ಫ್ರೆಂಡ್ಶಿಪ್ ಡೇ ಕಥೆ ಗೊತ್ತಾ?

ಮೊನ್ನೆ ಆಗಸ್ಟ್ ೩ರಂದು ಫ್ರೆಂಡ್ಶಿಪ್ಡೇ ಬಂದು ಹೋಯ್ತು ತಾನೆ? ಆ ನೆಪದಲ್ಲಿ ಗೆಳೆಯರ ಕೈಗೆ ರಕ್ಷಾ ಬಂಧನದಂಥ ದಾರ ಕಟ್ಟುವ; ಜತೆಯಲ್ಲಿ ತಿಂಡಿ ತಿನ್ನುವ; ಊಟ ಮಾಡುವ; ರಾತ್ರಿ ಬಿಂದಾಸ್ ಆಗಿ ಪಾರ್ಟಿ ಮಾಡುವ ಪ್ರಹಸನಗಳೆಲ್ಲಾ ನಡೆದು ಹೋದವು. ಫ್ರೆಂಡ್ಶಿಪ್ ಡೇ ನೆಪದಲ್ಲಿ ಹಾಗೇ ಸುಮ್ಮನೆ ಅದೆಷ್ಟೋ ನೂರು ಮೆಸೇಜುಗಳು ಮೊಬೈಲಿನಿಂದ ಮೊಬೈಲಿಗೆ ಇಪ್ಪತ್ತರ ಹುಡುಗನ ಹಸಿಬಿಸಿ ಆಸೆಯ ಥರಾ ಎಲ್ಲರ ಮನದ ಕದ ತಟ್ಟಿ ಹೋದವು.
ಅದ್ಸರಿ, ಈ ಫ್ರೆಂಡ್ಶಿಪ್ ಡೇ ಚಾಲ್ತಿಗೆ ಬಂದದ್ದಾದರೂ ಯಾವಾಗಿಂದ? ಅದರ ಹಿನ್ನೆಲೆಯಾದರೂ ಏನು ಎಂದು ಹುಡುಕಲು ಹೊರಟರೆ ಒಂದು ಕಥೆ ಎದುರು ನಿಲ್ಲುತ್ತದೆ: ಏನೆಂದರೆ, ಅಮೆರಿಕದಲ್ಲಿ ೧೯೩೫ ಆಗಸ್ಟ್ ೧ರ ಶನಿವಾರ, ಯಾವುದೋ ತಪ್ಪು ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲಾಯಿತು. ಹೀಗೆ ಸತ್ತು ಹೋದನಲ್ಲ? ಅವನಿಗೊಬ್ಬ ಜೀವದ ಗೆಳೆಯನಿದ್ದ. ಈ ಜೀವದ ಗೆಳೆಯ, ಸತ್ತು ಹೋದ ಗೆಳೆಯನನ್ನು ನೆನೆದು, ಅವನ ಸಾವಿನ ದುಃಖ ಭರಿಸಲಾಗದೆ ಮರುದಿನವೇ ಒಂದು ಪತ್ರದಲ್ಲಿ ಎಲ್ಲವನ್ನೂ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ! ಅವತ್ತು ಭಾನುವಾರವಾಗಿತ್ತು.
ಈ ಆಪ್ತಮಿತ್ರರ ಗೆಳೆತನದ ಕಥೆ ಅಮೆರಿಕದವರ ಮನಸ್ಸಿಗೆ ನಾಟಿತು. ಈ ಇಬ್ಬರ ಮಧುರ ಸ್ನೇಹದ ನೆನಪಿಗೆಂದೇ ಪ್ರತೀ ವರ್ಷದ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಫ್ರೆಂಡ್ಶಿಪ್ಡೇ ಎಂದು ಆಚರಿಸಲು ಅಮೆರಿಕ ನಿರ್ಧರಿಸಿತು. ಅಂದಹಾಗೆ, ಮೊನ್ನೆ ಮುಗಿಯತಲ್ಲ? ಅದು ೭೨ನೇ ಫ್ರೆಂಡ್ಶಿಪ್ಡೇ!
ಆ ಗೆಳೆಯರ ಅಮರ ಗೆಳೆತನಕ್ಕೊಂದು ಪ್ರೀತಿಯ ಸಲಾಂ.
-ಮಣೀ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: