ದೊರೆ ಮಗನಂಥ ಕಾರು ಮತ್ತು ಲಂಕೇಶ್…

namma ynk

ಮೊದಲ ಬಾರಿಗೆ ಕಾರ್ ಖರೀದಿಸಿದಾಗ ಹೇಗೆನ್ನಿಸಿತು? ‘ಈ ಪ್ರಶ್ನೆಗೆ ಒಬ್ಬೊಬ್ಬರು ಒಂದು ರೀತಿಯ ಉತ್ತರ ಹೇಳಬಹುದು. ಇಲ್ಲಿ ಪಿ. ಲಂಕೇಶ್ ಅವರ ಬರಹದ ಅನುಭವದ ಮಾತಿದೆ. ಈಗಲೂ ತಾಜಾ ತಾಜಾ ಎಂಬಂತಿರುವುದು ಅವರ ಬರಹದ ಶಕ್ತಿ. ಓದಿಕೊಳ್ಳಿ.
‘…ನನ್ನಲ್ಲಿ ಒಂದು ಪ್ರಾಚೀನ ಕಾಲದ ಕಾರು ಇತ್ತು; ಆಸ್ಟಿನ್ ಸೆವೆನ್. ಎಲ್ಲರೂ
ತಮ್ಮ ಸಿರಿತನ ತೋರಲು ಕಾರ್ ಕೊಂಡರೆ ನಾನು ನನ್ನ ಬಡತನ ತೋರಲು ಕಾರ್ ಕೊಂಡಿದ್ದೆ. ಅದನ್ನು ಕಲಿಯುವಾಗ ತಮಗೆ ಸಂತೋಷದ ಸುದ್ದಿ ಬಂದೀತೆಂದು ನನ್ನ ಶತ್ರುಗಳೆಲ್ಲ ಕಾಯುತ್ತಿದ್ದರೆಂದು ವದಂತಿ. ಅಂಥ ಕಾರ್ ನೋಡಿ ‘ದೊರೆ ಮಗ
ಇದ್ದ ಹಾಗಿದೆ’ ಎಂದಿದ್ದರು ಹಳೆಯ
ಮಿತ್ರ ವೈಯೆನ್ಕೆ. ಅವರು ಸ್ಕಾಚ್ ಕಂಡಾಗ ಮಾತ್ರ ಹಾಗೆನ್ನುವರೆಂದು ನನಗೆ ಗೊತ್ತಿದ್ದರಿಂದ ಅವರ ಮಾತು ನನ್ನ ಚಪ್ಪರಿಕೆಯಾಗಿತ್ತು.
ಹೀಗಿರಲಾಗಿ; ದಿಲ್ಲಿಯಲ್ಲಿ ನನ್ನ ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕ ಓದಿದ್ದ ಕಾರಂತರು ನನಗೆ ಮತ್ತು ವೈಯೆನ್ಕೆಗೆ ಸಿಕ್ಕು ಅದು ತಮಗೆ ಅರ್ಥವಾಗಲಿಲ್ಲವೆಂದರು ಮತ್ತು, ಅದ್ಕಕಿಂತ ನನ್ನ ಹಿಂದಿನ ನಾಟಕ ‘ಟಿ. ಪ್ರಸನ್ನನ ಗೃಹಸ್ಥಾಶ್ರಮ’ವನ್ನು ‘ತಾವು ಮೆಚ್ಚುವುದಾಗಿ ಹೇಳಿದರು.
ರಗಳೆಯೆಲ್ಲ ಯಾರಿಗೆ ಬೇಕು? ಕಾರ್ ಬಿಡುವ ಉತ್ಸಾಹ ನನಗೆ; ಇಬ್ಬರಿಗೂ ‘ಹತ್ತಿ’ ಅಂದೆ. ಮೂವರು ಬಡವರೂ ಕಾರಲ್ಲಿ ಕೂತಿದ್ದಾಯಿತು. ಕಾರ್ ಹೊರಡಬೇಕಲ್ಲ, ಹೊರಡಲೇ ವಲ್ಲದು. ನಾನು ಕಾರ್ ಬಿಡುವ ನಿರ್ವಹಣೆಯಲ್ಲಿದ್ದುದರಿಂದ ಮಿಕ್ಕ ಬಡವರಿಬ್ಬರು ನೂಕಬೇಕಾಯಿತು.
ಹೊರಟ ಮೇಲೆ ಅದು ಹೋಗುತ್ತಿದ್ದ ರೀತಿಗೆ ಭಯಗೊಂಡು ಕೂತಿದ್ದರು ಕಾರಂತರು. ಎಂಥ ಸಣ್ಣದನ್ನೂ ತಮಾಷೆ ಯಾಗಿ ನೋಡುವ ವೈಯೆನ್ಕೆ ನಗುತ್ತ ನನಗೆ ಕುಮ್ಮಕ್ಕು ಕೊಡುತ್ತಿದ್ದರು. ಇನ್ನೇನು ಗಾಡಿಯೊಂದರ ಮೇಲೆ ನುಗ್ಗಿ ಧ್ವಂಸ ಗೊಳಿಸಬೇಕು ಎನ್ನುವ ಸ್ಥಿತಿಗೆ ತಲುಪಿದ
ಕಾರು ಪಕ್ಕಕ್ಕೆ ಸರಿದು ಮುಂದುವರಿಯಿತು.
ಆಗ ಕಾರಂತರು ಇನ್ನೂ ಜೀವಿಸಬೇಕೆಂಬ ತಮ್ಮ ಆಶೆ ಹತ್ತಿಕ್ಕಲಾರದೆ ತೀರಾ ಗಂಭೀರವಾಗಿ ‘ಲಂಕೇಶ್, ನಿಲ್ಲಿಸಿ. ನಾನು ಈ ದಿಕ್ಕಿಗೆ ಹೋಗಬೇಕು’ ಎಂದು ಪೂರ್ವವನ್ನು ತೋರಿಸಿ ಇಳಿದರು. ನಾವಿಬ್ಬರೂ ಅವರನ್ನಿಳಿಸಿ ನಗುತ್ತ ನಮ್ಮ ಯಾತ್ರೆ ಮುಂದುವರಿಸಿದೆವು. ವೈಯೆನ್ಕೆ ಕಾರಂತರತ್ತ ನೋಡಿ ಮುಗುಳ್ನಕ್ಕು ‘ಘಾ’ ಅಂದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: