ಒಲವಿನಾ ಪ್ರಿಯಲತೆ…

‘ಒಲವಿನಾ ಪ್ರಿಯಲತೆ…’ ಲತಾ ಮಂಗೇಶ್ಕರ್ ಮೇಲೆ ಬರೆದದ್ದು!
ಬೇಕು ಅಂದುಕೊಂಡಾಗಲೆಲ್ಲಾ ಬರೆಯೋಕಾಗಲ್ಲ. ಅದಕ್ಕೆ ಒಂದು ಪೂರ್ವಸಿದ್ಧತೆ, ಮೂಡ್, ಏಕಾಂತ ಎಲ್ಲವೂ ಬೇಕು. ಅದರಲ್ಲೂ ಸಿನಿಮಾದ ಹಾಡು ಬರೆಯಬೇಕು ಅಂದುಕೊಂಡರೆ ಅಲ್ಲಿನ ಮಿತಿ ಹಾಗೂ ಸವಾಲುಗಳೇ ಬೇರೆ. ಎಷ್ಟೋ ಸಂದರ್ಭದಲ್ಲಿ ದಿನವಿಡೀ ಪ್ರಯತ್ನಪಟ್ಟರೂ ಹೊಳೆಯದ ಪದಗಳು ಅದೊಂದು ಸಂದರ್ಭದಲ್ಲಿ ಒಂದೊಂದೇ ಕೈಹಿಡಿದು ಬರೆಸಿಕೊಂಡು ಬಿಡುತ್ತವೆ. ಕೆಲವು ಸಂದರ್ಭಗಳಲ್ಲಿ ಬರೆದವನ ನಿರೀಕ್ಷೆಯನ್ನೂ ಮೀರಿ ಜನಪ್ರಿಯವಾಗಿ ಬಿಡುತ್ತವೆ. ಇನ್ನು ಕೆಲ ಸಂದರ್ಭಗಳಲ್ಲಿ ಯಾರದೋ ನೆನಪಲ್ಲಿ ಬರೆದ ಹಾಡು, ಇನ್ಯಾವುದೋ ಸಿನಿಮಾದ ಸಂದರ್ಭಕ್ಕೆ, ಆ ಸಿನಿಮಾದ ನಾಯಕಿಯ ಹಾವಭಾವಕ್ಕೆ ಫೈನ್ ಫೈನ್ ಎಂಬಂತೆ ಹೊಂದುಕೊಂಡು ಬಿಡುತ್ತದೆ. ಮಧುರ ಗೀತೆಗಳ ಪೈಕಿ ಇವತ್ತಿಗೂ ನಂಬರ್ ಒನ್ ಅನ್ನಿಸಿಕೊಂಡಿರುವ ‘ಒಲವಿನಾ ಪ್ರಿಯಲತೆ ಅವಳದೇ ಚಿಂತೆ’ ಹಾಡು ಕೂಡ ತೀರಾ ಆಕಸ್ಮಿಕ ಸಂದರ್ಭದಲ್ಲಿ ಯಾರನ್ನೋ ಕುರಿತು ಬರೆದದ್ದು ಎಂದರೆ ಅಚ್ಚರಿಪಡಬೇಡಿ.
ಕಣಗಾಲ್ಪ್ರಭಾಕರಶಾಸ್ತ್ರಿಗಳು ಬರೆದು, ಪಿ.ಬಿ. ಶ್ರೀನಿವಾಸ್ ಹಾಡಿದ ಆ ಹಾಡು-ಹೀಗೆ ಶುರುವಾಗುತ್ತದೆ;
ಒಲವಿನಾ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೇ ಮಧುರ ಗೀತೆ
ಅವಳೇ ಎನ್ನ ದೇವತೆ!!
ಹುಷಾರಾಗಿ ಕೇಳಿಸಿಕೊಳ್ಳಿ. ಈ ಹಾಡು ಲತಾ ಮಂಗೇಶ್ಕರ್ಳನ್ನೇ ನೆನಪಲ್ಲಿಟ್ಟುಕೊಂಡು; ಅವಳ ಮೋಹದಲ್ಲಿ ತೇಲಿಹೋಗಿ ಬರೆದದ್ದು! ಮುಂದೆ, ‘ಕುಲವಧು’ ಸಿನಿಮಾಕ್ಕೆ ಹಾಡು ಬೇಕು ಎಂದಾಗ, ಇದನ್ನೇ mbZಠಿಛಿ ಮಾಡಿ, ಅದಕ್ಕೆ ಪ್ರಾದೇಶಿಕ ಸೊಗಡಿನ ಟಚ್ ನೀಡಿ, ಈ ಹಾಡಿನಿಂದಲೇ ಸಿನಿಮಾದ ಸನ್ನಿವೇಶ ಇನ್ನಷ್ಟು ತೀವ್ರವಾಗುವಂತೆ ಒಂದೆರಡು ಹೊಸ ಸಾಲು ಸೇರಿಸಲಾಯಿತು. ಈ ಹಾಡು, ಎಲ್ಲರ ನಿರೀಕ್ಷೆ ಮೀರಿ ಜನಪ್ರಿಯವಾಯಿತು, ಲತಾ ಮಂಗೇಶ್ಕರ್ ಥರಾನೇ!

ಅದ್ಸರಿ, ಲತಾ ಮಂಗೇಶ್ಕರ್ ಮೇಲೆ ಈ ಹಾಡು ಬರೆಯಬೇಕಾದ ಸಂದರ್ಭವಾದರೂ ಹೇಗೆ ಬಂತು? ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ಅದಕ್ಕಿಲ್ಲಿ ಉತ್ತರವಿದೆ. ಅದು ೬೦ರ ದಶಕದ ಜಮಾನಾ. ಲತಾ ಮಂಗೇಶ್ಕರ್ ಆಗಷ್ಟೇ ಬೆಳಕಿಗೆ ಬಂದಿದ್ದಳು. ಆಕೆಯ ಇಂಪಾದ ದನಿಗಿಂತ ಹೆಚ್ಚಾಗಿ ಆಕೆಯ ಅನುಪಮ ಚೆಲುವು ಹಿಂದಿ ಚಿತ್ರರಂಗದ ಸಕಲೆಂಟು ಮಂದಿಯನ್ನೂ ಮರುಳು ಮಾಡಿತ್ತು. ಅವತ್ತಿನ ಕಾಲಕ್ಕೆ ಶೋಮ್ಯಾನ್ ಅನ್ನಿಸಿಕೊಂಡಿದ್ದ ರಾಜ್ಕಪೂರ್ ಕೂಡ ಲತಾಳ ಒಂದು ಕುಡಿನೋಟಕ್ಕಾಗಿ ಕಾತರಿಸಿದ್ದ. ಅದನ್ನು ಇವತ್ತಿನ ಭಾಷೆಯಲ್ಲೇ ವಿವರಿಸುವುದಾದರೆ-ಲತಾಗೆ ಕಾಳು ಹಾಕಲು ರಾಜ್ಕಪೂರ್ ಮೇಲಿಂದ ಮೇಲೆ ಪ್ರಯತ್ನಿಸಿದ್ದ. ಈ ಸಂಬಂಧವಾಗಿ ಪತ್ರಿಕೆಗಳಲ್ಲಿ ಮೇಲಿಂದ ಮೇಲೆ ವರದಿಗಳು ಪ್ರಕಟವಾಗುತ್ತಲೇ ಇದ್ದವು.
ಈಗ,ನಾವೆಲ್ಲರೂ ಅವಳು ಸಿಗೋದಿಲ್ಲ ಅಂತ ಗೊತ್ತಿದ್ರೂ ಸಾನಿಯಾ ಮಿರ್ಜಾ, ಸಾನಿಯಾ ಮಿರ್ಜಾ ಅಂತ ಜಪ ಮಾಡೋದಿಲ್ವೆ? ಅದೇ ಥರ ಆಗ ಎಲ್ಲರಿಗೂ ಲತಾ ಮಂಗೇಶ್ಕರ್ಳ ಹುಚ್ಚು ಹಿಡಿದಿತ್ತು. ಒಂದು ಸ್ವಾರಸ್ಯವೆಂದರೆ, ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಗೀತ ರಚನಕಾರ ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಗೂ ಗಾಯಕ ಪಿ.ಬಿ. ಶ್ರೀನಿವಾಸ್-ಈ ಮೂವರಿಗೂ ಲತಾಳ ಮೇಲೆ ಮೋಹವಿತ್ತು. ಆದರೆ, ಅದನ್ನು ಬಾಯಿಬಿಟ್ಟು-ಅದೂ ಲತಾಳ ಮುಂದೆ ನಿಂತು ಹೇಳಿಕೊಳ್ಳಲು ಯಾರೊಬ್ಬರಿಗೂ ಧೈರ್ಯವಿರಲಿಲ್ಲ. (ಬಹುಶಃ ಆ ದಿನಗಳಲ್ಲಿ ಇವರೆಲ್ಲ ಮದ್ರಾಸಿನಲ್ಲಿದ್ದರು. ಅಲ್ಲಿಂದ ಮುಂಬಯಿಗೆ ಹೋಗಿ ಆಕೆಯನ್ನು ಪರಿಚಯಿಸಿಕೊಂಡು, ನಂತರ ಪ್ರಪೋಸ್ ಮಾಡುವುದು ಸಾಧ್ಯವೂ ಇರಲಿಲ್ಲವೇನೋ…)
ಇಂಥ ಸಂದರ್ಭದಲ್ಲೇ, ಅದೊಂದು ದಿನ-ಲತಾಳ ವಿಷಯ, ಆಕೆಯ ಸೌಂದರ್ಯದ ಮಾತು ಬಂದಾಗ -ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳು-‘ನನಗಂತೂ ಆಕೆ ತುಂಬಾನೇ ಇಷ್ಟವಾಗಿದ್ದಾಳೆ ’ ಎಂದೇ ಬಿಟ್ಟರು. ತಕ್ಷಣವೇ ಜಿ.ಕೆ. ವೆಂಕಟೇಶ್ ಮತ್ತು ಪಿ.ಬಿ. ಶ್ರೀನಿವಾಸ್-‘ನಮ್ಮದೂ ಅದೇ ಅಭಿಪ್ರಾಯ’ ಅಂದುಬಿಟ್ಟಿದ್ದಾರೆ. ಒಬ್ಬ ಬರಹಗಾರ, ಒಬ್ಬ ಸಂಗೀತ ನಿರ್ದೇಶಕ, ಮತ್ತೊಬ್ಬ ಗಾಯಕ-ಈ ಮೂರೂ ಜನರ ಎದೆಯಲ್ಲಿ ಒಂದೇ ರಾಗ! ಅದೂ ಏನು? ಅದು ಪ್ರೇಮರಾಗ. ಅಂದ ಮೇಲೆ ಕೇಳಬೇಕೆ? ಪ್ರಭಾಕರ ಶಾಸ್ತ್ರಿಗಳು ‘ಒಲವಿನಾ ಪ್ರಿಯಲತೆ…’ ಎಂದು ಆರಂಭಿಸಿ ಬರದೇಬಿಟ್ಟರು.
ಮುಂದೆ ‘ಕುಲವಧು’ ಚಿತ್ರ ತಯಾರಾದಾಗ ಈ ಹಾಡನ್ನು ಸ್ವಲ್ಪ mbZಠಿಛಿ ಮಾಡಿ ಬಳಸಿಕೊಳ್ಳಲಾಯಿತು. ಲತಾಳ ಪ್ರೇಮದ ಮೋಹದಲ್ಲಿ ತೇಲುತ್ತಲೇ ಅದಕ್ಕೆ ಜಿ.ಕೆ. ವೆಂಕಟೇಶ್ ರಾಗ ಸಂಯೋಜಿಸಿದರು. ಅವಳಿಗೋಸ್ಕರ ಎಂದುಕೊಂಡೇ ಪಿ.ಬಿ.ಎಸ್. ಎದೆ ತುಂಬಿ ಹಾಡಿದರು.
ಹಾಡು ಅಮರವಾಯಿತು, ಮಧುರವೂ ಆಯಿತು!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: