ಆ ಅಪರಾತ್ರಿಯಲ್ಲೂ ಹಾಲು ತಂದರು!

karanth

ಸಿಟ್ಟು, ಸಿಡಿಮಿಡಿ, ನಿಷ್ಠುರ ಮಾತು ಅಂದಾಕ್ಷಣ ನೆನಪಾಗುವವರು ಶಿವಾಮ ಕಾರಂತ. ಸೆಂಟಿಮೆಂಟ್ ಎಂಬ ಪದಕ್ಕೂ ಕಾರಂತರಿಗೂ ಪರಿಚಯವೇ ಇರಲಿಲ್ಲ ಎಂದು ನಂಬಿದ ಬಹಳ ಮಂದಿ ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಆದರೆ, ನಿಜ ಹೇಳಬೇಕೆಂದರೆ, ಕಾರಂತರ ಮನಸ್ಸಿನಲ್ಲಿ, ಮಾತಿನಲ್ಲಿ, ನಡವಳಿಕೆಯಲ್ಲಿ ಅಮ್ಮನ ಮಮತೆ ಯಾವಾಗಲೂ ಇದ್ದೇ ಇರುತ್ತಿತ್ತು. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ:
ಅದೊಂದು ಸಂದರ್ಭದಲ್ಲಿ ವಿಮರ್ಶಕ ಎಲ್.ಎಸ್. ಶೇಷಗಿರಿರಾವ್ ದಂಪತಿಗಳು ಶಿವರಾಮ ಕಾರಂತರಿದ್ದ ಪುತ್ತೂರಿಗೆ ಹೋದರು. ಒಂದು ರಾತ್ರಿ ಅಲ್ಲಿಯೇ ಉಳಿದುಕೊಂಡರು. ರಾತ್ರಿ ಎರಡು ಗಂಟೆಯ ಹೊತ್ತಿನಲ್ಲಿ ಶೇಷಗಿರಿರಾಯರ ಮಗು ಎದ್ದು ಒಂದೇ ಸಮನೆ ಅಳಲಾರಂಭಿಸಿತು. ಹೇಳಿ ಕೇಳಿ ಹೊಸ ಊರು. ಅದೂ ಏನು? ದೂರ್ವಾಸರಂಥ ಸಿಟ್ಟಿನ ಶಿವರಾಮ ಕಾರಂತರ ಮನೆ. ಅಲ್ಲಿ ಮಧ್ಯ ರಾತ್ರಿಯಲ್ಲಿ ಮಗು ಅಳಲು ಶುರು ಮಾಡಿದರೆ ಹೇಗಾಗಬೇಡ? ಮಗು ಹಾಲಿಗಾಗಿ ಅಳುತ್ತಿದೆ ಎಂದು ಶೇಷಗಿರಿರಾವ್ ದಂಪತಿಗೆ ಅರ್ಥವಾಗಿ ಹೋಯಿತು. ಆದರೆ ಅಪರಾತ್ರಿಯಲ್ಲಿ, ಅಪರಿಚಿತ ಊರಿನಲ್ಲಿ ಹಾಲು ತರುವುದು ಎಲ್ಲಿಂದ? ರಾವ್ ದಂಪತಿಗಳು ಈ ಚಿಂತೆಯಲ್ಲಿದ್ದಾಗಲೇ ಶಿವರಾಮ ಕಾರಂತರಿಗೂ ಎಚ್ಚರವಾಯಿತು. ಅವರು ಪಕ್ಕದಲ್ಲಿದ್ದ ತಮ್ಮ ಮನೆಯಿಂದ ಬಂದು ಕೇಳಿದರು: ‘ಮಗು ತುಂಬಾ ಅಳ್ತಾ ಇದೆಯಲ್ಲ…?’
‘ಹೌದು ಸರ್. ಹಾಲಿಗಾಗಿ ಅಳ್ತಾ ಇದೆ. ಈಗ ತಟ್ಟಿ ಮಲಗಿಸಿಬಿಡ್ತೀವಿ ಸರ್’ ರಾವ್ ದಂಪತಿ ಒಂದು ಸಂಕೋಚದಿಂದಲೇ ಹೇಳಿದರು. ‘ಸರಿ’ ಎಂದ ಕಾರಂತರು ಅಲ್ಲಿಂದ ಮಾಯವಾದರು. ಆನಂತರ ಕೂಡ ಅದೇನೇ ಸರ್ಕಸ್ ಮಾಡಿದರೂ ಮಗುವಿನ ಅಳು ನಿಲ್ಲಲಿಲ್ಲ. ಕಡೆಗೆ ರೋಸಿ ಹೋದ ಶೇಷಗಿರಿರಾಯರು ಎಲ್ಲ ತಾಯ್ತಂದೆಗಳೂ ಮಾಡುವಂತೆ ಮಗುವಿಗೆ ಒಂದೇಟು ಹಾಕಿ ಅದರ ಬಾಯಿ ಮುಚ್ಚಿಸಲು ನೋಡಿದರು.
ಅದೇ ವೇಳೆಗೆ ಹಾಲಿನ ಬಾಟಲಿಯೊಂದಿಗೇ ಅಲ್ಲಿಗೆ ಬಂದ ಶಿವರಾಮ ಕಾರಂತರು- ‘ಅಲ್ರೀ ಶೇಷಗಿರಿರಾವ್, ಮಗೂಗೆ ಯಾಕೆ ಹೊಡೀತೀರಿ? ಅದಕ್ಕೆ ಹಸಿವಾಗಿದೆ. ಮೊದಲು ಹಾಲು ಕುಡಿಸಿ, ತಗೊಳ್ಳಿ’ ಅಂದರು!
ಹೌದು. ಅಳುತ್ತಿರುವ ಮಗುವನ್ನು ಸಂತೈಸಲು ಕಾರಂತರು ಆ ಅಪರಾತ್ರಿಯಲ್ಲಿ ಹೋಗಿ ಹಾಲು ತಂದಿದ್ದರು! ಶಿವರಾಮ ಕಾರಂತರದ್ದು ಅಮ್ಮನ ಮನಸ್ಸು ಎಂಬುದಕ್ಕೆ ಇನ್ಯಾವ ಸಾಕ್ಷಿ ಬೇಕು?

Advertisements

2 Comments »

 1. 1
  Shankar Says:

  ಮಣಿಕಾಂತ್,
  ಕಾರಂತರ ಬಗ್ಗೆ ಎಲ್ಲೊ ನಾನು ಕೇಳಿದ ಇನ್ನೊಂದು ಘಟನೆ …
  ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಿದ್ದ ಕಾರಂತರು ನಿಷ್ಠುರವಾದಿಯೂ ಸಹ ಆಗಿದ್ದರು ಎಂದು ಎಲ್ಲರಿಗೂ ಗೊತ್ತಿದ್ದ ವಿಷಯಷ್ಟೆ, ಜೊತೆಗೆ ಸಮಯಕ್ಕೂ ಸಹ ಬಹಳ ಬೆಲೆ ಕೊಡುತ್ತಿದ್ದರು. ಅವರ ಮನೆಗೆ ಯಾರೆ ಹೋದರೂ, ಕೆಲಸವಾದ ತಕ್ಷಣ, “ನಿಮ್ಮ ಕೆಲಸವಾಯಿತಲ್ಲ ನೀವಿನ್ನು ಹೊರಡಬಹುದು” ಎಂದು ಹೇಳಿಯೆ ಬಿಡುತ್ತಿದ್ದರಂತೆ! ಬೇರಾವ ಕಾಡುಹರಟೆಗೆ ಅವಕಾಶ ಕೊಡದೆ ಕಳಿಸಿ ಬಿಡುತ್ತಿದ್ದರಂತೆ. ಒಮ್ಮೆ ಅವರ ಮನೆಗೆ ದೆಹಲಿಯಿಂದ ಯಾರೊ ಒಬ್ಬರು ಏನೋ ಕಾರ್ಯನಿಮಿತ್ತ ಹೋಗಿದ್ದರಂತೆ. ಹೋಗುವ ಮೊದಲೇ ‘ಈ ಬಾರಿ ಕಾರಂತರು ಹೊರಡಿ ಎಂದು ಹೇಳುವ ಮೊದಲೆ ಅಲ್ಲಿಂದ ಜಾಗ ಖಾಲಿ ಮಾಡಬೇಕು’ ಎಂದು ಮನದಲ್ಲಿ ನಿರ್ಧರಿಸಿದ್ದ ಅವರು, ತಮ್ಮ ಕೆಲಸ ಮುಗಿದ ತಕ್ಷಣ, “ಸರಿ ನಾನಿನ್ನು ಹೊರಡುತ್ತೇನೆ” ಎಂದು ಎದ್ದು ನಿಂತರಂತೆ. ಆಗ ಕಾರಂತರು “ಇರಿ, ದೆಹಲಿಯಲ್ಲಿ ಬಹಳ ಚಳಿ ಅಲ್ವೇ ” ಎಂದು ಮಹಡಿಗೆ ಹೋಗಿ ಒಂದು ಶಾಲನ್ನು ತಂದು ಕೊಟ್ಟರಂತೆ. ಅದನ್ನು ತೆಗೆದುಕೊಂಡ ತಕ್ಷಣ ಅಲ್ಲಿಂದ ಹೊರಡಲು ಆ ಅತಿಥಿಗೆ ಸಂಕೋಚವಾಗಿ ಮತ್ತೆ ನಿಧಾನಕ್ಕೆ ಕೂರಲು ಅನುವಾದಾಗ ಕಾರಂತರು “ಸರಿ ಇನ್ನು ನೀವು ಹೊರಡಬಹುದು” ಎಂದರಂತೆ!

 2. 2
  ಮಣಿಕಾಂತ್ Says:

  ಡಿಯರ್ ಶಂಕರ್….ಕಾರಂತರು ಇದ್ದಿದ್ದೆ ಹಾಗೆ ಜೋರಾಗಿ ಮಳೆಬಂದು ಶಾಂತವಾಗುತ್ತಲ್ಲ ಹಾಗೆ…ಕಾರಂತರ ಇನ್ನೊಂದು ಮುಖವನ್ನ ಪರಿಚಯ ಮಾಡಿಕೊಟ್ಟಿದ್ದೀರಿ ದನ್ಯವಾದ….

  ನಿಮ್ಮ
  ಮಣೀ…


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: