ತುಂಬ ಸಂತೋಷದಿಂದ ಇರೋರು ಯಾರು ಗೊತ್ತ?

ದುಡ್ಡಿದ್ದವರು; ಹತ್ತು ಮಂದಿ ಮೆಚ್ಚುವಂಥ ರೂಪು ಹೊಂದಿದವರು, ಅಕಾರದ ಅಮಲಿನಲ್ಲಿ ಹೊರಳಾಡುವವರು ಮತ್ತು ಸೆಕ್ಸ್ನ ಮತ್ತಿನಲ್ಲೇ ಸದಾ ಬದುಕುವವರು-ದಿನದ ಕ್ಷಣಕ್ಷಣವೂ ವಿಪರೀತ ಸಂತೋಷದಿಂದ ಇರುತ್ತಾರೆ ಎಂಬುದು ಜನಸಾಮಾನ್ಯರೆಲ್ಲರ ನಂಬಿಕೆ. ಅದೇ ಕಾರಣದಿಂದ ನಾವೆಲ್ಲ-ಅವನು ಅನಿಲ್ ಅಂಬಾನಿಗೆ ಏನಿದೇರೀ ಚಿಂತೇ? ಲಾಭದ ಹೆಸರಲ್ಲಿ ದಿನಕ್ಕೆ ಕೋಟಿಗಟ್ಟಲೆ ದುಡ್ಡು ಅವನ ಪಾದಕ್ಕೆ ಬಂದು ಬೀಳುತ್ತೆ. ಹಾಗಾಗಿ ಅವನು ಸದಾ ತುಂಬಾ ಸಂತೋಷದಿಂದ ಆರಾಂ ಇರ್ತಾನೆ ಅಂದಿರುತ್ತೇವೆ. ಇಲ್ಲವಾದರೆ-ಸಖತ್ ಸಂತೋಷದಿಂದ ಇರೋಳು ಅಂದ್ರೆ ಐಶ್ವರ್ಯಾ ರೈ ಕಣ್ರಿ. ಐಶ್ವರ್ಯ ಅಂದ್ರೆ ಸುಮ್ನೇನಾ? ವಿಶ್ವಸುಂದರಿ ಅಲ್ವ ಅವಳು? ಇಡೀ ಜಗತ್ತೇ ಅವಳ ಒಂದು ಮುದ್ದು ನಗುವಿಗಾಗಿ ಕಾದು ಕೂತಿರುತ್ತೆ. ಅಂಥವಳಿಗೆ ಸಂತೋಷ ಇಲ್ಲ ಅಂದ್ರೆ ಅದನ್ನು ದೇವರೂ ನಂಬಲಾರ ಅಂದುಬಿಡುತ್ತೇವೆ.
ಇದೇ ಥರದ ಮಾತನ್ನು ನಾವೆಲ್ಲ ಆಗೊಮ್ಮೆ-ಈಗೊಮ್ಮೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಬಗೆಗೂ ಹೇಳುತ್ತಿರುತ್ತೇವೆ. ‘ನನ್ಮಗ ಅವನಿಗೇನ್ರಿ ಕಡಿಮೆ ಆಗಿರೋದು? ಕಾಸಿಲ್ವ? ಅಕಾರ ಇಲ್ವ? ಮಜ ಉಡಾಯಿಸೋಕೆ ಹುಡುಗೀರಿಲ್ವ? ಎಲ್ಲ ಇದೆ. ಮಿಗಿಲಾಗಿ ಇಡೀ ಜಗತ್ತಿನ ಜುಟ್ಟೇ ಅವನ ಕೈಲಿದೆ. ಅದೇ ಕಾರಣದಿಂದ ಆರಾಮಿರ್ತಾನೆ ಬಿಡಿ…’
ಇಷ್ಟು ಬಿಟ್ಟರೆ- ಹಣ, ಅಕಾರ, ರೂಪಿನ ನಂತರ ಸೆಕ್ಸ್ನ ಖುಷಿಯಲ್ಲಿ ತೇಲುವವನೇ ಜಗತ್ತಿನ ಸುಖೀ ಪುರುಷ ಎಂಬುದು ನಮ್ಮ ಒಕ್ಕೊರಲ ಅಭಿಪ್ರಾಯವೂ ಆಗಿರುತ್ತದೆ. ಹೌದಲ್ಲವೆ?
ಆದರೆ, ನಿಮಗೆ ಹೇಳಲೇಬೇಕಾದ ಮಾತೊಂದಿದೆ, ಕೇಳಿ. ಏನೆಂದರೆ- ‘ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದ ಇರುವ ವ್ಯಕ್ತಿ ಯಾರು?’ ಎಂಬ ವಿಷಯವಾಗಿ ಲಂಡನ್ನಿನ ನಿಯತಕಾಲಿಕವೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತು. ಆಗ ಬಂದ ಉತ್ತರಗಳಲ್ಲಿ ಅತ್ಯಂತ ಸಂತೋಷದಲ್ಲಿರುವ ವ್ಯಕ್ತಿಗಳನ್ನು ಹೀಗೆ ಪಟ್ಟಿ ಮಾಡಲಾಗಿತ್ತು.
೧. ಕಲಾಕೃತಿಯನ್ನು ಬರೆದು ಮುಗಿಸಿದ ಬಳಿಕ ಶಿಳ್ಳೆ ಹಾಕುತ್ತಿರುವ ಕಲಾವಿದ.
೨. ಮರಳಲ್ಲಿ ಮನೆ ಕಟ್ಟಿ ಖುಷಿಯಿಂದ ಕುಪ್ಪಳಿಸುತ್ತಿರುವ ಮಗು.
೩. ಮಗುವಿಗೆ ಸ್ನಾನ ಮಾಡಿಸುತ್ತಿರುವ ಅಮ್ಮ.
೪. ರೋಗಿಯೊಬ್ಬನನ್ನು ಬದುಕಿಸಲು ಹೆಣಗಾಡಿ ಕಡೆಗೂ ಯಶಸ್ವಿಯಾದ ವೈದ್ಯ!
ಯಾವತ್ತೂ ಅಷ್ಟೆ, ರೂಪ, ಹಣ, ಅಕಾರ ಮತ್ತು ಸೆಕ್ಸ್ನಿಂದ ಅಂಥ ಸಂತೋಷ ಸಿಗೋದಿಲ್ಲ. ಈಗಾದ್ರೂ ಒಪ್ತೀರ ತಾನೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: