`ದ’ ಎಂದರೇನು?

ಆ ಅಕ್ಷರದ ಅರ್ಥ ಮೂವರಿಗೆ ಮೂರು ತೆರನಾಗಿ ಆಯಿತು!
ಒಮ್ಮೆ ದೇವತೆಗಳು, ಮನುಷ್ಯರು ಮತ್ತು ರಾಕ್ಷಸರು-ಮೂವರೂ ಬ್ರಹ್ಮದೇವನಲ್ಲಿ ವಿದ್ಯೆ ಕಲಿಯಲು ಹೋದರು. ಕೆಲ ಕಾಲ ಗತಿಸಿದ ನಂತರ ಬ್ರಹ್ಮನಿಂದ ಉಪದೇಶ ಪಡೆಯಲು ಅವರು ಬಯಸಿದರು.
ಮೊಟ್ಟಮೊದಲು ದೇವತೆಗಳು ಬ್ರಹ್ಮನ ಹತ್ತಿರ ಬಂದು `ಪ್ರಭೋ, ನಮಗೆ ಉಪದೇಶ ಮಾಡಿ’ ಎಂದು ಭಿನ್ನವಿಸಿಕೊಂಡರು. ಪ್ರಜಾಪತಿ ಕೇವಲ `ದ’ ಎಂಬ ಒಂದೇ ಅಕ್ಷರವನ್ನು ಉಚ್ಚರಿಸಿದ. ಅದನ್ನು ಕೇಳಿದ ದೇವತೆಗಳು ನುಡಿದರು- `ಪ್ರಭೋ, ತಿಳಿಯಿತು. ನಮ್ಮ ಸ್ವರ್ಗ ಲೋಕದಲ್ಲಿ ಭೋಗ ಭಾಗ್ಯಗಳಿಗೆ ಕಡಿಮೆಯಿಲ್ಲ. ಅತ್ಯಂತ ವಿಫುಲವಾಗಿ ಲಭ್ಯವಿರುವ ಅವುಗಳಲ್ಲಿ ಮಗ್ನರಾಗಿ ನಾವು ಕೊನೆಗೆ ಸ್ವರ್ಗದಿಂದ ಪತನ ಹೊಂದುವೆವು. ಆದ್ದರಿಂದ ತಾವು ನಮಗೆ `ದ’ ಅಂದರೆ ದಮನ ಅರ್ಥಾತ್ ಇಂದ್ರಿಯ ಸಂಯಮದ ಉಪದೇಶವನ್ನು ಮಾಡಿದ್ದೀರಿ’.
ಆಗ ಪ್ರಜಾಪತಿ ಬ್ರಹ್ಮ `ಸರಿ, ನನ್ನ ಉಪದೇಶವನ್ನು ನೀವು ಅರ್ಥಮಾಡಿಕೊಂಡಿರಿ’ ಎಂದ.
ಆಮೇಲೆ ಮನುಷ್ಯರು ಬಂದು ನಿಂತು `ನಮಗೆ ಉಪದೇಶ ಮಾಡಿ ಪ್ರಭೋ’ ಎಂದು ಬೇಡಿಕೊಂಡರು. ಅವರಿಗೂ ಬ್ರಹ್ಮ `ದ’ ಎಂಬ ಒಂದೇ ಅಕ್ಷರವನ್ನೇ ಹೇಳಿದ. ಮತ್ತೆ `ನಿಮಗೆ ತಿಳಿಯಿತೆ?’ ಎಂದು ಕೇಳಿದ.
ಮನುಷ್ಯರು ಹೇಳಿದರು- `ತಿಳಿಯಿತು ಪ್ರಭೋ. ತಾವು ನಮಗೆ ದಾನ ಮಾಡುವ ಉಪದೇಶವನ್ನು ಮಾಡಿದ್ದೀರಿ. ಏಕೆಂದರೆ ಮನುಷ್ಯರಾದ ನಮ್ಮಲ್ಲಿ ಜನ್ಮವಿಡೀ ಸಂಗ್ರಹ ಮಾಡುವ ದುರಾಶೆಯಿರುತ್ತದೆ. ಆದ್ದರಿಂದ ದಾನದಲ್ಲೇ ನಮ್ಮ ಕಲ್ಯಾಣವಿದೆ.’
ಆಗ ಪ್ರಜಾಪತಿ, `ಸರಿ. ನನ್ನ ಉಪದೇಶದ ಅರ್ಥ ಅದೇ’ ಎಂದ.
ನಂತರ ಸುರರು ಬ್ರಹ್ಮನ ಬಳಿಗೆ ಬಂದು ತಮಗೆ ಉಪದೇಶ ಮಾಡಲು ಭಿನ್ನವಿಸಿಕೊಂಡರು. ಆಗಲೂ ಬ್ರಹ್ಮ ಅದೇ `ದ’ ಎಂಬ ಒಂದೇ ಅಕ್ಷರವನ್ನು ಉಚ್ಚರಿಸಿದ. ಅಸುರರು- `ನಾವು ಸ್ವಭಾವತಃ ಹಿಂಸಾಚಾರಿಗಳು. ಕ್ರೋಧ, ಹಿಂಸೆಗಳು ನಮ್ಮ ನಿತ್ಯ ವ್ಯವಹಾರ. ಆದ್ದರಿಂದ `ದಯೆ’ಯೇ ನಮ್ಮ ಕಲ್ಯಾಣದ ಮಾರ್ಗ ಎಂಬುದರಲ್ಲಿ ಸಂದೇಹವಿಲ್ಲ. ದಯೆಯಿಂದಲೇ ಈ ದುಷ್ಕೃತ್ಯಗಳನ್ನು ಬಿಟ್ಟು ಪಾಪದಿಂದ ಮುಕ್ತರಾಗಬಲ್ಲೆವಾದ್ದರಿಂದ ಬ್ರಹ್ಮ ದೇವ ನಮಗೆ ಈ ಉಪದೇಶವಿತ್ತಿದ್ದಾನೆ ಎಂದು ಯೋಚಿಸಿ ಹೊರಡಲು ಸಿದ್ಧರಾದರು.
ಬ್ರಹ್ಮ ಅವರನ್ನು ತಡೆದು `ಅರ್ಥವಾಯಿತೇ ನಿಮಗೆ?’ ಎಂದು ಕೇಳಿದ.ಅಸುರರು `ಹೌದು ಪ್ರಭೋ. ಪ್ರಾಣಿ ಮಾತ್ರದ ಮೇಲೆ ದಯೆ ತೋರಲು ತಾವು ಉಪದೇಶ ಮಾಡಿದ್ದೀರಿ’ ಎಂದರು. ಬ್ರಹ್ಮ `ಸರಿ. ನನ್ನ ಉಪದೇಶದ ಅರ್ಥವೇ ಅದು’ ಎಂದ.
ಪ್ರಜಾಪತಿಯ ಅನುಶಾಸನದ ಪ್ರತಿಧ್ವನಿ ನಮಗೆ ಇಂದೂ ಮೇಘ ಗರ್ಜನೆಯಲ್ಲಿ `ದ, ದ, ದ’ ಎಂಬ ರೂಪದಲ್ಲಿ ಕೇಳಿಸುತ್ತಿದೆ. `ಭೋಗ ಪ್ರಧಾನ ದೇವತೆಗಳೇ, ಇಂದ್ರಿಯ ದಮನ ಮಾಡಿರಿ’, `ಸಂಗ್ರಹ ಪ್ರಧಾನ ಮನುಷ್ಯರೇ ಭೋಗ ಸಾಮಗ್ರಿಯನ್ನು ದಾನ ಮಾಡಿರಿ’, `ಕ್ರೋಧ ಪ್ರಧಾನ ಅಸುರರೇ, ಪ್ರಾಣಿಮಾತ್ರದ ಮೇಲೆ ದಯೆ ತೋರಿರಿ’ ಎಂಬುದೇ ಮೇಘ ಗರ್ಜನೆಯ ಅರ್ಥವಾಗಿದೆ.
ಆದ್ದರಿಂದ ನಾವು ದಮನ, ದಾನ, ದಯಾ ಮೂರನ್ನೂ ಆಚರಿಸಿ ಅವುಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: