ಅವಳು ಕೈ ಕೊಟ್ಟರೂ ಇವನು ಕೈ ಬಿಡಲಿಲ್ಲ!

ಹೇಳಿ ಮಾಡಿಸಿದ ಜೋಡಿ ಅಂತಾರಲ್ಲ? ಹಾಗಿದ್ರು ಅವರು.
ಅವಳಿಗೆ ಇವನನ್ನು ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ. ಇವನಾದರೂ ಅಷ್ಟೆ. ಅವಳ ನೆನಪಿಲ್ಲದೆ ಉಸಿರಾಡುತ್ತಲೂ ಇರಲಿಲ್ಲ. `ಒಂದೆರಡು ವರ್ಷಗಳ ಕಾಲ ಶುದ್ಧ ಪ್ರೇಮಿಗಳಂತೆ ಹಾಯಾಗಿರೋಣ. ನಂತರ ಮದುವೆಯಾಗೋಣ` ಎಂದು ಇಬ್ಬರೂ ಮಾತಾಡಿಕೊಂಡಿದ್ದರು. ಆದರೆ, ಯಾವುದಾದರೂ ಒಂದು ಮಧುರ ಸಂಬಂಧವನ್ನು ಕಂಡರೆ ಅಸೂಯೆ ಪಡುವವರು; ಆ ಬಾಂಧವ್ಯಕ್ಕೆ ಹುಳಿ ಹಿಂಡುವವರು ಎಲ್ಲ ಕಡೆಯೂ ಇದ್ದೇ ಇರುತ್ತಾರೆ ತಾನೆ?
ಅಂಥವರೇ ಸೇರಿಕೊಂಡು ಮೊದಲು ಈ ಹುಡುಗಿಯ ತಲೆ ಕೆಡಿಸಿದರು. ಹುಡುಗನ ಬಗ್ಗೆ ಇಲ್ಲ ಸಲ್ಲದ್ದನ್ನೆಲ್ಲ ಹೇಳಿದರು. ಪರಿಣಾಮ, ಗೆಳೆಯನ ಬದುಕಿನಿಂದ ಕಳಚಿಕೊಳ್ಳಲು ಆಕೆ ನಿರ್ಧರಿಸಿದಳು. ಹಾಗೆಂದು ಹುಡುಗನಿಗೆ ಸೂಚನೆ ಕೊಟ್ಟಳು. ಹುಡುಗ ಅತ್ತ, ಗೋಗರೆದ, ಬೇಡಿಕೊಂಡ. ಮಾಡದ ತಪ್ಪಿಗೆ `ಸಾರಿ’ ಕೇಳಿದ. ಉಹುಂ, ಅವಳು ಒಪ್ಪಲೇ ಇಲ್ಲ. ಬದಲಿಗೆ, `ನೋಡೂ, ಇವತ್ತಿಂದಲೇ ನಮ್ಮಿಬ್ಬರ ಸಂಬಂಧಕ್ಕೆ ಗುಡ್ಬೈ ಹೇಳೋಣ. ನೀನು ನನಗೆ ಅಂತ ಏನೇನು ಕೊಟ್ಟಿದೀಯೋ ಅದನ್ನೆಲ್ಲ ವಾಪಸ್ ಕೊಟ್ಟುಬಿಡ್ತೀನಿ’ ಅಂದಳು.
ಹುಡುಗನ ತಲೆಯಲ್ಲಿ ಮಿಂಚೊಂದು ಹೊಳೆದಂತಾಯಿತು. ಆತ ಹೇಳಿದ: `ಸರಿ, ಮೊದಲ ಭೇಟಿಯಲ್ಲೇ ನಾನು ನಿನ್ನ ಕೆನ್ನೆಗೆ ಮುತ್ತಿಟ್ಟಿದ್ದೆ. ಅದನ್ನು ವಾಪಸ್ ಕೊಡು. ಉಳಿದದ್ದು ಆಮೇಲೆ…’ ಅಂದ!
ತಕ್ಷಣವೇ ಅವಳಿಗೆ ಅವನ ಪ್ರೀತಿ, ಅವನ ಒಲುಮೆ, ಅವನಿಗೆ ತನ್ನ ಮೇಲಿರುವ ಮಮತೆ, ಮೋಹ ಹಾಗೂ ಅವನೊಳಗಿನ ಆರ್ದ್ರತೆ ನೆನಪಾಯಿತು. ಸರ್ರನೆ ಬಳಿ ಬಂದವಳೇ ಅವನ ಕೆನ್ನೆಗೆ ಮುತ್ತಿಟ್ಟು `ಸಾರಿ, ಐ ಲವ್ ಯೂ’ ಅಂದಳು!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: