ಗಾಂಧೀಜಿ ಹೇಳಿದ್ದಕ್ಕೆ ಆತ ತುಟಿಯನ್ನೇ ಹೊಲಿದುಕೊಂಡರು!

ಗಾಂಧೀಜಿಯವರ ಅನುಯಾಯಿಗಳ ಗುಂಪಿನಲ್ಲಿ ಭನಸಾಲಿ ಎಂಬ ಅಧ್ಯಾಪಕರೂ ಇದ್ದರು. ಬಾಪೂ ಅವರ ಮಾತು ವೇದಕ್ಕಿಂತ ದೊಡ್ಡದು ಎಂದೇ ಅವರು ನಂಬಿದ್ದರು. ಪ್ರಾಧ್ಯಾಪಕರಾಗಿದ್ದರಲ್ಲ, ಅದೇ ಕಾರಣಕ್ಕೋ ಏನೋ, ಭನಸಾಲಿ ಸ್ವಭಾವದಿಂದ ಸ್ವಲ್ಪ ವಾಚಾಳಿ. ಆದರೆ ಮಾತು, ಗಾಂಧೀಜಿಯ ತತ್ವಚಿಂತನೆ, ಸತ್ಯ, ಅಹಿಂಸೆಗಳ ಬಗ್ಗೆಯೇ ಇರುತ್ತಿತ್ತು. ಒಮ್ಮೆ ಆಶ್ರಮದಲ್ಲಿದ್ದ ಇತರರೂ ಭನಸಾಲಿಯವರ ವಾಚಾಳಿತನದ ಬಗ್ಗೆ ಬಾಪೂ ಅವರ ಬಳಿ ದೂರಿದ್ದರು. ಒಂದೆರಡು ಸಲ ಬಾಪೂ ಭನಸಾಲಿಯರಿಗೆ ಶುಕ್ರವಾರ ಮೌನವ್ರತ ಕೈಗೊಳ್ಳಲಿಕ್ಕೆ ಹೇಳಿದ್ದರು. ಅದಕ್ಕೆ ಒಪ್ಪಿದ ಭನಸಾಲಿ ಶುಕ್ರವಾರ ಮಾತೇ ಆಡುತ್ತಿರಲಿಲ್ಲ ನಿಜ. ಆದರೆ ಗುರುವಾರ, ಶನಿವಾರ ತಲೆ ಸಿಡಿಯುವಷ್ಟು ಮಾತಾಡಿ, ಜತೆಗಿದ್ದವರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರು.
ಇದನ್ನು ಗಮನಿಸಿದ ಗಾಂಧೀಜಿ ಒಮ್ಮೆ ತಮ್ಮ ವಾಡಿಕೆಯ ಪ್ರೇಮದಲ್ಲಿ ಸ್ವಲ್ಪ ಕೋಪ ಬೆರೆಸಿ ಹೇಳಿದರು. `ಭನಸಾಲಿ, ನಿನ್ನ ಮಾತು ಬಹಳವಾಯಿತು. ತುಟಿ ಹೊಲಿದುಕೊಂಡು ಇರು…’
ಗಾಂಧೀಜಿಯ ಮಾತು ಅಂದರೆ ವೇದವಾಕ್ಯ ಎಂದು ನಂಬಿದ್ದರಲ್ಲ? ಅದೇ ಕಾರಣದಿಂದ ಭನಸಾಲಿ ತಮ್ಮ ಕೋಣೆಗೆ ಹೋದವರೇ ಸೂಜಿದಾರ ತೆಗೆದುಕೊಂಡು ಎರಡೂ ತುಟಿಗಳನ್ನು ಜೋಡಿಸಿಕೊಂಡು ಹೊಲಿದುಬಿಟ್ಟರು. ಗಾಂಧೀಜಿಯ ಭಕ್ತಿ, ವಿಶ್ವಾಸದ ನೆಪದಲ್ಲಿ ದೇಹವನ್ನು ದಂಡಿಸಿದರೆ ಅದು ತಡೆದೀತೆ? ತುಟಿಗಳು ಊದಿಕೊಂಡವು. ರಕ್ತಸ್ರಾವ ಎಷ್ಟೋ ಹೊತ್ತು ಬಿಡದೇ ಇತ್ತು. ಆದರೂ ಭನಸಾಲಿ ನೋವಿನಿಂದ ಚೀರಲಿಲ್ಲ.
ಸಾಯಂಕಾಲ ಬಂತು. ಪ್ರಾರ್ಥನೆಯ ಹೊತ್ತಾಯಿತು. ಏನು ಬಿಟ್ಟರೂ ಪ್ರಾರ್ಥನೆಯನ್ನು ಬಿಡುತ್ತಿರಲಿಲ್ಲ ಭನಸಾಲಿ. ಏಕೆಂದರೆ ಗಾಂಧೀಜಿ ಎರಡು ಹೊಸ ಮಾತುಗಳನ್ನು ಪ್ರತಿ ಸಭೆಯಲ್ಲಿ ಹೇಳುತ್ತಿದ್ದರು. ಭನಸಾಲಿ ಕರವಸ್ತ್ರದಿಂದ ಬಾಯಿ ಮುಚ್ಚಿಕೊಂಡು ಪ್ರಾರ್ಥನಾ ಸಭೆಗೆ ನಡೆದರು. ದಾರಿಯಲ್ಲಿ ಸ್ನೇಹಿತರು ಕಂಡಾಗ ತಲೆಬಾಗಿ ನಮಸ್ಕರಿಸುತ್ತಿದ್ದರು.ಗಾಂಧೀಜಿಯವರು ಅಂದು ಯಾಕೋ ಎಂದಿಗಿಂತ ಸಭೆಗೆ ಬೇಗ ಬಂದವರೇ- ಭನಸಾಲಿಯ ಅವಸ್ಥೆ ಕಂಡು – `ಅದೇನು ಭನಸಾಲಿ, ಕೈ ತೆಗೆಯಿರಿ’ ಎಂದರು. ಭನಸಾಲಿ ಬಾಯ ಮೇಲಿದ್ದ ಕೈ ಬದಿಗೆ ಸರಿಸಿದಾಗ ಅವರ ಸ್ಥಿತಿ ಕಂಡು ಗಾಂಧೀಜಿ ಚಕಿತರಾದರು. ಅವರಿಗೆ ಮೌನ ಸಾಧನೆಯ ಇತಿಮಿತಿ ಗೊತ್ತಿತ್ತು. ಸಾಮೂಹಿಕ ಶಿಸ್ತು, ಪ್ರಚೋದನೆ ದೃಷ್ಟಿಯಿಂದ ಜತೆಗಿದ್ದವರೊಂದಿಗೆ ಸ್ವಲ್ಪ ಕಟುವಾಗಿ ಮಾತಾಡುವುದು ಗಾಂಧೀಜಿಗೆ ಅನಿವಾರ್ಯವಾಗಿತ್ತು. ಭನಸಾಲಿಯ ವಿಷಯದಲ್ಲಿ ತಮ್ಮ ಮಾತಿಂದ ಆದ ಅನಾಹುತ ಕಂಡು ಗಾಂಧೀಜಿ ತುಂಬ ನೊಂದುಕೊಂಡರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: