ದೇವರ ಕಡೆಯವರು ಮತ್ತು ಮಂಗನ ಕಡೆಯವರು!

ಗಂಡ-ಹೆಂಡಿರ ಮಧ್ಯೆ ಜಗಳವಾ೨ಗಿತ್ತು.
ಹೆಂಡತಿ ಒಂದಿಷ್ಟು ಜಾಸ್ತಿಯೇ ರಾಂಗ್ ಆಗಿದ್ದಳು. ಈ ಸಂದರ್ಭದಲ್ಲಿ ಗಂಡನ ಮನೆಯವರೆಲ್ಲ ಆತನ ಬೆನ್ನಿಗೇ ನಿಂತದ್ದು, ಇವಳ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಹೆಂಡತಿ ಯನ್ನು ಎದುರು ಹಾಕಿ ಕೊಂಡು ಬದುಕುವು ದುಂಟೆ? ಅದೇ ಕಾರಣದಿಂದ ಅವಳೊಂದಿಗೆ ರಾಜಿ ಮಾಡಿ ಕೊಳ್ಳಲು ಪತಿರಾಯ ಮುಂದಾಗಿದ್ದ. ಆದರೆ ಹೆಂಡತಿ ಮೂತಿ ತಿರುಗಿಸಿ ಮುಂದೆ ಹೋಗಿದ್ದಳು.
ಪರಿಸ್ಥಿತಿ ಹೀಗಿತ್ತಲ್ಲ-ಅದೇ ಸಂದರ್ಭದಲ್ಲಿ ಐದನೇ ತರಗತಿಯಲ್ಲಿದ್ದ ಮಗಳಿಗೆ ಒಂದು ಪ್ರಶ್ನೆ ಹುಟ್ಟಿಕೊಂಡಿತು. ಆಕೆ ಅಮ್ಮನ ಮುಂದೆ ನಿಂತು-‘ಮಮ್ಮಿ, ಮಮ್ಮಿ, ಈ ಭೂಮಿ ಮೇಲೆ ಮನುಷ್ಯ ಬಂದದ್ದು ಹೇಗೆ?’ ಎಂಬ ಗಂಭೀರ ಪ್ರಶ್ನೆ ಕೇಳಿದಳು. ತಕ್ಷಣವೇ ಅಮ್ಮನಿಗೆ ಆಡಂ ಮತ್ತು ಈವ್ರ ಕತೆ ನೆನಪಾ ಯಿತು. ತಕ್ಷಣವೇ- ‘ನೋಡು ಮಗಳೇ, ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು ಇದು. ಆಗ ಆಡಂ, ಈವ್ ಅಂತ ಇದ್ರಂತೆ. ಅವರಿಗೆ ಪಾಪು ಬೇಕು ಅನ್ನಿಸ್ತಂತೆ. ತಕ್ಷಣ ದೇವರನ್ನು ಬೇಡಿಕೊಂಡ ರಂತೆ. ದೇವರು, ಒಂದು ಸೇಬಿನ ಹಣ್ಣು ಕೊಟ್ಟು, ಇದನ್ನು ತಿನ್ನಿ ಅಂದನಂತೆ. ಆಮೇಲೆ ದೇವರ ವರದಿಂದ ಅವರಿಗೆ ಮಗುವಾಯಿತಂತೆ. ಮುಂದೆ, ದೇವರ ಕಾಣಿಕೆ ಅಂತಾನೇ ಇಷ್ಟೆಲ್ಲ ಜನ ಆಗಿಬಿಟ್ರಂತೆ…’ ಎಂದು ತನಗೆ ತಿಳಿದಂತೆ ಹೇಳಿದಳು.
ಎಷ್ಟೇ ಆಗಲಿ ಮಗು ಅಲ್ಲವೆ? ಅದಕ್ಕೆ ಕೆಟ್ಟ ಕುತೂಹಲ. ಈ ಪ್ರಶ್ನೆಗೆ ಅಪ್ಪ ಏನೆನ್ನಬಹುದು ಎಂಬುದೇ ಅವಳ ಪ್ರಶ್ನೆ. ಹಾಗೆಂದೇ ಅವತ್ತೇ ಸಂಜೆ ಅಪ್ಪನ ಮುಂದೆ ನಿಂತು- ‘ಪಪ್ಪ, ಪಪ್ಪ, ಭೂಮಿ ಮೇಲೆ ಮನುಷ್ಯ ಹೇಗೆ ಸೃಷ್ಟಿಯಾದ?’ ಎಂದು ಕೇಳಿತು.
ಅಪ್ಪ, ಸೈನ್ಸ್ ಸ್ಟೂಡೆಂಟ್ ಆಗಿದ್ದವನು! ಮಗಳಿಗೆ ವಿಜ್ಞಾನದ ಕೌತುಕ ವಿವರಿಸಬೇಕು ಅನ್ನಿಸ್ತು. ಇದು ಒಳ್ಳೆಯ ಸಂದರ್ಭ ಅಂದುಕೊಂಡು-ಮಂಗನಿಂದ ಮಾನವ ಆದ ಕತೆಯನ್ನು ವಿವರಿಸಿ ಹೇಳಿದ. ನಂತರ, ಮಗಳಿಗೆ ಖುಷಿಯಾಗಲಿ ಅಂತ-‘ನಾವೆಲ್ಲ ಮೊದಲು ಕೋತಿಗಳ ಥರಾನೇ ಆಡ್ತಿದ್ದವರು. ಈಗಲೂ ಒಂದೊಂದ್ಸಲ ಹಾಗೇ ಆಡ್ತೀವಿ ಅಲ್ವ’ ಅಂದ!
ಈ ಮಗುಗೆ ಕನ್ಫ್ಯೂಸ್ ಆಯಿತು. ಅದು ಅಡುಗೆ ಮನೆಗೆ ಬಂದು, ಅಮ್ಮನೆದುರು ನಿಂತು ಹೇಳಿತು: ‘ಹೋಗಿ, ಮಮ್ಮಿ, ಒಬ್ಬೊಬ್ರು ಒಂದೊಂದು ಥರಾ ಹೇಳ್ತೀರ. ನೀನು ನೋಡಿದ್ರೆ, ಮನುಷ್ಯರೆಲ್ಲ ದೇವರ ಕಡೆಯಿಂದ ಬಂದವರು ಅಂತೀಯ. ಪಪ್ಪನ್ನ ಕೇಳಿದ್ರೆ-ಮಂಗನಿಂದ ಮಾನವ ಅಂತಾರೆ. ಈ ಎರಡರಲ್ಲಿ ಯಾವುದು ಸರಿ?’
ಗಂಡನಿಗೆ ಬಿಸಿ ಮುಟ್ಟಿಸಲು ಇದೇ ಸರಿಯಾದ ಸಮಯ ಅಂದುಕೊಂಡ ಹೆಂಡತಿ ಹೀಗೆಂದಳು: ‘ಎರಡು ಉತ್ತರಾನೂ ಸರಿ ಕಣೆ. ನಿಮ್ಮ ಅಪ್ಪನ ಕಡೆಯವರೆಲ್ಲ ಕೋತಿ ಕಡೆಯಿಂದ ಬಂದವರು. ನಮ್ಮ ಫ್ಯಾಮಿಲಿಯ ಜನರೆಲ್ಲ ದೇವರ ಕಡೆಯಿಂದ ಬಂದವರು…!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: