಗ್ಗಿ ಅಂದ್ರೇ ಅವನಿಗೆ ವಾಂತಿ! ಲೆಕ್ಕ ಅಂದ್ರೆ ಸಾಕು-ಅವನಿಗೆ ತಲೆನೋವು. ಇಂಗ್ಲಿಷ್ ಅಂದರೆ ಸಾಕು-ಚಳಿಜ್ವರ. ಸ್ಕೂಲ್ಗೆ ಹೋಗೋದು ಅಂದ್ರೆ-ಅದು ದೊಡ್ಡ ಶಿಕ್ಷೆ! ಟಾಯ್ಲೆಟ್ಗೆ ಹೋದ್ರೆ-ಅಲ್ಲೇ ಅ‘ಗಂಟೆ ಶಿವಾಯ್! ಹೋಂ ವರ್ಕು ಮಾಡೋದಕ್ಕಿಂತ-ಹಕ್ಕಿ ಮರಿಗಳ ಚಿಲಿಪಿಲಿ; ಗಾಳಿಪಟದ ಚಿನ್ನಾಟ; ಕರಡಿ ಥರಾ ಮುದ್ದು ಮಾಡೋದು; ಕೃಷ್ಣನ ಥರಾ ಕುಣಿದಾಡೋದು; ಸುಳ್ಳು ಹೇಳೋದು… ಇದೆಲ್ಲ ಅವನಿಗಿಷ್ಟ. ಆದರೆ ಓದಪ್ಪಾ ಅಂದು ನೋಡಿ- ಅವನಿಗೆ ಮಾತೇ ನಿಂತು ಹೋಗುತ್ತೆ. (ಥೇಟ್ ನಮ್ಮ ಮಕ್ಕಳ ಥರಾ!) ಸ್ಕೂಲಲ್ಲಿ ಮೇಸ್ಟ್ರು ಪ್ರಶ್ನೆ ಕೇಳಿದ್ರೆ-ಜಪ್ಪಯ್ಯಾ ಅಂದ್ರೂ ಮಾತಾಡಲಾರ. ಆದರೆ-ಅವರೇನಾದ್ರೂ ಸಿಟ್ಟಾಗಿ- ಬೇಗ ಬೊಗಳೋ ಅಂದ್ರೆ-ಥೇಟ್ ನಾಯಿಯ ಥರಾ ಬೌಬೌಬೌಬೌ ಬೊಗಳಲು ಅವನು ಹಿಂದೆ ಮುಂದೆ ನೋಡಲ್ಲ. ಇಂಟರೆಸ್ಟಿಂಗ್ ಅಂದ್ರೆ-ಸ್ಕೂಲಲ್ಲಿ ಕೂರೋದಕ್ಕಿಂತ- ಶಿಕ್ಷೆ ಪಡೆದು ಹೊರಗೆ ನಿಲ್ಲೋದ್ರಲ್ಲೇ ಅವನಿಗೆ ಖುಷಿ! ಆಗ ಕೂಡ ಸುತ್ತಮುತ್ತ ಯಾರೂ ಇಲ್ಲ ಅಂತ ಗೊತ್ತಾದ್ರೆ ಜಕ್ಕಣಕ ಡಕ್ಕನಕ….
ಹೌದು, ‘ತಾರೆ ಜಮೀನ್ ಪರ್’ಗೆ ಈ ಹಲ್ಲುಬ್ಬ-ಇಶಾನ್ನೇ ಹೀರೋ. ಓದಿನಲ್ಲಿ ಹಿಂದೆ ಬಿದ್ದ ಈ ಹುಡುಗ ಪಸಂದ್ ಅನ್ನೋ ಥರಾ ಚಿತ್ರ ಬರೀತಿರ್ತಾನೆ. ಮೇಸ್ಟ್ರು ಲೆಕ್ಕ ಮಾಡಿದ್ರೆ ಇವನು ಕಾರ್ಟೂನ್ನ ‘ನದಲ್ಲಿರ್ತಾನೆ. ಬಣ್ಣದ ಜತೆ ಆಡ್ತಾನೆ. ಮೀನಿನ ಹೆಜ್ಜೆ ಹುಡುಕ್ತಾನೆ. ರ್ಯಾಂಕ್ ಬರಲಿ ಅಂದ್ರೆ ಮುದ್ದಿನ ಮಗ ಯಾವಾಗ್ಲೂ ಚಿತ್ರ ಬರೀತಾ ಕೂರ್ತಾನಲ್ಲ? ಇದು ನಮಗಂತೂ ಅವಮಾನದ ವಿಷಯ. ಹೇಗಾದ್ರೂ ಸರಿ, ಇವನನ್ನು ಸರಿದಾರಿಗೆ ತರಬೇಕು ಅಂದುಕೊಂಡು ಸಖತ್ ಶಿಸ್ತಿನ ಬೋರ್ಡಿಂಗ್ ಸ್ಕೂಲ್ಗೆ ಹಾಕ್ತಾರೆ ತಂದೆ-ತಾಯಿ!(ಥೇಟ್ ನಮ್ಮ ಥರಾನೇ ಇರುತ್ತೆ ಅವರ ಯೋಚನೆ, ವರ್ತನೆ, ಬೈಗುಳ ಇತ್ಯಾದಿ…)
ಅಪ್ಪ, ಅಮ್ಮ-ಅಣ್ಣನಿಂದ ದೂರಾದ ೩ನೇ ಕ್ಲಾಸಿನ ಚಿಲ್ಟು ಮಾನಸಿಕವಾಗಿ ಮತ್ತಷ್ಟು ಸುಸ್ತಾಗುತ್ತೆ. ನಿದ್ರೇಲಿ ‘ಅಮ್ಮ, ಅಮ್ಮಾ, ಹೆದರಿಕೆ ಆಗ್ತಿದೇ…’ ಎಂದು ಚೀರುತ್ತೆ. ಬೋರ್ಡಿಂಗ್
ಸ್ಕೂಲ್ನ ಅಪಾರ ಶಿಸ್ತಿನ ಮ‘ ಅದರ ಬಾಲ್ಯ ಕಳೆದು ಹೋಗುತ್ತೆ. ಓದು ಮರೆತು ಹೋಗುತ್ತೆ. ಪುಸ್ತಕಗಳ ಮೇಲೆ ಅಸಹ್ಯ ಹುಟ್ಟುತ್ತೆ. ಇಂಥ ಸಂದ‘ದಲ್ಲೇ – ಆ ಶಾಲೆಗೆ ಆರ್ಟ್ ಟೀಚರ್ ಆಗಿ ಬರುವ ಅಮೀರ್ಖಾನ್- ಆ ‘ಡಿ’ಗ್ರೇಡ್ ಮಗುವನ್ನು ಹೇಗೆ ‘ಎ’ ಗ್ರೇಡ್ ಮಗುವನ್ನಾಗಿ ಬದಲಿಸ್ತಾನೆ ಅನ್ನೋದೇ ‘ತಾರೆ ಜಮೀರ್ ಪರ್’ ಸಿನಿಮಾದ ಕಥಾವಸ್ತು.
ಕೇಳಿ, ಇಡೀ ಸಿನಿಮಾದಲ್ಲಿ ಎಲ್ಲೂ ಅಬ್ಬರವಿಲ್ಲ. ಉನ್ಮಾದದ ಡ್ಯಾನ್ಸ್ ಇಲ್ಲ. ಹೀರೋಯಿನ್ನೇ ಇಲ್ಲ. ವಿದೇಶದ ಅತಿ ಸುಂದರ ಹೊರಾಂಗಣವಿಲ್ಲ. ಜಾಸ್ತಿ ಮಾತೂ ಇಲ್ಲ! ಆದರೆ ಒಂದೊಂದು ಸನ್ನಿವೇಶದಲ್ಲೂ ಮೌನವೇ ಮಾತಾಗುತ್ತೆ. ಕಣ್ಣು ಕತೆ ಹೇಳುತ್ತೆ. ಕಡುಗತ್ತಲಲ್ಲೇ ಹೊಂಬೆಳಕು ಕಾಣಿಸುತ್ತೆ. ಇಶಾನ್ ಅವಸ್ಥಿ ಎಂಬ ಹೆಸರಿನ ಬಾಲಕ ತೆರೆಯ ಮೇಲೆ ಕಂಡಾಗಲೆಲ್ಲ ‘ಅಯ್ಯಯ್ಯೋ, ಇದು ನಮ್ಮದೇ ಮಗು ಅಲ್ವ’ ಎಂದು ಉದ್ಗರಿಸುವಂತಾಗುತ್ತದೆ. ಅದರಲ್ಲೂ ಕಡೆಯ ೨೦ ನಿಮಿಷಗಳಂತೂ ಅದ್ಭುತ, ಅದ್ಭುತ! ಉಹುಂ, ಆ ಕ್ಷಣದ ‘ವ ತೀವ್ರತೆ ವಿವರಿಸಲು ಪದಗಳಿಲ್ಲ.
ಚಿತ್ರಕಲೆಯಲ್ಲಿ ವಿಪರೀತ ಆಸಕ್ತಿ ಹೊಂದಿದ ಮಗುವಿಗೆ ಆತ್ಮವಿಶ್ವಾಸ ಕುದುರಿಸಿದ ಕಲಾಶಿಕ್ಷಕ ಅಮೀರ್ಖಾನ್ ಇಡೀ ಶಾಲೆಗೆ- ಶಿಕ್ಷಕರನ್ನೂ ಸೇರಿಸಿಕೊಂಡು- ಚಿತ್ರಕಲಾ ಸ್ಪ‘ ಏರ್ಪಡಿಸಿದರೆ-ಈ ಹಲ್ಲುಬ್ಬ ಇಶಾಂತ್ ತನ್ನ ಗುರು ಅಮೀರ್ಖಾನ್ಗಿಂತ ಅದ್ಭುತವಾದ ಚಿತ್ರ ಬರೆದುಬಿಡುತ್ತಾನೆ. ಅಷ್ಟೂ ದಿನ ಎಲ್ಲರ ಗದರಿಕೆಗೆ, ಹೀಯಾಳಿಕೆಗೆ, ತಾತ್ಸಾರಕ್ಕೆ, ಟೀಕೆಗೆ, ಗೇಲಿಗೆ, ಸಿಡಿಮಿಡಿಗೆ ಕಾರಣನಾಗಿದ್ದ ಹುಡುಗನಿಗೆ ಮೊದಲ ಬಹುಮಾನ ಬಂದಾಗ ಎಲ್ಲರೂ ಚಪ್ಪಾಳೆ ಹೊಡೆದರೆ- ಈ ‘ಡಿ’ ಗ್ರೇಡ್ ಹುಡುಗ ಸಂತೋಷದ ಮ‘ ಮಾತಾಡಲಾಗದೆ ಮುಖ ಎತ್ತಲಾಗದೆ, ಕಂಬನಿ ತಡೆಯಲಾಗದೆ, ಒಂದೊಂದೇ ಹೆಜ್ಜೆ ನಡೆದು ಬಂದು ಪ್ರಶಸ್ತಿ ಸ್ವೀಕರಿಸುತ್ತಾನೆ. ಮರುಕ್ಷಣವೇ ಬಿಟ್ಟ ಬಾಣದಂತೆ ಜಿಂಕೆಯ ಥರಾ ಓಡಿ ಹೋಗಿ ತನ್ನ ಪ್ರಿಯ ಗುರು ಅಮೀರ್ಖಾನ್ನನ್ನು ತಬ್ಬಿಕೊಂಡು ಬಿಕ್ಕಳಿಸುವ ವೇಳೆಗೆ- ಯೆಸ್, ಥೇಟರಿನಲ್ಲಿ ಕೂತ ಅಷ್ಟೂ ಜನ ಅಳುತ್ತಿರುತ್ತಾರೆ!
ಆ ಅಳುವಿನಲ್ಲಿ ಸಂತೋಷವಿರುತ್ತದೆ, ಗೆಲುವಿನ ಹೆಮ್ಮೆಯಿರುತ್ತದೆ. ಮತ್ತು ಅದೆಲ್ಲಕ್ಕೂ ಮಿಗಿಲಾಗಿ-ನಮ್ಮ ಮಕ್ಕಳನ್ನು ಹೇಗೆಲ್ಲ ತಪ್ಪು ತಪ್ಪಾಗಿ ನಡೆಸಿಕೊಂಡೆವಲ್ಲ ಎಂಬ ಸಂಕಟ ಮತ್ತು ಪಾಪಪ್ರಜ್ಞೆ ಜತೆಯಾಗಿರುತ್ತದೆ!
****
ಪ್ರತಿ ಮಗುವೂ ಇನ್ನೊಂದಕ್ಕಿಂತ ಭಿನ್ನ. ಓದಿನಲ್ಲಿ ಸ್ವಲ್ಪ ಪೆದ್ದ ಎಂಬ ಒಂದೇ ಕಾರಣಕ್ಕೆ ಅದನ್ನು ನಿರ್ಲಕ್ಷಿಸಬಾರು. ಶಿಕ್ಷಿಸಬಾರದು. ಕೈ ಮುರಿದು ಹೋಗುವಂತೆ ಹೊಡೆಯಬಾರದು. ಬೇರೆಯವರ ಮುಂದೆ ಹಂಗಿಸಬಾರದು. ಸ್ಪೆಶಲ್ ಸ್ಕೂಲ್ಗಂತೂ ಹಾಕಲೇ ಬಾರದು. ಉqಛ್ಟಿqs eಜ್ಝಿb ಜ್ಞಿ omಛ್ಚಿಜಿZ ಎಂಬ ವಿಷಯ ಅರಿತು ಬದುಕಬೇಕು. ಮಗುವಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆ ಎಂದು ಅರಿತು ಅದೇ ದಾರಿಯಲ್ಲಿ ನಾವೂ ನಡೆದರೆ-ನಮ್ಮ ಮನೆಯಿಂದಲೂ ಒಬ್ಬ ತೆಂಡೂಲ್ಕರ್, ಒಬ್ಬ ರಾಜಕುಮಾರ್, ಒಬ್ಬಳು ಸಾನಿಯಾ ಮಿರ್ಜಾ, ಒಬ್ಬ ಕಲಾವಿದ ಚಂದ್ರನಾಥ್, ಒಬ್ಬ ಚಿತ್ರನಟ ಪ್ರೇಮ್ ಖಂಡಿತ ಬರುತ್ತಾರೆ. ನಂಬುತ್ತೀರಾ? ಈವರೆಗೆ ಹೆಸರಿಸಿದ ಎಲ್ಲರೂ ಸೆಲೆಬ್ರಿಟಿ ಅಣ್ಣಂದಿರೇ. ಆದರೆ ಯಾರೊಬ್ಬರೂ ಸ್ಕೂಲಿನಲ್ಲಿ ರ್ಯಾಂಕು ಹೊಡೆದವರಲ್ಲ. ಕಾಲೇಜಿನ ಮೆಟ್ಟಿಲು ಹತ್ತಿದವರೂ ಅಲ್ಲ!
ಹೌದು, ತಾರೆ ಜಮೀನ್ ಪರ್ ಸಿನಿಮಾ ನೋಡುವಾಗ ಪೋಷಕರಿಗಂತೂ ಕಪಾಲಕ್ಕೆ ಹೊಡೆದಂತಾಗುತ್ತದೆ. ಎಲ್ಲರನ್ನೂ ಪಾಪಪ್ರಜ್ಞೆ ಕ್ಷಣಕ್ಷಣವೂ ಕಾಡುತ್ತದೆ. ಹುಟ್ಟು ಕಿವುಡರಿಗೂ ಆ ಸಿನಿಮಾದ ಮಾತು ಅರ್ಥವಾಗುತ್ತದೆ. ಮೌನ ಕಥೆ ಹೇಳುತ್ತದೆ. ಸಿನಿಮಾ ನೋಡಿದ ಮೇಲೆ-ನಮ್ಮ ಮಕ್ಕಳನ್ನು ಇವತ್ತಿಂದಲೇ ಬೇರೆಯ ಥರಾ ನೋಡ್ಕೋಬೇಕು ಎಂಬ ಆಸೆಯಾಗುತ್ತದೆ. ಮಕ್ಕಳಿಗೆ ಅಪ್ಪ-ಅಮ್ಮಂದಿರಿಗಿಂತ ಶಿಕ್ಷಕರೇ ತುಂಬಾ ಇಷ್ಟವಾಗ್ತಾರೆ ಎಂಬ ಇನ್ನೊಂದು ಸತ್ಯವೂ ಗೊತ್ತಾಗುತ್ತದೆ. ಒಂದು ಅಪರೂಪದ, ಅನನ್ಯ ಅನು‘ವ ಪಡೆಯಲಿಕ್ಕಾದರೂ ಮಕ್ಕಳೊಂದಿಗೆ ‘ತಾರೆ ಜಮೀನ್ ಪರ್’ ನೋಡಿ ಬನ್ನಿ.
ಅನುಮಾನವೇ ಬೇಡ. ಥೇಟರಿನಿಂದ ಹೊರಬಂದ ಮೇಲೆ ನೀವು ಬದಲಾಗುತ್ತೀರಿ- ನಿಮ್ಮ ಮಗುವೂ ಬದಲಾಗುತ್ತೆ! ಹಿಂದೆಯೇ ವಾಹ್ ಅಮೀರ್ ಖಾನ್ ಎಂಬ ಸಂ‘ಮದ ಉದ್ಗಾರ ನಕ್ಷತ್ರದಂಥ ಕಂದನಿಂದ ಕೇಳಿಬರುತ್ತದೆ.
ಉಳಿದಂತೆ ಉ‘ಯ ಕುಶಲೋಪರಿ ಸಾಂಪ್ರತ- ನಮಸ್ಕಾರ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: