ಲಂಕೇಶ್…

null

ಮೊಟ್ಟ ಮೊದಲ ಬಾರಿಗೆ ಸ್ಕೂಟರ್/ಬೈಕು ಓಡಿಸಿದಾಗಿನ ನಿಮ್ಮ ಅನುಭವ ಹೇಳಿ ಎಂದು ಯಾರಾದರೂ ಕೇಳಿದರೆ ನಾವೆಲ್ಲ ಬರೀ ಸುಳ್ಳನ್ನೇ ಹೇಳಿ ಸ್ಕೋಪ್ ತೆಗೆದುಕೊಳ್ಳುತ್ತೇವೆ. ಆದರೆ, ಕನ್ನಡದ ಅಪರೂಪದ ಲೇಖಕರಲ್ಲಿ ಒಬ್ಬರಾದ ಲಂಕೇಶ್, ಆರಂಭದ ದಿನಗಳಲ್ಲಿ ತಾವು ಸ್ಕೂಟರ್ ಓಡಿಸುತ್ತಿದ್ದುದು ಹೇಗೆಂದು ತುಂಬಾ ಪ್ರಾಮಾಣಿಕವಾಗಿ ಹೇಳಿದ್ದಾರೆ. ಎಂಥವರಿಗೂ ಇಷ್ಟವಾಗುವ ಈ ಬರಹವನ್ನು ಒಮ್ಮೆ ಓದಿ ನೋಡಿ…
…ಮದುವೆಯಾದ ಮೇಲೆ ನಾನು ಅನುಭವಿಸಿದ ಏಕತಾನತೆ, ಒಂದು ರೀತಿಯಲ್ಲಿ ಸತ್ತೇಹೋದಂತಹ ದಿಗ್ಭ್ರಮೆ ಮತ್ತು ಆಗಲೇ ನಾನು ನಾಲ್ಕಾರು ಕತೆ ಬರೆದು `ಪ್ರಜಾವಾಣಿ’ಗೆ ಕಳಿಸಿ ಅವೆಲ್ಲ ಪ್ರಕಟವಾದದ್ದು, ಅದರಿಂದಲೂ ನಾನು ದೊಡ್ಡ ಲೇಖಕ ಎಂದು ಯಾರೂ ಹೇಳದೆ ಇದ್ದದ್ದು ಇದನ್ನೆಲ್ಲ ವಿವರಿಸಿ ಪ್ರಯೋಜನವಿಲ್ಲ.
ಒಂದು ದಿನ ನಾನು, ನನ್ನ ಹೆಂಡತಿ ಇಂದಿರಾ ಶಿವಮೊಗ್ಗೆಯಿಂದ ಬೆಂಗಳೂರಿನ ಆಕೆಯ ಅಕ್ಕನ ಮನೆಗೆ ಹೊರಟು ಹೋಗಲು ತೀರ್ಮಾನಿಸಿದೆವು. ಬಸ್ಸಿನಲ್ಲಿ ಹೋಗುವುದು ಯಥಾಪ್ರಕಾರವಾಯಿತು ಎಂದು ಆ ಯೋಜನೆಯನ್ನು ತಿರಸ್ಕರಿಸಿದೆವು. ನಮ್ಮಲ್ಲಿದ್ದ ಕೆಲವೇ ನೂರು ರೂಪಾಯಿ, ಬೆಳ್ಳಿ ಲೋಟ, ತಟ್ಟೆ ಇತ್ಯಾದಿಗಳು, ಅವಳಲ್ಲಿದ್ದ ಒಂದೆರಡು ಒಡವೆ-ಎಲ್ಲವನ್ನೂ ಮಾರಿ ಒಂದು ಸ್ಕೂಟರ್ ತೆಗೆದುಕೊಳ್ಳಲು ನಿರ್ಧರಿಸಿದೆವು. ಅವಳ ಭಾವ ದಕ್ಷಿಣಾಮೂರ್ತಿ ಬೆಂಗಳೂರಲ್ಲಿ ಮೆಕ್ಯಾನಿಕ್ ಆಗಿದ್ದ ಅವನಿಗೆ ಸ್ಕೂಟರ್ಗಳ ಸಂಪರ್ಕವಿತ್ತು. ಕೂಡಲೇ ಅವನಿಗೆ ಕಾಗದ ಬರೆದು ಒಂದು ಹಳೆಯ ಸ್ಕೂಟರ್ ಖರೀದಿ ಮಾಡಲು ಒತ್ತಾಯಿಸಿದೆವು.
ಒಂದು ಸಂಜೆ ದಕ್ಷಿಣಾಮೂರ್ತಿ ಒಂದು ಅಕ್ಕಪಕ್ಕ ಹೊದಿಕೆ ಇಲ್ಲದೇ ಇದ್ದ, ಸ್ಕೂಟರ್ಗಿಂತ ಸಪೂರವಾದ, ಸೈಕಲ್, ಮೊಪೆಡ್ಗಿಂತ ದಪ್ಪ ಇದ್ದ ಇಟಾಲಿಯನ್ ಲ್ಯಾಂಬ್ರೆಟಾ ತಂದುಬಿಟ್ಟರು. ಅದಕ್ಕೆ ಸಾವಿರದ ಐನೂರು ರೂಪಾಯಿ. ಆಗಿನ ಕಾಲದಲ್ಲಿ ಹೊಸ ಲ್ಯಾಂಬ್ರೆಟಾ ತುಂಬಾ ಚೆನ್ನಾಗಿತ್ತು; ಅರೆನಗ್ನ ಹುಡುಗಿಯಂತೆ ಕಾಣುತ್ತಿದ್ದ ಅದು ಆಗ ಜನಪ್ರಿಯವಾಗಿದ್ದ ಲ್ಯಾಂಬ್ರೆಟಾ, ವೆಸ್ಪಾಕ್ಕಿಂತ ಹಗುರವಾಗಿತ್ತು. ಅದು ಬಂದ ತಿಂಗಳಲ್ಲಿ ಅದನ್ನು ಬಿಡುವುದನ್ನು ನಾನು ಕಲಿತೆ.
ಒಂದು ಬೆಳಗಿನ ಜಾವ ನಾಲ್ಕು ಗಂಟೆಗೇ ಎದ್ದ ನಾನು, ಇಂದಿರಾ ಕೈಗೆ ಸಿಕ್ಕ ಬಟ್ಟೆಗಳನ್ನು ಕಟ್ಟಿಕೊಂಡು ಪರಾರಿಯಾಗುವ ಪ್ರೇಮಿಗಳ ಶೈಲಿಯಲ್ಲಿ ಕತ್ತಲಲ್ಲೇ ಹೊರಟುಬಿಟ್ಟೆವು. ಆದರೆ ನನಗೆ ಸ್ಕೂಟರ್ ರೈಡಿಂಗ್ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲ ಅಂತ ಗೊತ್ತಾಯಿತು; ಅರಸೀಕೆರೆಯ ಹತ್ತಿರದ ತ್ಯಾವವುಳ್ಳ ಜಾಗವೊಂದರಲ್ಲಿ ಸುಮಾರು ಹದಿನೈದು ಅಡಿಗಳಷ್ಟು ದೂರ ಜಾರಿ ರಸ್ತೆಯ ಪಕ್ಕಕ್ಕೆ ಹೋಗಲು ಯತ್ನಿಸುತ್ತಿದ್ದಾಗ ನನ್ನ ಹೆಂಡತಿಯನ್ನು ಸ್ಕೂಟರ್ನಿಂದ ಬೀಳಿಸಿ, ಹಾಗೆ ಬಿದ್ದದ್ದೇ ಗೊತ್ತಾಗದೆ ನೂರಡಿಯಷ್ಟು ಮುಂದೆ ಸಾಗಿ ಅವಳು ನೋವಿನಿಂದ ಅರಚಿಕೊಂಡಾಗ ಬೆಚ್ಚಿದೆ. ಆಮೇಲೆ ಬೆಂಗಳೂರಲ್ಲೂ `ನಿಂತು ಹೋಗಿ’ ಎಂದು ಇದ್ದ ಒಂದು ಕಡೆ ನಿಲ್ಲಿಸುವುದಕ್ಕೆ ಬದಲು ಆಕ್ಸಿಲರೇಟರ್ ಒತ್ತಿ ಸುತ್ತಣ ಜನ `ಹೋ’ ಎಂದು ಕೂಗಿಕೊಂಡು ನನ್ನ ಸ್ಕೂಟರ್ ಬಿಡುವ ತಜ್ಞತೆಗೆ ಧಕ್ಕೆ ಬಂದಂತಾಗಿ ಬೆವೆತುಹೋಗಿದ್ದೆ…
(ಕೃಪೆ: ಹುಳಿಮಾವಿನ ಮರ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: