ಆ ವರ್ಷ ಮಾತ್ರ ಪರೀಕ್ಷೆ ಬರೆಯದವರೂ ಪಾಸ್ ಆದರು!

exam

ಓದುವವರೆಲ್ಲ ಅಷ್ಟೆ , ವರ್ಷದ ಕೊನೆಯಲ್ಲಿ ಪರೀಕ್ಷೆ ಬರೆಯಬೇಕು. ಆ ಪರೀಕ್ಷೆಯಲ್ಲಿ ‘ಪಾಸ್’ ಆದರೆ ಮಾತ್ರ ಮುಂದಿನ ತರಗತಿಗೆ ಪ್ರವೇಶ. ಇಲ್ಲವಾದರೆ ಹಿಂದಿನ ತರಗತಿಯಲ್ಲೇ ಇನ್ನೊಂದು ವರ್ಷ ಕಳೆಯಬೇಕು. ಇದು ನಮ್ಮ ಶಿಕ್ಷಣ ಪದ್ಧತಿಯ ನಿಯಮ; ವಿ-ವಿಧಾನ.
ಆದರೆ, ೧೯೪೭ರಲ್ಲಿ; ಅದೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷದಲ್ಲಿ ಬಹಳಷ್ಟು ಕಡೆಗಳಲ್ಲಿ ವಾರ್ಷಿಕ ಪರೀಕ್ಷೆಗಳೇ ನಡೆಯಲಿಲ್ಲ. ನಡೆದರೂ, ಪರೀಕ್ಷೆಗಳಿಗೆ ಹಲವು ಹೋಗಲೇ ಇಲ್ಲ. ಆದರೆ ಶಾಲೆಗೆ ಹೋಗುತ್ತಿದ್ದವರನ್ನೆಲ್ಲ ಪರೀಕ್ಷೆ ಬರೆಯದಿದ್ದರೂ; ಪರೀಕ್ಷೆಗಳೇ ನಡೆಯದಿದ್ದರೂ ಪಾಸು ಮಾಡಲಾಗಿತ್ತು!
ಸ್ವಾರಸ್ಯವೆಂದರೆ, ಹೀಗೆ ಮಾಡಿದ್ದಕ್ಕೆ ಯಾರೊಬ್ಬರ ಕಡೆಯಿಂದಲೂ ಆಕ್ಷೇಪ ವ್ಯಕ್ತವಾಗಲಿಲ್ಲ. ಬದಲಿಗೆ, ಎಲ್ಲರಿಂದಲೂ ಮೆಚ್ಚುಗೆಯೇ ವ್ಯಕ್ತವಾಯಿತು. ಇಷ್ಟಕ್ಕೂ ೧೯೪೭ರಲ್ಲಿ ಪರೀಕ್ಷೆಗಳು ಏಕೆ ನಡೆಯಲಿಲ್ಲ? ಪರೀಕ್ಷೆ ಬರೆಯದವರನ್ನೆಲ್ಲ ಏಕೆ ಪಾಸ್ ಮಾಡಲಾಯಿತು ಎಂಬುದಕ್ಕೆ ಶಿಕ್ಷಣ ಇಲಾಖೆಯವರು ಹೀಗೆ ಸಮಜಾಯಿಷಿ ನೀಡಿದರು:
೧೯೪೭ರಲ್ಲಿ ಸ್ವಾತಂತ್ರ್ಯ ಚಳವಳಿ ಪರಾಕಾಷ್ಠೆಯ ಹಂತ ತಲುಪಿತ್ತು. ಆ ಹೋರಾಟದಲ್ಲಿ ಅಧ್ಯಾಪಕರೆಲ್ಲ ಭಾಗವಹಿಸಿದ್ದರು. ಹಾಗಾಗಿ ಅವರಿಗೆ ಪಾಠ ಮಾಡಲು ಸಾಧ್ಯವಾಗಲಿಲ್ಲ. ಅಧ್ಯಾಪಕರೇ ಪಾಠ ಮಾಡದ ಮೇಲೆ ವಿದ್ಯಾರ್ಥಿಗಳು ಓದುವುದು ಹೇಗೆ? ವಿಷಯ ಅರ್ಥ ಮಾಡಿಕೊಳ್ಳುವುದು ಹೇಗೆ? ಇದೇ ಕಾರಣದಿಂದ ಅದೆಷ್ಟೋ ಮಂದಿ ಪರೀಕ್ಷೆ ಬರೆಯಲಿಲ್ಲ!
ಬಹುಶಃ ಪರೀಕ್ಷೆ ಬರೆಯದವರೂ ಪಾಸ್ ಆಗಿರುವುದು ದೇಶದ ಇತಿಹಾಸದಲ್ಲಿ ಅದೊಂದೇ ಬಾರಿ ಇರಬಹುದೇನೋ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: