…..ರಾಮನವಮಿ ಉತ್ಸವದಲ್ಲಿ ಅವನು ಕವಿತೆ ಓದುತ್ತಿದ್ದ!

sharukh

ಇವತ್ತು ಬಾಲಿವುಡ್ನ ಬಾದ್ಷಾ ಎಂದು ಖ್ಯಾತಿ ಪಡೆದಿರುವ ಶಾರೂಕ್ ಖಾನ್ ದಿಲ್ಲಿಯವನು ಎಂಬುದು ಬಹುಶಃ ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ. ಅದಕ್ಕಿಂತ ಹೆಚ್ಚಿನ ಸ್ವಾರಸ್ಯದ ಸಂಗತಿ ಎಂದರೆ ಇದೇ ಶಾರೂಕ್ ಖಾನ್ ಚಿಕ್ಕಂದಿನಲ್ಲಿ ಪದ್ಯ ಬರೆಯುತ್ತಿದ್ದ ಮತ್ತು ಆ ಪದ್ಯಗಳನ್ನು ರಾಮನವಮಿ ಉತ್ಸವಗಳಲ್ಲಿ ಓದಿ ಬಹುಮಾನ ಪಡೆಯುತ್ತಿದ್ದ ಎಂಬುದು!
ಎಲ್ಲಿಯ ಶಾರೂಕ್ ಖಾನ್, ಎಲ್ಲಿಯ ಕವಿತೆ, ಇದೆಲ್ಲಿಯ ರಾಮಲೀಲಾ ಉತ್ಸವ ಎಂದು ಬೆರಗಾದಿರಾ? ಆ ಸ್ವಾರಸ್ಯಕರ ಸಂಗತಿಯ ವಿವರಣೆ ಹೀಗಿದೆ, ಕೇಳಿ :
ಶಾರೂಕ್ ಖಾನ್ನ ತಂದೆಯ ಹೆಸರು ಮೀರ್ತಾಜ್ ಮುಹಮ್ಮದ್. ಆತ ವೃತ್ತಿಯಿಂದ ವಕೀಲ. ವಿಪರೀತ ಓದಿಕೊಂಡಿದ್ದ ಮೀರ್, ಬಾಲ್ಯದಿಂದಲೇ ಗಾಲಿಬ್ ಹಾಗೂ ಇಕ್ಬಾಲ್ರ ಗಜಲ್ಗಳನ್ನು ಶಾರೂಕ್ಗೆ ಕೇಳಿಸುತ್ತಿದ್ದರು. ಪೌರಾಣಿಕ ಕಥೆಗಳ ಪ್ರಸಂಗ ಹೇಳಿದ್ದರು. ಹೀಗೆ ಗಜಲ್-ಕತೆಗಳೊಂದಿಗೇ ಬೆಳೆದ ಶಾರೂಕ್ಗೆ ಪದ್ಯ ಬರೆಯುವ ಹುಚ್ಚು ಅಂಟಿಕೊಂಡಿತು. ದಿಲ್ಲಿಯಲ್ಲಿ ಶಾರೂಕ್ನ ಮನೆಯ ಹಿಂದೆಯೇ ರಾಮಲೀಲಾ ಉತ್ಸವವೂ ನಡೆಯುತ್ತಿತ್ತು. ಬಾಲಕ ಶಾರೂಕ್ ದಿನವೂ ಉತ್ಸವಕ್ಕೆ ಹೋಗುತ್ತಿದ್ದ. ಅದೊಮ್ಮೆ ಅಲ್ಲಿನ ಕಾರ್ಯಕ್ರಮ ಆಯೋಜಕರೊಂದಿಗೆ ತನ್ನ ಪದ್ಯಗಳ ಬಗ್ಗೆ ಹೇಳಿಕೊಂಡ.
ರಾಮಲೀಲಾ ಉತ್ಸವದಲ್ಲಿ ಒಬ್ಬ ಮುಸ್ಲಿಂ ಹುಡುಗನಿಂದ ಶಾಯರಿಯಂಥ ಪದ್ಯಗಳನ್ನು ಓದಿಸಿದರೆ ಹೇಗೆ ಎಂಬ ಐಡಿಯಾ ಬಂತು ಪ್ರಾಯೋಜಕರಿಗೆ. ಅವರು ತಡಮಾಡಲಿಲ್ಲ. ಕಾರ್ಯಕ್ರಮದ ಮಧ್ಯೆ ಮೂರ್ನಾಲ್ಕು ನಿಮಿಷದ ಬ್ರೇಕ್ ಸಿಕ್ಕಾಗ – ‘ಈಗ ಲಘು ಮನರಂಜನೆ. ನಮ್ಮ ಹುಡುಗ ಶಾರೂಕ್ ಖಾನ್ನಿಂದ ಕವನ ವಾಚನ’ ಎಂದು ಪ್ರಕಟಿಸಿಯೇಬಿಟ್ಟರು.
ರಾಮಲೀಲಾ ಉತ್ಸವದಲ್ಲಿ ಸಾಬರ ಹುಡುಗ ಪದ್ಯ ಓದುತ್ತಾನೆ ಎಂಬುದೇ ಅವತ್ತಿನ ಮಟ್ಟಿಗೆ ವಿಶೇಷ ಸಂಗತಿ. ಜನ ಇವನನ್ನು ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಶಾರೂಕ್ ಮೈಮರೆತು ಪದ್ಯ ಓದಿದ. ಕೇಳಿದ ಜನ ‘ವಾಹ್’ ಎಂದರು. ವಂಡರ್ ಅಂದರು. ನಂತರ ಸಭೆಯಲ್ಲಿದ್ದ ಇನ್ನೊಬ್ಬರ್ಯಾರೋ ‘ಭಕ್ಷೀಸ್’ ಎಂದು ೫೦೦ ರೂ.ಗಳನ್ನೇ ಕೊಟ್ಟುಬಿಟ್ಟರು. ಕೈಗೆ ಕಾಸು ಬಂದಾಗ ಶಾರೂಕ್ ಖುಷಿಯಿಂದ ಕುಣಿದಾಡಿದ. ಮರುದಿನ ಮತ್ತೊಂದು ಹೊಸ ಪದ್ಯದೊಂದಿಗೆ ಬಂದ. ಅವತ್ತೂ ಬಹುಮಾನ ಪಡೆದ. ಹೀಗೇ, ಒಂದು ತಿಂಗಳ ಕಾಲ ನಡೆಯಿತು!
***
‘ರಾಮನವಮಿ’ ಅಂದಾಗ ನಿಮಗೆ ಏನನ್ನಿಸ್ತದೆ ಎಂದು ಮೊನ್ನೆ ಪತ್ರಕರ್ತರೊಬ್ಬರು ಕೇಳಿದಾಗ ಶಾರೂಕ್ ನಾಸ್ಟಲ್ಜಿಯಾಕ್ಕೆ ಹೋಗಿ ಕೊಟ್ಟ ಉತ್ತರ ಇದು.
ನಿಮಗೆ ಯಾಕೋ ಹೇಳಬೇಕು ಅನ್ನಿಸ್ತು.
-ಮಣೀ

Advertisements

2 Comments »

 1. 1
  Ganesh K Says:

  ಇದನ್ನ ರವಿ ಬೆಳಗೆರೆ ಕೂಡಾ ಒಮ್ಮೆ ಓ ಮನಸೆ ನಲ್ಲಿ ಬರೆದಿದ್ದರು. ಮತ್ತೊಮ್ಮೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು.

  ಸರ್, ನಿಜ ಹೇಳ್ತೀನಿ ನಿಮ್ಮ ಬರಹಗಳ ಶೈಲಿ ಎಷ್ಟೂ ಮೋಹಕವಾಗಿರುತ್ತೆ ಅಂದ್ರೆ, ನಿಮ್ಮ ಬರಹಗಳಿಗಾಗಿ, ಉಭಯ ಕುಶಲೋಪರಿ ಸಾಂಪ್ರಾತಕ್ಕಾಗಿ ಕಾದು ಕುಳಿತುಕೊಳ್ಳುವಷ್ಟು ಮೋಹಿತನಾಗಿದ್ದೇನೆ. ನನ್ನಂಥ ಅನೇಕರಿದ್ದಾರೆ. ನಿಮ್ಮ ಆತ್ಮೀಯ, ಭಾವ ಪೂರಿತ ಬರಹಗಳು ಒಮ್ಮೊಮ್ಮೆ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡುತ್ತವೆ. ಬರಹದ ಸಾರ್ಥಕತೆ ಅಂದ್ರೆ ಇದೇ ಇರ್ಬೇಕಲ್ವಾ..? ನಿಮ್ಮಿಂದ ಹೀಗೇ ಬರಹಗಳು ಬರಲಿ, ಭಾವ ಜೀವಿಗಳಿಗೆ ಒಂದಿಷ್ಟು ಸಾಮಗ್ರಿಗಳನ್ನ ನೀಡಲಿ, ಆತ್ಮೀಯತೆ ಬೆಳೆಸಲಿ ಎಂದು ಬಯಸುವ, ಹಾರೈಸುವ
  ನಿಮ್ಮವ
  ಗಣೇಶ್.ಕೆ

 2. 2
  ಮಣಿಕಾಂತ್ Says:

  ಡಿಯರ್ ಗಣೇಶ್…ನಿಮ್ಮ ಅಭಿಮಾನಪೂರ್ವಕವಾದ ಮಾತುಗಳಿಗೆ ನನ್ನದೊಂದು ಪ್ರೀತಿಯ ಥ್ಯಾಂಕ್ಸ್ ಮತ್ತೆ ಥ್ಯಾಂಕ್ಸ್ ಮತ್ತೆ ಥ್ಯಾಂಕ್ಸ್..:)…ನಿಮ್ಮ ಬ್ಲಾಗಲ್ಲಿ ಆಗಾಗ ಓಡಾಡುತ್ತಿರುತ್ತೀನಿ..ತುಂಬ ನಗು ತರಿಸುತ್ತೆ ನಿಮ್ಮ್ಮ ಪಂಚ್ ಲೈನುಗಳು…

  ಬರವಣಿಗೆ ನಿರಂತರವಾಗಿರಲಿ…

  ಪ್ರೀತಿಯಿಂದ
  ಮಣೀ….


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: