ತ್ರಿಪುರ ಸುಂದರಿ,

null

ಇಂಥದ್ದೊಂದು ಹೆಸರು ಇಡ್ತಾರೆ ಅನ್ನೋದೆ ನಾನು ಕೇಳಿರಲಿಲ್ಲ. ಅದೇನಿದ್ರೂ ಬೈಯೋಕೆ ಕರಿಯೋದು ಅಂತ ತಿಳಿದುಕೊಂಡಿದ್ದೆ. ಕಾಲೇಜಿನಲ್ಲಿ ಮೊದಲ ಬಾರಿಗೆ ನಿನ್ನ ಹೆಸರು ಕೇಳಿದಾಗ ಬಿದ್ದು ಬಿದ್ದು ನಕ್ಕಿದ್ದೆ. ನಿನ್ನ ಹೆಸರು ಹಾಗಿದೆ ಅನ್ನೋ ಕಾರಣಕ್ಕೆ ನಿನ್ನ ನೋಡಬೇಕು ಅನ್ನೋ ಕುತೂಹಲ ಮೂಡಿತು. ನಿನ್ನ ನೋಡಿದ ಮೇಲೆ ರ್ಯಾಗ್ ಮಾಡಬೇಕು ಅನ್ನೋ ಚಟ ಹುಟ್ಟಿತು. ರ್ಯಾಗ್ ಮಾಡಿದ ಮೇಲೆ ಮಾತಾಡಬೇಕು ಅನ್ನೋ ಬಯಕೆ ಬಲಿಯಿತು.
ನಿಜ ಕಣೆ, ವಿಚಿತ್ರ ಹೆಸರು ಇಟ್ಟುಕೊಂಡ ಕಾರಣಕ್ಕೇ ನಿನ್ನ ಪರಿಚಯ ಮಾಡ್ಕೋಬೇಕು ಅಂತ ಅನಿಸಿದ್ದು. ನಿನ್ನ ಜೊತೆ ಒಂದ್ಸಾರಿ ಮಾತಾಡಿದ ಮೇಲೆ, ಅದೇನೋ ತಿಳೀದು, ಮತ್ತೆ ಮತ್ತೆ ಮಾತಾಡಬೇಕು ಅನ್ನೋ ಆಸೆ ಹೆಚ್ಚಾಯಿತು. ನಿನ್ನ ಜೊತೆ ಮಾತಾಡೋಕೆ ಕಾಯ್ತಾ ಇರ್ತೀನಿ ಅನ್ನೋ ಕಾರಣಕ್ಕೆ ಫ್ರೆಂಡ್ಸೆಲ್ಲಾ ನನ್ನ `ತ್ರಿಪುರಸುಂದರ’ ಅಂತೆಲ್ಲಾ ಕಾಲೆಳೀತಿದ್ದಾರೆ. ನಿನ್ನ ಪರಿಚಯ ಆಗೋದಕ್ಕೆ ಮುಂಚೆ, ಯಾರಾದ್ರೂ ಹೀಗೆಲ್ಲಾ ಛೇಡಿಸಿದ್ರೆ ಮುಖ ಊದಿಸಿಕೊಳ್ತಿದ್ದ ನಾನು, ನಿನ್ನ ಹೆಸರ್ಹೇಳಿ ಛೇಡಿಸಿದಾಗ ಒಳಗೊಳಗೇ ಸಂತೋಷ ಪಡ್ತೀನಿ ಅಂದ್ರೆ ನಂಬ್ತೀಯಾ?!
ಆದರೆ ನೀನು… ಹೆಸರಿಗಷ್ಟೇ ಸುಂದರಿ, ಒಳಗೆಲ್ಲಾ ಹೊಟ್ಟೆ ಉರಿ! ಒಂದ್ಸಾರಿನಾದ್ರೂ ನನ್ನ್ ಜೊತೆ ನಗ್ತಾ ಮಾತಾಡಿದ್ಯಾ? ನನ್ಹತ್ರ ಮಾತಾಡಿದ್ರೆ ಎಲ್ಲಿ ಮೈಲಿಗೆ ಆಗತ್ತೋ ಅನ್ನೋಹಾಗೆ ದೂರ ಓಡ್ತೀಯಲ್ಲ, ಯಾಕೆ? ಯಾವುದೋ ದುರ್ಬುದ್ಧಿ ಮನಸಲ್ಲಿ ಇಟ್ಟುಕೊಂಡು ನಿನ್ನ ಮಾತಾಡಿಸ್ತಿಲ್ಲ ಮಾರಾಯ್ತಿ, ನಿಜವಾಗಿ ಒಳ್ಳೆ ಮನಸ್ಸಿನಿಂದಲೇ ಮಾತಾಡಬೇಕು ಅಂತಿದ್ದೀನಿ. ಆದ್ರೆ ನಿಂಗದೆಲ್ಲಾ ಯಾಕೆ ತಿಳಿಯಲ್ಲ?
ನಿನ್ನ ಫ್ರೆಂಡ್ ಕೋಮಲಾ ಹೇಳಿದ್ಲು, ಇಂಥವರ ಹತ್ರ ಮಾತಾಡಿದ್ರೆ ನಾಳೆ ನನ್ನ್ ಹೆಸ್ರು ಕಾಲೇಜ್ ಗೋಡೆ ಮೇಲೆ ಬರತ್ತೆ. ಇಂಥವರ ಸಹವಾಸ ಸರಿಯಿಲ್ಲ ಅಂದ್ಯಂತೆ! ಅಂಥದ್ದೇನು ಅಪರಾಧ ಮಾಡಿದೆ ನಾನು? ನನ್ನ ನೋಡಿದ್ರೆ ಹಾಗೆಲ್ಲಾ ಕೆಟ್ಟು ಕೆರ ಹಿಡಿದು ಹೋದ ಹುಡುಗ ಅನ್ಸತ್ತಾ? ಮೊದಲ ಬಾರಿ ನನ್ನ ಹತ್ರ ಸರಿಯಾಗೇ ಮಾತಾಡಿದ್ಯಲ್ಲಾ, ಆಮೇಲೇನಾಯ್ತು ತ್ರಿಲೋಕ ಸುಂದರಿ, ಅಲ್ಲಲ್ಲ… ತ್ರಿಪುರ ಸುಂದರಿ!
ನೋಡು… ಒಂದು ಮಾತು ತಿಳ್ಕೊ. ನಾನು ನಿನ್ನ ಸೀನಿಯರ್. ಇವತ್ತು ಹೀಗೆಲ್ಲಾ ಕೆಲಸಕ್ಕೆ ಬಾರದ ಬಿಂಕ ಮಾಡಿದ್ರೆ, ನಾಳೆ ನಿಂಗೆ ನೋಟ್ಸ್ ಬೇಕಾಗೋದು ನಂದೇ. ನಮ್ಮಿಡೀ ಕ್ಲಾಸಲ್ಲಿ ನನ್ನಷ್ಟು ಅಪ್ಟುಡೇಟಾಗಿ ನೋಟ್ಸ್ ಮಾಡೋದು ಯಾರೂ ಇಲ್ಲ. ಹಾಗಾಗಿ, ನಿನಗೇ ಅಲ್ಲ, ನಿನ್ನೆಲ್ಲಾ ಕ್ಲಾಸ್ಮೇಟ್ಸ್ಗೂ ನನ್ನ ನೋಟ್ಸೇ ಗತಿ. ಇದನ್ನ ಜಂಬದಿಂದ ಹೇಳ್ತಿಲ್ಲ, ತೀರಾ ಸಹಜವಾಗಿ ಹೇಳ್ತಿದ್ದೀನಿ. ಈ ವಿಷಯ ನಿಂಗೆ ಗೊತ್ತಿರ್ಲಿ ಅಂತ ಹೇಳ್ತಿದ್ದೀನಿ.
ಇದ್ನೆಲ್ಲಾ ಹೇಳಿ ನಿನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದೀನಿ ಅಂದ್ಕೊಂಡ್ಯಾ? ಖಂಡಿತ ಇಲ್ಲ ಮಾರಾಯ್ತಿ. ಅಂತಹ ದುರ್ಬುದ್ಧಿ ನಂಗಿಲ್ಲ. ನಾನೇನು ಗಾಂಧಿ ಅಂತ ಹೇಳ್ಕೊತಿಲ್ಲ. ಅಷ್ಟೆಲ್ಲಾ ಸಾಧು ನಾನು ಅಲ್ಲವೂ ಅಲ್ಲ. ಆದ್ರೆ ಪೋಲಿ-ಪಡ್ಡೆಯಂತೂ ಅಲ್ಲ. ಆಫ್ಟರ್ಆಲ್ ನನ್ನ ಹತ್ರ ಇನ್ನೊಂದ್ಸಾರಿ ಮಾತಾಡು. ಆಗ ನಿಂಗೇ ಗೊತ್ತಾಗತ್ತೆ ನಾನೆಷ್ಟು ಒಳ್ಳೆಯ ಹುಡುಗ ಅಂತ.
ಉಳಿದೆಲ್ಲಾ ಹುಡುಗರ ಹಾಗೆ ಪಾರ್ಕಿಗೆ ಬಾ, ಕ್ಯಾಂಟೀನಲ್ಲಿ ಸಿಗು, ಲೈಬ್ರರಿಯಲ್ಲಿ ಕಾಣು ಅಂತೆಲ್ಲಾ ನಾನು ಹೇಳಲ್ವೆ. ಫ್ರೆಂಡ್ಶಿಪ್ ನೆಪದಲ್ಲಿ ನಿಂಜೊತೆ ಸುತ್ತಾಡೊ, ಮಜಾ ಮಾಡೊ ತೆವಲು ನಂಗಿಲ್ಲ. ಆದ್ರೆ ಮಾತಾಡಬೇಕು, ಮಾತಾಡ್ತಾನೇ ಇರಬೇಕು ಅನ್ನೋ ಬಯಕೆ ಇರೋದು ನಿಜ. ಹಂಗ್ಯಾಕೆ ಅನ್ನೋದು ನಂಗೊತ್ತಿಲ್ಲ, ನನ್ನ ಹೋತದ ಗಡ್ಡದ ಆಣೆಗೂ ಗೊತ್ತಿಲ್ಲ!
ಇಷ್ಟಾದ್ರೂ ನೀನು ನನ್ನ್ ಹತ್ರ ಮಾತಾಡ್ಲೇಬೇಕ್ ಅಂತ ಜಬರ್ದಸ್ತು ಮಾಡೋದಿಲ್ಲ, ಮಾಡಕ್ಕೆ ನಂಗಿಷ್ಟ ಇಲ್ಲ. ನಿನ್ನ ಉಳಿದೆಲ್ಲಾ ಸ್ನೇಹಿತರ ಹಾಗೆ ನಾನೂ ಕೂಡ ಅಂತ ತಿಳಿದು ಮಾತಾಡಿದ್ರೆ ನಂಗೆ ಸಂತೋಷ ಆಗತ್ತೆ. ಆದ್ರೆ ನಿನ್ನ ಹಿಂದೆ ನಾನು ಅಥವಾ ನನ್ನ ಹಿಂದೆ ನೀನು ಸುತ್ತಿದ್ರೆ ಕಾಲೇಜಲ್ಲಿ ಇಲ್ಲದ್ದು-ಸಲ್ಲದ್ದು ಮಾತಾಡ್ತಾರೆ. ಅದ್ಕೇ, ೯೦೧೭೪೩೫೭೬೧ ನನ್ನ ಮೊಬೈಲ್ ನಂಬರು. ನಿಂಗಾಗೇ ಮಾತಾಡಬೇಕು ಅನ್ನಿಸಿದಾಗ ಫೋನ್ ಮಾಡು. ಅಲ್ಲೀವರೂ ಕಾಯ್ತಾ ಇರೋ
ತ್ರಿಪುರ ಸುಂದರ!

Advertisements

1 Comment »

  1. 1

    call madidra nimma tripura sundari………..thumbha chennagide


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: