ಬರ್ಸ್ಟ್ ಆಗಿದ್ದು ಯಾವ ಟೈರು?

ಅಧ್ಯಾಪಕರನ್ನು ಪಿಗ್ಗಿ ಬೀಳಿಸಲು ಹೋಗಿ ತಾವೇ ಬೆಪ್ಪರಾದ ಜಾಣ ವಿದ್ಯಾರ್ಥಿಗಳ ಕಥೆ ಇದು. ಈ ಘಟನೆ ನಡೆದದ್ದು ಬಾಂಬೆಯಲ್ಲಿ, ೧೯೯೬ರಲ್ಲಿ. ಏನಾಯಿತೆಂದರೆ, ಅದೊಂದು ಭಾನುವಾರ ವೀಕೆಂಡ್ ಪಾರ್ಟಿಯ ನೆಪದಲ್ಲಿ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊರಗೆ ಹೊರಟರು. ಅದರ ಮರುದಿನವೇ, ಅಂದರೆ ಸೋಮವಾರ ಮಧ್ಯಾಹ್ನ ಅವರಿಗೆ ತರಗತಿಯ ಅಧ್ಯಾಪಕರೇ ನಡೆಸುವ ಪರೀಕ್ಷೆಯಿತ್ತು. ವಿಭಾಗದ ಮುಖ್ಯಸ್ಥರೇ ಆ ಪರೀಕ್ಷೆ ನಡೆಸುತ್ತಾರೆಂದು ಗೊತ್ತಿದ್ದೂ ಅವರು ಪಾರ್ಟಿಗೆ ಹೋಗಿಬಿಟ್ಟರು.
ಪಾರ್ಟಿ ಅಂದ ಮೇಲೆ ಕೇಳಬೇಕೆ? ಗುಂಡು ಹಾಕುತ್ತ ಕುಳಿತವರಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಕಡೆಗೊಮ್ಮೆ ಎಲ್ಲರೂ ದಡಬಡಿಸಿ ಎದ್ದಾಗ ಆಗಲೇ ಮಧ್ಯರಾತ್ರಿ ಒಂದೂವರೆ. ಎಲ್ಲರೂ ತೂರಾಡಿಕೊಂಡೇ ರೂಮು ತಲುಪಿಕೊಂಡರು. ಬೆಳಗ್ಗೆ ಎದ್ದವರಿಗೆ, ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರ ಬರೆಯಲು ಸಾಧ್ಯವೇ ಇಲ್ಲ ಅನ್ನಿಸಿತು.
ಹೇಳಿ ಕೇಳಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲವೆ? ತಕ್ಷಣವೇ ತಲೆ ಓಡಿಸಿದರು. ನಾಲ್ವರೂ ಸರಭರನೆ ಹಾಕಿದ್ದ ಬಟ್ಟೆ ಬಿಚ್ಚಿ ಅವುಗಳನ್ನು ಧೂಳಿನಲ್ಲಿ ಹೊರಳಾಡಿಸಿದರು. ನಂತರ ಮೈ-ಕೈ, ಕಾಲಿಗೆಲ್ಲ ಅಲ್ಲಲ್ಲಿ ಗ್ರೀಸು ಮೆತ್ತಿಕೊಂಡು ಅದೇ ವೇಷದಲ್ಲಿ ಸೀದಾ ವಿಭಾಗದ ಮುಖ್ಯಸ್ಥರ ಛೇಂಬರಿಗೇ ಬಂದು ಹೇಳಿದರು : `ಸರ್, ನಿನ್ನೆ ರಾತ್ರಿ ನಾವೆಲ್ಲ ಒಂದು ಮದುವೆಗೆ ಹೋಗಿದ್ವಿ. ಆ ಕಡೆಯಿಂದ ಬರ್ತಾ ಇರೋವಾಗ ರಾತ್ರಿ ಹತ್ತೂವರೆಯಲ್ಲಿ ಕಾರಿನ ಟೈರ್ ಬರ್ಸ್ಟ್ ಆಯಿತು. ನಾವೆಲ್ಲ ಇಡೀ ರಾತ್ರಿ ಕಾರನ್ನು ನೂಕಿಕೊಂಡೇ ಬಂದೆವು. ಹಾಗಾಗಿ ಪರೀಕ್ಷೆಗೆ ಓದಿಕೊಂಡಿಲ್ಲ. ದಯವಿಟ್ಟು ನಮಗೆ ಬೇರೊಂದು ಪರೀಕ್ಷೆ ಕೊಡಿ ಪ್ಲೀಸ್…’
ಈ ನಾಲ್ವರನ್ನೂ ಒಮ್ಮೆ ಕರುಣೆಯಿಂದ ನೋಡಿದ ಅಧ್ಯಾಪಕರು- `ಸರಿ. ಗುರುವಾರ ನೀವು ನಾಲ್ಕು ಜನಕ್ಕೆಂದೇ ಸ್ಪೆಶಲ್ಲಾಗಿ ಪರೀಕ್ಷೆ ಇಟ್ಕೋತೀನಿ. ಈಗ ರೂಂಗೆ ಹೋಗಿ. ರೆಸ್ಟ್ ತಗೊಳ್ಳಿ’ ಅಂದರು.
ಅಂತೂ ವಿಭಾಗದ ಮುಖ್ಯಸ್ಥರನ್ನೇ ನಾಟಕದ ಮೂಲಕ ಯಾಮಾರಿಸಿದ ಖುಷಿಯಲ್ಲಿ ಈ ನಾಲ್ವರೂ ರೂಮು ತಲುಪಿಕೊಂಡರು. ಮಾತ್ರವಲ್ಲ, ತುಂಬ ಶ್ರದ್ಧೆಯಿಂದ ಓದಿಕೊಂಡರು.
ಕಡೆಗೂ ಆ ಗುರುವಾರ ಒಂದೇ ಬಂತು. ಈ ನಾಲ್ವರೂ ಸೀದಾ ವಿಭಾಗದ ಮುಖ್ಯಸ್ಥರ ಛೇಂಬರ್ಗೆ ಬಂದು `ಸರ್, ನಾವು ರೆಡಿ’ ಅಂದರು. ಆ ಅಧ್ಯಾಪಕರು ಒಮ್ಮೆ ನಸುನಕ್ಕು- ಸರಿ, ಆದ್ರೆ ಮೊದಲೇ ಹೇಳ್ತಾ ಇದೀನಿ. ಇದು ವಿಶೇಷ ಪರೀಕ್ಷೆ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಕೂಡ. ಹಾಗಾಗಿ ನೀವು ನಾಲ್ವರೂ ನಾಲ್ಕು ಬೇರೆ ಬೇರೆ ರೂಂಗಳಲ್ಲಿ ಕೂತು ಪರೀಕ್ಷೆ ಬರೆಯಬೇಕು’ ಅಂದರು.
ಈ ವಿದ್ಯಾರ್ಥಿಗಳು ಅದೆಷ್ಟು ಚೆನ್ನಾಗಿ ಓದಿಕೊಂಡಿದ್ದರು ಅಂದರೆ-ಎಲ್ಲಿಯೇ ಕೂರಿಸಿ, ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸುವಷ್ಟರ ಮಟ್ಟಿಗೆ ತಯಾರಾಗಿದ್ದರು. ಹಾಗಾಗಿ, ಈ ಕಂಡೀಷನ್ಗೆ ನಾವು ರೆಡಿ’ ಅಂದರು.
ಸರಿ, ಪರೀಕ್ಷೆ ಶುರುವಾಯಿತು. ನಾಲ್ಕು ಪ್ರತ್ಯೇಕ ರೂಂಗಳಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟು ಅಧ್ಯಾಪಕರು ಎಲ್ಲರಿಗೂ ಪ್ರಶ್ನೆ ಪತ್ರಿಕೆ ನೀಡಿದರು. ಅದರಲ್ಲಿದ್ದುದು ಎರಡೇ ಪ್ರಶ್ನೆಗಳು!
೧. ವಿದ್ಯಾರ್ಥಿಯ ಹೆಸರು ………. (೨ ಅಂಕಗಳು)
೨. ಮೊನ್ನೆ ಬರ್ಸ್ಟ್ ಆದ ಟೈರ್ ಯಾವುದು? (೯೮ ಅಂಕಗಳು)
ಫಲಿತಾಂಶ ಏನಾಯಿತೆಂದು ವಿವರಿಸಬೇಕಿಲ್ಲ ತಾನೆ?
– ಮಣೀ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: