ನಿನ್ನ ನೀನು ಮರೆತರೇನು ಸುಖವಿದೆ?

ನಿನ್ನ ನೀನು ಮರೆತರೇನು ಸುಖವಿದೆ?
ಚಿತ್ರ: ದೇವರಕಣ್ಣು, ಸಂಗೀತ: ಟಿ.ಜಿ. ಲಿಂಗಪ್ಪ, ಗೀತರಚನೆ: ಚಿ. ಉದಯಶಂಕರ್

ನಿನ್ನ ನೀನು ಮರೆತರೇನು ಸುಖವಿದೆ?
ತನ್ನತನವ ತೊರೆದರೇನು ಸೊಗಸಿದೆ?
ನಿನ್ನ ನೀನು ಮರೆತರೇನು ಸುಖವಿದೆ…

ಹಾಡುವುದನು ಕೋಗಿಲೆಯು ಮರೆಯುವುದೇ
ಹಾರುವುದನು ಬಾನಾಡಿ ತೊರೆಯುವುದೇ
ಮೀನು ಈಜದಿರುವುದೆ,
ದುಂಬಿ ಹೂವ ಮರೆವುದೆ
ಮುಗಿಲ ಕಂಡ ನವಿಲು ನಲಿಯದೆ…//ನಿನ್ನ ನೀನು//

ಗಾಳಿ ತನ್ನ ಚಲನೆಯನ್ನು ಮರೆಯುವುದೇ?
ಬೆಳ್ಳಿಮೋಡ ತೇಲದೇ ನಿಲ್ಲುವುದೇ
ತಾರೆ ಮಿನುಗದಿರುವುದೆ,
ಮಿಂಚು ಹೊಳೆಯದಿರುವುದು
ನದಿಯು ಕಡಲ ಸ್ನೇಹ ಮರೆವುದೇ…//ನಿನ್ನ ನೀನು//

೮೦-೯೦ರ ದಶಕದಲ್ಲಿ ರೇಡಿಯೋದಲ್ಲಿ ವಾರಕ್ಕೆ ನಾಲ್ಕು ಬಾರಿ ತಪ್ಪದೇ ಪ್ರಸಾರವಾಗುತ್ತಿದ್ದ ಹಾಡು-‘ನಿನ್ನ ನೀನು ಮರೆತರೇನು ಸುಖವಿದೆ?’ ಆ ದಿನಗಳಲ್ಲಿ ಮುನಿದು ಕೂತ ಗೆಳತಿಯನ್ನು ರಮಿಸಲು ಗ್ರೀಟಿಂಗ್ ಕಾರ್ಡ್ ಕಳಿಸುತ್ತಿದ್ದ ರೋಮಿಯೋಗಳ, ಕಾರ್ಡ್ನ ಒಳಗೆ ಬರೆಯುತ್ತಿದ್ದುದೂ ಈ ಹಾಡಿನ ಸಾಲುಗಳನ್ನೇ! ಈ ಹಾಡಿನ ಮಾಧುರ್ಯಕ್ಕೆ, ಪದಗಳು ಹೊಮ್ಮಿಸುವ ವಿಶೇಷ ಅರ್ಥಕ್ಕೆ, ಹಾಡಿನ ಜತೆಗಿರುವ ಮಮಕಾರಕ್ಕೆ ಮರುಳಾಗದವರು ಬಹುಶಃ ಯಾರೂ ಇಲ್ಲ!
ಮುನಿದು ಕೂತ/ ಪ್ರೀತಿ ಮರೆತ ಗೆಳತಿ/ ಗೆಳೆಯನನ್ನು ರಮಿಸಲೆಂದೇ ಬರೆದಂತಿರುವುದು ಈ ಹಾಡಿನ ಅಗ್ಗಿಕೆ. ಅಂದ ಮೇಲೆ ಗೀತರಚನೆಕಾರ,ಯಾವುದೋ ರೊಮ್ಯಾಂಟಿಕ್ ಮೂಡ್ನಲ್ಲಿ ತೇಲಿ ತೇಲಿ ಹೋಗಿ ಈ ಹಾಡು ಬರೆದಿರಬಹುದು ಅಂದುಕೊಂಡಿರಾ? ನಿಮ್ಮ ಊಹೆ ತಪ್ಪಾಯಿತು. ಏಕೆಂದರೆ-ಮುಂದಿನ ೨೦ ವರ್ಷಗಳ ನಂತರವೂ ‘ಅಮರಾ ಮಧುರ’ ಗೀತೆಯಾಗಿ ಉಳಿಯಬಲ್ಲ ಶಕ್ತಿಯ ಈ ಹಾಡು ಸೃಷ್ಟಿಯಾದದ್ದು ಟಾಯ್ಲೆಟ್ನಲ್ಲಿ, ಅದೂ ವಿಚಿತ್ರ ಸಂದರ್ಭದಲ್ಲಿ!
ಆ ಸಂದರ್ಭದ ವಿವರ ಹೀಗಿದೆ: ‘ದೇವರ ಕಣ್ಣು’ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿತ್ತು. ಗೀತರಚನೆಯ ಹೊಣೆ ಸಾರಥ್ಯ ಜಿ. ಉದಯಶಂಕರ್ ಅವರದು. ಸಂಗೀತ ನಿರ್ದೇಶನ-ಟಿ.ಜಿ. ಲಿಂಗಪ್ಪ, ಹಾಡು ಬರೆದದ್ದಾಯಿತು. ಅವುಗಳ ಧ್ವನಿಮುದ್ರಣ ಕಾರ್ಯ ಕೂಡ ಮುಗಿಯಿತು. ಇಷ್ಟೆಲ್ಲ ಆದ ಮೇಲೂ ಚಿ. ಉದಯಶಂಕರ್ ಅವರಿಗೆ ಒಂದು ಹಾಡಿನ ಬಗ್ಗೆ ಸಮಾಧಾನವಿರಲಿಲ್ಲ.
ಈ ಯೋಚನೆಯಲ್ಲೇ ಟಾಯ್ಲೆಟ್ಗೆ ಹೋದವರಿಗೆ,ಇಡೀ ಹಾಡನ್ನು ಬೇರೆ ಬರೆಯಬೇಕು ಅನ್ನಿಸಿತು. ಅಲ್ಲಿಯೇ, ಆ ಕ್ಷಣದಲ್ಲೇ ಹೊಸ ಹಾಡಿನ ಮೊದಲ ಸಾಲು ಹೊಳೆದುಬಿಟ್ಟಿತು. ಕೂಡಲೇ ರೆಕಾರ್ಡಿಂಗ್ ರೂಮ್ಗೆ ಬಂದವರು-ಲಿಂಗಪ್ಪ ಅವರಿಗೆ ಹೇಳಿದರು: ‘ಸಾರ, ಒಂದು ಹಾಡಿನ ಬಗ್ಗೆ ನನಗೆ ಏಕೋ ಸಮಾಧಾನವಾಗಲಿಲ್ಲ. ಬೇರೆ ಬರೆದುಕೊಡ್ತೀನಿ. ಟ್ಯೂನ್ ಮಾಡ್ತೀರಾ?’ ಈ ಮಾತಿಗೆ ಲಿಂಗಪ್ಪ ನಗುನಗುತ್ತಾ-‘ನೋಡು ತಮ್ಮಯ್ಯಾ, ನೀನು ಐದು ನಿಮಿಷದಲ್ಲಿ ಬರೆದುಕೊಡುವುದಾದ್ರೆ ನಾನು ಐದು ನಿಮಿಷದಲ್ಲಿ ಟ್ಯೂನ್ ಮಾಡ್ತೀನಿ. ಆದ್ರೆ ಇದು ಚಾಲೆಂಜ್’ ಅಂದರು.
ಚಾಲೆಂಜ್ಗೆ ಒಪ್ಪಿದ ಚಿ.ಉ. ಐದೇ ನಿಮಿಷದಲ್ಲಿ ಬರೆದದ್ದೂ ಆಯಿತು. ಲಿಂಗಪ್ಪ ಅದಕ್ಕೆ ಐದೇ ನಿಮಿಷದಲ್ಲಿ ಟ್ಯೂನ್ ಮಾಡಿದ್ದೂ ಆಯಿತು. ಹೀಗೆ ಸೃಷ್ಟಿಯಾದ ಗಂಧರ್ವ ಗೀತೆಯೇ -‘ನಿನ್ನ ನೀನು ಮರೆತರೇನು ಸುಖವಿದೆ…’
ಸ್ವಾರಸ್ಯವೆಂದರೆ-ಟಾಯ್ಲೆಟ್ ಎಂಬುದು ಮೂಗು ಮುಚ್ಚಿಕೊಂಡು ಎರಡು ನಿಮಿಷಗಳ ಕಾಲ ಇದ್ದು ಬರುವಂಥ, ಶೇಮ್ ಶೇಮ್ ಎಂದು ಕೂಗಿ ಎಂಥವರನ್ನೂ ಗಾಬರಿಯಾಗಿಸುವಂಥ ಜಾಗದಲ್ಲೇ ಕಾಣದ ಗೆಳತಿಯ ನೆನಪಿಗೆ ಚಿ.ಉ. ಜಾರಿ ಹೋದರು. ಟಾಯ್ಲೆಟ್ನ ಇಕ್ಕಟ್ಟು, ಬಿಕ್ಕಟ್ಟಿನ ಮಧ್ಯೆಯೇ ‘ಗಾಳಿ ತನ್ನ ಚಲನೆಯನ್ನು ಮರೆಯುವುದೇ… ತಾರೆ ಮಿನುಗದಿರುವುದೆ/ ಮಿಂಚು ಹೊಳೆಯದಿರುವುದೆ’ ಎಂಬಂಥ ಅನುಮಪ ಪದಗಳೂ ಚಿ.ಉ.ಗೆ ಹೊಳೆದುಬಿಟ್ಟವು! ಪರಿಣಾಮ, ಟಾಯ್ಲೆಟ್ನ ಕಡು ಏಕಾಂತದ ಮಧ್ಯೆಯೇ ಎಲ್ಲರ ಏಕಾಂತವನ್ನೂ ಡಿಸ್ಟರ್ಬ್ ಮಾಡಬಲ್ಲಂಥ ಮಧುರ್ ಮಧುರ್ ಹಾಡು ಸೃಷ್ಟಿಯಾಗಿಬಿಟ್ಟಿತು.
ಹೌದು, ಹಾಡು ಹುಟ್ಟುವ ಸಮಯ ಹೀಗೂ ಇರುತ್ತೆ!

Advertisements

2 Comments »

  1. 1

    ಮಣಿಕಾಂತ್ ಅವರಿಗೆ…
    ನಾನು ಲಕ್ಷ್ಮೀಕಾಂತ. ಶ್ರೀಶನ ಗೆಳೆಯ. ನಿಮಗೆ ನೆನಪಿರಬಹುದು ಅಂದುಕೊಂಡಿದ್ದೇನೆ. ನಿಮ್ಮ ಬ್ಲಾಗ್ ನೋಡಿ ಖುಷಿಯಾಯ್ತು. ಮುದ್ದಾಗಿದೆ. ಶುಭವಾಗಲಿ…ಸಾರ್
    Laxmikanth


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: