ಅವಳು ಎಲ್ಲವನ್ನೂ live ಆಗಿ ತೋರಿಸಿದಳು!

‘ಬೆಳಗಿನಿಂದ ಸಂಜೇತನಕ ಮನೇಲೇ ಇರ್ತಾಳೆ. ಈ ಅವಧಿಯಲ್ಲಿ ಅವಳು ಕಡಿಯೋದು ಅಷ್ಟರಲ್ಲೇ ಇದೆ…’
ಹೆಂಡತಿಯ ವಿಷಯವಾಗಿ ರಾಮಣ್ಣ, ಯೋಚಿಸುತ್ತಿದ್ದುದೇ ಹಾಗೆ. ಮನೇಲಿರುವ ಹೆಂಡತಿಗೆ ನಯಾಪೈಸೆಯ ಕೆಲಸ ಇರುವುದಿಲ್ಲ ಎಂದೇ ಆತ ನಂಬಿದ್ದ. ಗೆಳೆಯರ ಮುಂದೆ ಕೂಡ ಅದನ್ನೇ ಹೇಳುತ್ತಿದ್ದ. ಅದೊಂದು ಬೆಳಗ್ಗೆ, ಹೆಂಡತಿ ಬಟ್ಟೆಗಳನ್ನು ಇಸ್ತ್ರಿ ಮಾಡಿಲ್ಲ ಎಂಬ ನೆಪ ತೆಗೆದು ಆಕೆಯನ್ನು ಯಕ್ಕಾ ಮಕ್ಕಾ ಬೈದ. ಮುಂದುವರೆದು- ‘ಬೆಳಗಿನಿಂದ ಸಂಜೆತನಕ ನೀನು ಕಡಿಯೋದು ಅಷ್ಟರಲ್ಲೇ ಇದೆ. ಏನೇನ್ ಕೆಲ್ಸ ಮಾಡ್ತೀಯ ಅಂತಾದ್ರೂ ಇವತ್ತು ಹೇಳು’ ಎಂದು ದಬಾಯಿಸಿ ಆಫೀಸಿಗೆ ಹೋಗಿಬಿಟ್ಟ.
ಸಂಜೆ ಅದೇ ಸಿಟ್ಟಿನಲ್ಲಿ ೬ ಗಂಟೆಗೇ ಮನೆಗೆ ಬಂದು ನೋಡುತ್ತಾನೆ-ಅವನ ಎರಡೂ ಮಕ್ಕಳು ಮನೆ ಮುಂದಿದ್ದ ಗಲೀಜು ನೀರಲ್ಲಿ ಆಟವಾಡುತ್ತಿವೆ. ಮನೆಗೆ ಹೋಗಿ ಬ್ಯಾಗ್ ಇಟ್ಟು, ಅಲ್ಲಿಂದಲೇ ಒಮ್ಮೆ ಕೂಗಿ, ಮಕ್ಕಳು- ಹೆಂಡತಿಗೆ ಒಟ್ಟಿಗೇ ಬುದ್ಧಿ ಹೇಳಬೇಕು ಅಂದುಕೊಂಡ.
ಬಾಗಿಲಿಗೆ ಬಂದದ್ದೇ ತಡ, ಅವನಿಗೆ ಶಾಕ್ ಆಯಿತು. ಏಕೆಂದರೆ, ಬಾಗಿಲು ಪೂರ್ತಾ ತೆರೆದುಕೊಂಡಿತ್ತು. ಟಿ.ವಿ. ದೊಡ್ಡ ಸೌಂಡ್ನಲ್ಲಿ ಕಿರುಚುತ್ತಿತ್ತು. ಫ್ಯಾನು ಭರ್ರೋ ಎಂದು ತಿರುಗುತ್ತಿತ್ತು. ಲೈಟ್ಗಳೂ ಉರಿಯುತ್ತಿದ್ದವು. ಗಾಬರಿಯಿಂದ ಅಡುಗೆಮನೆಗೆ ಬಂದು ನೋಡಿದರೆ ತೊಳೆಯದ ಪಾತ್ರೆಗಳ ಮೇಲೆಲ್ಲಾ ನೊಣಗಳು ಹಾರಾಡುತ್ತಿದ್ದವು. ಮನೆ ತುಂಬಾ ಕಸ, ಕಸ. ಪೇಪರು ಹೇಗೆ ಹೇಗೋ ಚೆಲ್ಲಾಡಿದ್ದವು. ಈ ಹಾಳಾದವಳು ಎಲ್ಲಿ ಹೋದಳು ಎಂದುಕೊಂಡ. ಆ ಯೋಚನೆಯಲ್ಲೇ ರಾಮಣ್ಣನಿಗೆ ಬಿ.ಪಿ. ಹೆಚ್ಚಿ, ತಲೆ ಸುತ್ತು ಬಂದಂತೆ ಆಯ್ತು. ಮುಖದ ತುಂಬಾ ಬೆವರು…
ಒಮ್ಮೆ ಮುಖ ತೊಳೆದುಕೊಂಡು, ಮಕ್ಕಳನ್ನೇ ಕರೆದು ಎಲ್ಲವನ್ನೂ ವಿಚಾರಿಸೋಣ ಅಂದುಕೊಂಡು ಸ್ನಾನದ ಮನೆಗೆ ಬಂದು ನೋಡುತ್ತಾನೆ-ತೊಟ್ಟಿಯಲ್ಲಿ ಒಂದೇ ಒಂದು ಹನಿ ಕೂಡಾ ನೀರಿಲ್ಲ. ಇದನ್ನೆಲ್ಲ ಕಂಡವನಿಗೆ, ಹೆಂಡತಿಯ ಕಿಡ್ನ್ಯಾಪ್ ಆಗಿರಬಹುದೇನೋ ಎಂಬ ಯೋಚನೆ ಕೂಡ ಬಂದುಬಿಟ್ಟಿತು.
ಅಷ್ಟೆ. ರಾಮಣ್ಣ ನಿಂತಲ್ಲೇ ಬೆವೆತುಹೋದ. ಒಂದಿಷ್ಟು ದುಡ್ಡು ತಗೊಂಡು ಬೇಗ ಸ್ಟೇಷನ್ಗೆ ಹೋಗಿ ದೂರು ಕೊಡಬೇಕು ಅಂದುಕೊಂಡವನೇ ಸರಭರನೆ ಬೆಡ್ರೂಂಗೆ ನುಗ್ಗಿದರೆ-ಅಲ್ಲಿ, ಮಂಚದ ಮೇಲೆ ಅವಳಿದ್ದಳು; ರಾಮಣ್ಣನ ಹೆಂಡತಿ! ಅವಳು ಆರಾಮಾಗಿ ಮಲಗಿ ಕಥೆ ಪುಸ್ತಕ ಓದುತ್ತಿದ್ದಳು.
ರಾಮಣ್ಣನಿಗೆ, ಪಿತ್ತ ನೆತ್ತಿಗೇರಿತು. ತಕ್ಷಣವೇ – ‘ಏನೇ ಇದೆಲ್ಲಾ?’ ಎಂದು ಚೀರಿದ. ಅವನ ಹೆಂಡತಿ ತುಂಬ ಕೂಲ್ ಆಗಿ ‘ಏನಿಲ್ಲ ಕಣ್ರೀ. ಬೆಳಗಿನಿಂದ ಮನೇಲಿ ನಯಾಪೈಸೆಯ ಕೆಲಸ ಇರಲ್ಲ ಅಂದ್ರಲ್ಲ ಬೆಳಗ್ಗೆ? ನಾನು ಏನೂ ಕೆಲಸ ಮಾಡದೇ ಹೋದ್ರೆ ಮನೆ ಹೇಗಿರ್ತದೆ ಅಂತ ನಿಮಗೆ ತೋರಿಸ್ಬೇಕು ಅನ್ನಿಸ್ತು. ಅದಕ್ಕೇ ಹೀಗೆ ಮಾಡ್ದೆ. ನಂಗೆ ದಿನಾಲೂ ಎಷ್ಟೆಲ್ಲ ಕೆಲ್ಸ ಇರ್ತದೆ ಅಂತ ಈಗ ಗೊತ್ತಾಯ್ತಲ್ಲ…’ ಅಂದಳು!

Advertisements

1 Comment »

  1. 1
    swamy Says:

    ತುಂಬಾ ಚನ್ನಾಗಿ ಮೂಡಿ ಬಂದಿದೆ…..

    ನನ್ನ ಗೂಡಿಗೊಮ್ಮೆ ಬಂದೋಗಿ
    http://www.gubbacchi-goodu.blogspot.com/


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: