ನಮ್ಮ ರಾಜ್ಕುಮಾರು..!

Rajanna

ಮತ್ತೆ ರಾಜ್ಕುಮಾರ್ ನೆನಪಾಗುತ್ತಿದ್ದಾರೆ.
ನಿಜ ಹೇಳಬೇಕೆಂದರೆ, ಕಳೆದ ಎರಡು ವರ್ಷಗಳ ಅವಯಲ್ಲಿ ಕನ್ನಡಿಗರಿಗೆ ದಿನದಿನವೂ ನೆನಪಾದವರು ಡಾ. ರಾಜ್.ಯಾವುದೋ ಒಂದು ಹಾಡು, ಒಂದು ರಾಗ, ಒಂದು ಸರಸಮಯ ಸಂಭಾಷಣೆ, ಒಂದು ಹೃದಯಂಗಮ ಸನ್ನಿವೇಶ, ಬೆಂಗಳೂರಿನಲ್ಲಿ ನಡೆದ ಯಾವುದೋ ಒಂದು ಹೋರಾಟದ ಮೂಲಕ ನೆನಪಾಗಿಬಿಡುತ್ತಿದ್ದರು/ನೆನಪಾಗಿಬಿಡುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಎಲ್ಲರದೂ ಒಂದೇ ಉದ್ಗಾರ-ನಮ್ಮ ರಾಜಣ್ಣ ಇನ್ನೊಂದಷ್ಟು ದಿನ ನಮ್ಮ ಜತೆಗಿರಬೇಕಿತ್ತು…
ನಿಮಗೂ ಗೊತ್ತಿರಬಹುದು, ಇವತ್ತಿಗೂ ರಾಜ್ ಅವರನ್ನು ಪ್ರೀತಿಸುವ, ಆರಾಸುವ, ಅಭಿಮಾನದಿಂದ ನೋಡುವವರ ಪೈಕಿ ಪುರುಷರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಸಂಖ್ಯೆಯಲ್ಲಿ ಹೆಂಗಸರಿದ್ದಾರೆ. ಇವತ್ತಿನ ಹುಡುಗಿಯರನ್ನು; ಶಾಪಿಂಗ್ ಮಾಡುವುದೇ ಜೀವನ ಎಂದುಕೊಂಡಿರುವ ಗೃಹಿಣಿಯರನ್ನು ಈ ಕಡೆ ಕರೆದು, ನಟರ ಪೈಕಿ ನಿಮಗೆ ಯಾರಿಷ್ಟ ಎಂದು ಕೇಳಿ ನೋಡಿ- ‘ನಮಗೆ ರಾಜ್ಕುಮಾರೇ ಇಷ್ಟ’ ಎನ್ನುವ ಉತ್ತರವೇ ಅವರಿಂದ ಬರುತ್ತದೆ.
ರಾಜ್ ಅವರ ಹೆಚ್ಚುಗಾರಿಕೆ ಇರುವುದೇ ಅಲ್ಲಿ. ಏಕೆಂದರೆ, ಅವರ ಅಭಿನಯದ ಅದೆಷ್ಟೋ ಸಿನಿಮಾಗಳಲ್ಲಿ ನಾಯಕಿಯರು ಸೊಕ್ಕಿನ ಸುಂದರಿಯರಾಗಿರುತ್ತಾರೆ. ಉಡಾಫೆ ಮನೋಭಾವ ಹೊಂದಿರುತ್ತಾರೆ. ನಾನುಂಟು, ಮೂರು ಲೋಕವುಂಟು ಎಂದು ಮೆರೆಯುತ್ತಿರುತ್ತಾರೆ. ಅಂಥ ಸಂದರ್ಭದಲ್ಲೆಲ್ಲ ಆ ಅಮ್ಮಣ್ಣಿಯರ ಸೊಕ್ಕು ಮುರಿಯುವ, ಅವರಿಗೆ ಬುದ್ಧಿ ಕಲಿಸುವ, ಏಯ್, ಹೋಗೆ, ಹೋಗೆ ಎಂದು ಆವಾಜ್ ಹಾಕುವ ಕಡೆಗೊಮ್ಮೆ ಅವರನ್ನು ಒಲಿಸಿಕೊಳ್ಳುವ ಪಾತ್ರ ರಾಜ್ಕುಮಾರ್ದು. ಅದಕ್ಕೆ ಉದಾಹರಣೆಯಾಗಿ, ಒಂದು ‘ಸಂಪತ್ತಿಗೆ ಸವಾಲ್’, ಒಂದು ‘ಬಹದ್ದೂರ್ ಗಂಡು’ ಅಥವಾ ‘ವಸಂತಗೀತ’ ಸಿನಿಮಾವನ್ನು ಉದಾಹರಿಸಬಹುದು. ವಿಶೇಷವೆಂದರೆ, ನಾಯಕಿಯರ ಅಹಮಿಕೆ ಇಳಿಸುವ ಹೀರೊ ಆಗಿ ರಾಜ್ ಮೆರೆದಾಗಲೆಲ್ಲ ಹುಡುಗಿಯರೂ ಚಪ್ಪಾಳೆ ಹೊಡೆಯುತ್ತಿದ್ದರು. ‘ಏನ್ ಮಾಕು ನೋಡ್ರೇ ಅವಳಿಗೇ’ ಎಂದು ಕಾಮೆಂಟ್ ಮಾಡುತ್ತಾ ಹೀರೊ ಪರ ಮಾತಾಡುತ್ತಿದ್ದರು! ನಾಯಕಿಯ ಪರ ಹೆಂಗಸರ್ಯಾರೂ ಮಾತೇ ಆಡುತ್ತಿರಲಿಲ್ಲವಲ್ಲ ಯಾಕೆ ಅಂದರೆ- ಅವರ ಕಲ್ಪನೆಯ ಹೀರೊ ರಾಜ್ಕುಮಾರ್ ರೂಪದಲ್ಲಿಯೇ ತೆರೆಯ ಮೇಲೆ ಬಂದಿರುತ್ತಿದ್ದ!
ಒಬ್ಬ ವ್ಯಕ್ತಿಯಾಗಿ ರಾಜ್ ಅವರನ್ನು ತುಂಬ ಹತ್ತಿರದಿಂದ ಕಂಡವರು ಕಡಿಮೆ. ಆದರೆ, ಒಂದು ಪಾತ್ರವಾಗಿ ಇಡೀ ಚಿತ್ರರಂಗವನ್ನೇ ಕಾಡಿದವರು ರಾಜ್. ಇವತ್ತಿಗೂ ಸತ್ಯ ಹರಿಶ್ಚಂದ್ರ, ಮಯೂರ, ಬಬ್ರುವಾಹನ, ಪುರಂದರದಾಸರು, ಕನಕದಾಸರು, ಸಂತ ತುಕಾರಾಮ, ಕವಿ ಕಾಳಿದಾಸ… ಮುಂತಾದವರು ‘ಹೀಗೆಯೇ ಇದ್ದರು’ ಎಂದು ಹೇಳಲಾಗುವುದಿಲ್ಲ. ಆದರೆ ಆ ಎಲ್ಲರೂ ಹೇಗಿದ್ದಿರಬಹುದು ಎಂದು ಕಲ್ಪಿಸಿಕೊಂಡಾಗ ಮಾತ್ರ ಕಣ್ಣೆದುರು ರಾಜ್ಕುಮಾರ್ ಚಿತ್ರವೇ ಬಂದು ನಿಲ್ಲುತ್ತದೆ. ನಿಜಕ್ಕೂ ಶ್ರೀ ಕೃಷ್ಣದೇವರಾಯ ಸ್ವಲ್ಪ ಕುಳ್ಳಕ್ಕಿದ್ದ. ಸ್ವಲ್ಪ ಡುಮ್ಮಣ್ಣನ ಥರಾ ಇದ್ದ. ಆತನ ಮುಖದಲ್ಲಿ ಅಲ್ಲಲ್ಲಿ ಸಿಡುಬಿನ ಕಲೆಗಳಿದ್ದವು ಎನ್ನುತ್ತದೆ ಇತಿಹಾಸ. ಆದರೆ ಕೃಷ್ಣದೇವರಾಯ ಯಾವುದೇ ಕಾರಣಕ್ಕೂ ಹಾಗಿರಲಿಲ್ಲ. ಆತ ಥೇಟ್ ನಮ್ಮ ರಾಜಕುಮಾರ್ ಥರಾನೇ ಇದ್ದ ಎಂದು ವಾದ ಹೂಡುತ್ತದೆ ಮನಸ್ಸು. ಈ ಮಾತು ಅತ್ಲಾಗಿರಲಿ. ರಾಜ್ ಅಲ್ಲದ ಬೇರೊಂದು ಮುಖದ ಹರಿಶ್ಚಂದ್ರನನ್ನೋ, ಕವಿ ಕಾಳಿದಾಸನನ್ನೋ, ಮಯೂರವರ್ಮನನ್ನೋ, ಗಂಧದ ಗುಡಿಯ ‘ನಾವಾಡುವ ನುಡಿಯೇ’ ಹಾಡನ್ನೋ ಸುಮ್ಮನೇ ಕಲ್ಪಿಸಿಕೊಳ್ಳಿ ನೋಡೋಣ…
***
ನೆನಪು ಮಾಡಿಕೊಂಡರೆ ಇವತ್ತಿಗೂ ಬೆರಗಾಗುತ್ತದೆ. ಒಬ್ಬ ಹೀರೊ ಒಂದೆರಡು ವರ್ಷಗಳ ಕಾಲ ಸ್ಟಾರ್ವ್ಯಾಲ್ಯೂ ಉಳಿಸಿಕೊಳ್ಳೋದು. ಕಷ್ಟ, ಹಾಗಿರುವಾಗ ಗಾಂನಗರದ ಎಲ್ಲ ಚಿಲ್ಲರೆತನದಿಂದಲೂ ಮೈಲು ದೂರವಿದ್ದ ಡಾ. ರಾಜ್, ಒಂದೆರಡಲ್ಲ ಐವತ್ತೂ ಚಿಲ್ಲರೆ ವರ್ಷಗಳ ಕಾಲ ಕನ್ನಡ ಚಿತ್ರರಂಗದ ಸೂಪರ್ಸ್ಟಾರ್ ಆಗಿಯೇ ಮೆರೆದರಲ್ಲ? ಸಾಧನೆಯ ಶಿಖರದಲ್ಲಿ ಹತ್ತಿ ಕುಳಿತಾಗಲೂ ಅದೇ ಹಳ್ಳಿ ಹೈದನ ಅಮಾಯಕತೆ ಉಳಿಸಿಕೊಂಡರಲ್ಲ? ಅಭಿಮಾನಿಗಳಲ್ಲಿಯೇ ದೇವರನ್ನು ಕಂಡರಲ್ಲ? ಕನ್ನಡಕ್ಕೆ ಕಷ್ಟ ಬಂದಾಗಲೆಲ್ಲ ‘ನಾನಿರುವುದೇ ನಿಮಗಾಗಿ’ ಎಂಬ ಒಂದೇ ಹಾಡಿನಿಂದ ಹೋರಾಟದ ಕಿಚ್ಚು ಹಚ್ಚುತ್ತಿದ್ದರಲ್ಲ? ಓದಿದ್ದು ಬರೀ ಮೂರನೇ ತರಗತಿಯಾದರೂ, ಪ್ರತಿ ಸಿನಿಮಾದಲ್ಲೂ ಸಮಾಜಕ್ಕೆ ಒಂದೇ ಸಂದೇಶವಿರಲಿ ಎಂದು ಯೋಚಿಸುತ್ತಿದ್ದರಲ್ಲ? ನಿರ್ಮಾಪಕರೇ ನಮ್ಮ ಅನ್ನದಾತರು ಎಂದು ಕಡೆಯ ತನಕ ಹೇಳಿದರಲ್ಲ? ಅಭಿಮಾನಿಗಳ ಮೆರೆದಾಟ ಕಂಡಾಗಲೆಲ್ಲ ಮಗುವಿನಂತೆ ಕೈ ಮುಗೀತಿದ್ದರಲ್ಲ? ಬರೀ ಕನ್ನಡದಲ್ಲಿ ನಟಿಸಿಯೇ ಇಡೀ ಜಗತ್ತಿನ ಗಮನ ಸೆಳೆದರಲ್ಲ? ಖಚಿರಿ is gಡಿeಚಿಣ ಚಿಟಿಜ gಡಿeಚಿಣesಣ ಅನ್ನಲು ಇಷ್ಟು ಸಾಕಲ್ಲವೆ?
ಸುಳ್ಳಲ್ಲ, ರಾಜ್ ಇಲ್ಲದೆ ನಾಡು ಬಡವಾಗಿದೆ. ಕನ್ನಡಮ್ಮ ತಬ್ಬಲಿಯಾಗಿದ್ದಾಳೆ. ರಾಜಣ್ಣನ ಸ್ಥಾನ ತುಂಬುವುದು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಈ ಎರಡು ವರ್ಷದಲ್ಲಿ ಇನ್ನೂರು ಬಾರಿಯಾದರೂ ಮತ್ತೆ ಮತ್ತೆ ಸಾಬೀತಾಗಿದೆ. ನಿಜ ಹೇಳಲಾ? ರಾಜ್ ಇವತ್ತು ನಮ್ಮೊಂದಿಗಿದ್ದಿದ್ದರೆ- ‘ಹೊಗೇನಕಲ್ ವಿವಾದ’ದಲ್ಲಿ ನಾವು ಸೋಲುತ್ತಿರಲಿಲ್ಲ. ಅಣ್ಣಾವ್ರು ಇದ್ದಾರೆ ಎಂಬ ಒಂದೇ ಒಂದು ಕಾರಣದಿಂದ ಆ ರಜನಿಕಾಂತ್ ಪ್ರತಿಭಟನೆಗೇ ಬರುತ್ತಿರಲಿಲ್ಲ. ಗಡಿ ವಿಷಯವಾಗಿ ಮರಾಠಿ ಪುಂಡರು ಅಬ್ಬರಿಸಿದಾಗ-ದೇವರಾಣೆಗೂ ರಾಜ್ ಸುಮ್ನೆ ಇರುತ್ತಿರಲಿಲ್ಲ. ಹಾಗೆಯೇ ‘ಭಕ್ತ ಅಂಬರೀಷ’ ಬೇಕು ಅಂದರೆ, ಅವರು ನಿರಾಕರಣೆಯ ಮಾತಾಡುತ್ತಿರಲಿಲ್ಲ. ಹೋರಾಟವನ್ನೇ ಮರೆತವರಂತೆ ಕನ್ನಡಿಗರು ಮೂಲೇಲಿ ಕೂರುತ್ತಿರಲಿಲ್ಲ.
ಒಂಥರಾ ಹೆಮ್ಮೆಯಿಂದಾನೇ ಹೇಳ್ತಿದೀನಿ. ನಾನೂ ಕೂಡ ರಾಜ್ಕುಮಾರ್ ಅಭಿಮಾನಿ. ಅವರಂತೆ ನನ್ನನ್ನು ಕಾಡಿದ ನಟ ಇನ್ನೊಬ್ಬನಿಲ್ಲ. ಹಳೇ ಕಾಲದ ಮಂಜುಳಾನೋ, ಲೀಲಾವತಿಯೋ, ಆರತಿಯೋ, ಈಚೀಚಿನ ಐಶ್ವರ್ಯ ರೈಯೋ, ದೀಪಿಕಾ ಪಡುಕೋಣೆನೋ ನನಗೆ ಗ್ರೇಟ್ ಅನ್ನಿಸಲೇ ಇಲ್ಲ. ನಟನೆಯ ವಿಷಯದಲ್ಲಿ, ವಿನಯದ ವಿಚಾರದಲ್ಲಿ ಹೀರೊ ನಂಬರ್ ಒನ್ ಅಂದುಕೊಂಡಾಗಲೆಲ್ಲ ರಾಜಣ್ಣನೇ ನೆನಪಾಗ್ತಾರೆ. ಒಂದು ವೇಳೆ ರಾಜ್ ಇವತ್ತು ಇದ್ದಿದ್ರೆ- ನಾನು ಅವರ ಮುಂದಿರುತ್ತಿದ್ದೆ. ಆ ಗಿಜಿಗಿಜಿ ಜನಸಂದಣಿಯ ಮಧ್ಯೆಯೇ ಅದು ಹೇಗೋ ಹೋಗಿ ಹ್ಯಾಪಿ ಬರ್ತ್ ಡೇ ಟು ಯೂ ಅಂದಿರುತ್ತಿದ್ದೆ! ಹಿಂದೆಯೇ ‘ನನ್ನ ಹೆಸ್ರು ಪೂರ್ವಿ’ ಅಂದಿರುತ್ತಿದ್ದೆ. ಮರುಕ್ಷಣವೇ ಅಣ್ಣಾವ್ರು – ‘ನಿನ್ನ ಹೆಸ್ರು ಚೆನ್ನಾಗಿದೆ ಕಂದಾ, ನಿನ್ನ ಥರಾನೇ’ ಅನ್ನುತ್ತಿದ್ದರು. ನನ್ನೊಂದಿಗೆ ಫೋಟೊಗೆ ನಿಲ್ಲುತ್ತಿದ್ದರು. ಸಿಹಿ ತಿನ್ನಿಸುತ್ತಿದ್ದರು. ಅದನ್ನೆಲ್ಲ ಸುಮ್ಮನೇ ಕಲ್ಪಿಸಿಕೊಂಡು ಹೇಳ್ತಿದೀನಿ- ಅಣ್ಣಾ, ನೀವು ಜತೆಗಿರಬೇಕಿತ್ತು…. ಅದ್ಸರಿ, ಓದ್ತಾ ಓದ್ತಾನೇ ನೀವ್ಯಾಕೆ ಸಪ್ಪಗಾಗಿಬಿಟ್ರಿ?

Advertisements

1 Comment »

  1. 1
    vasus Says:

    ಏರಿದವನು ಚಿಕ್ಕವನಿರಲೇಬೇಕೆಂದು ನಿಜಜೀವನದಲ್ಲಿ ಸಾಧಿಸಿ ತೋರಿಸಿದವರು ಅಣ್ಣಾವ್ರು. ಆ ಮಟ್ಟದ ಸಾಧನೆ, ಜನಪ್ರಿಯತೆ ಮತ್ತೊಬ್ಬರಿಂದ ಅಸಾಧ್ಯ. ವೀರಪ್ಪನ್ ಜೊತೆ ೧೦೦ ದಿನ ಕಷ್ಟದ ಜೀವನ ನಡೆಸಿದರೂ ಅವನ ಬಗ್ಗೆ ಒಂದು ಕೆಟ್ಟ ಮಾತು, ಅಸಹ್ಯದ ಮಾತು ಆಡಿದವರಲ್ಲ. ಅದೇನೋಡಿ ನಮ್ಮ ರಜನೀಕಾಂತನ್ನ. ತಾನು ಮೂಲತಃ ಕನ್ನಡಿಗನಾಗಿದ್ದರೂ, ತಮಿಳರಿಂದ ಚಪ್ಪಾಳೆ ಗಿಟ್ಟಿಸಲು, ಕನ್ನಡ ಹೋರಾಟಗಾರರನ್ನು ಒದೀರಿ ಎಂದು ಹೇಳಿದ ಮಹಾನುಭಾವ!

    “ಒಳ್ಳೆಯತನ” ವನ್ನು ಅಭಿನಯಿಸಲು ಸಾಧ್ಯ ಇಲ್ಲ. ಅದು ತನ್ನ ಒಳಗೆ ಇದ್ದರೆ ಮಾತ್ರ ಅಂತಹ ಗ್ರೇಟ್ ಪಾತ್ರಗಳನ್ನು ಅಭಿನಯಿಸಲು ಸಾಧ್ಯ.

    ರಜನೀಕಾಂತ್ ಮತ್ತು ಅಣ್ಣಾವ್ರ ಸಿನಿಮಾಗಳಿಗೂ ಹೋಲಿಸಿ ನೋಡಿ. ರಜನೀಕಾಂತ್ ಪಾತ್ರಗಳು, ಮಾತುಗಳು ಕೇವಲ ಅಮಾಯಕ ಜನರಿಂದ ಚಪ್ಪಾಳೆ ಗಿಟ್ಟಿಸಲು ಸೃಷ್ಟಿಯಾದಂತವು. ಅಣ್ಣಾವ್ರ ಪಾತ್ರಗಳು ತನ್ನನ್ನು ತಾನು ಶೋಧಿಸಿಕೊಳ್ಳಲು ಆದಂತವು. “ಕಾಮನ ಬಿಲ್ಲು” ಸಿನಿಮಾದ ಪಾತ್ರವನ್ನೊಮ್ಮೆ ಯೋಚಿಸಿ ನೋಡಿ.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: