ಅವರದು, ಗಂಧರ್ವರೂ ನಾಚುವಂಥ ದಾಂಪತ್ಯ’

ನೀ ಮುಡಿದ ಹೂವು
ಬಾಡದೆ ಇರಲಿ, ಸುಖವಿರಲಿ…

ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಗಳನ್ನೂ, ಅವರ ಪತ್ನಿ ವೆಂಕಮ್ಮನವರನ್ನೂ ಕಂಡಾಗ ಕಾವ್ಯ ಪ್ರೇಮಿಗಳಿಂದ ಹೊರಡುತ್ತಿದ್ದ ಉದ್ಗಾರವಿದು. ಬದುಕಿಡೀ `ಮೈಸೂರು ಮಲ್ಲಿಗೆ’ ಸಂಕಲನದ ನವದಂಪತಿಗಳಂತೆಯೇ ಬದುಕಿದ್ದು ಕೆಎಸ್ನ. ದಂಪತಿಯ ಹೆಚ್ಚುಗಾರಿಕೆ. ಅವರು ಪರಸ್ಪರರನ್ನು ಮೆಚ್ಚಿ ಕೊಂಡು ಮಾತನಾಡಿದ್ದನ್ನು, ಪರಸ್ಪರ ತಮಾಷೆ ಮಾಡಿಕೊಂಡು ಇಬ್ಬರೂ ನಕ್ಕದ್ದನ್ನು, ಪರಸ್ಪರರನ್ನು ವಹಿಸಿಕೊಂಡು ಹೇಳಿಕೆ ನೀಡಿದ್ದನ್ನು ಕನ್ನಡಿಗರು ನೋಡಿದರು. ಆದರೆ, ಕೆಎಸ್ನ ದಂಪತಿ ತಮಾಷೆಗಾದರೂ ಸಿಡಿಮಿಡಿಗೊಂಡದ್ದನ್ನು ಯಾರೆಂದರೆ ಯಾರೂ ನೋಡಲಿಲ್ಲ. ಉಹುಂ, ಜತೆಗಿರುವ ಅಷ್ಟೂ ದಿನ ನಾವು ಜಗಳಾಡುವುದಿಲ್ಲ ಎಂದು ಮೊದಲೇ ಆಣೆ ಮಾಡಿಕೊಂಡವರಂತೆ ಕೆಎಸ್ನ ದಂಪತಿ ಬದುಕಿಬಿಟ್ಟರು.
ಹೀಗಿದ್ದ ಸಂದರ್ಭದಲ್ಲಿಯೇ ಅದೊಮ್ಮೆ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ ನರ್ಸಿಂಗ್ ಹೋಂ ಒಂದಕ್ಕೆ ದಾಖಲಾದರು ಕೆಎಸ್ನ . ಅಲ್ಲಿ ಕೂಡ ಅವರಿಗೆ ಮನೆಯಲ್ಲಿರುವ ಹೆಂಡತಿಯ ಯೋಗಕ್ಷೇಮದ್ದೇ ಚಿಂತೆ. ಒಂದು ದಿನವೂ ನನ್ನನ್ನು ಬಿಟ್ಟು ಬದುಕಿಯೇ ಅವಳಿಗೆ ಗೊತ್ತಿಲ್ಲ. ಹಾಗಿರುವಾಗ ಹೇಗೆ ಬದುಕುತ್ತಿದ್ದಾಳೋ? ಕಾಲ ಕಾಲಕ್ಕೆ ಊಟ, ತಿಂಡಿ, ನಿದ್ರೆ ಮುಗಿಸುತ್ತಿದ್ದಾಳೋ ಇಲ್ಲವೋ ಎಂದೆಲ್ಲ ಚಡಪಡಿಸುತ್ತಿದ್ದರು ಕೆಎಸ್ನ . ತಮ್ಮನ್ನು ನೋಡಲು ಬಂದವರ ಜತೆಗೂ ಅದೇ ಮಾತು. ಯಾರು ಏನೇ ಹೇಳಿದರೂ ಅವರಿಗೆ ಸಮಾಧಾನವಾಗಲಿಲ್ಲ. ಕಡೆಗೆ ಒಂದು ಪದ್ಯದ ಮೂಲಕವೇ ಹೆಂಡತಿಗೆ ಸಮಾಧಾನ ಹೇಳಬೇಕು ಅಂದುಕೊಂಡರು. ಆಗಲೇ, ಗಂಡನ ಆರೋಗ್ಯಕ್ಕಾಗಿಯೇ ಪ್ರಾರ್ಥಿಸುತ್ತ, ಕನವರಿಸುತ್ತ, ನಿದ್ರೆಯಿಲ್ಲದೆ ನಡುಗುತ್ತ ಮಲಗಿರುವ ಹೆಂಡತಿಯ ಅಸ್ಪಷ್ಟ ಚಿತ್ರವೊಂದು ಕೆಎಸ್ನ ರ ಕಣ್ಮುಂದೆ ಮುಂಚಿ ಮಾಯವಾಯಿತು. ಅವರು ಕೂಡಲೇ ಹೀಗೆ ಬರೆದರು :
ನೆನೆಯುತ್ತ ನಿನಗಲ್ಲಿ
ತುಂಬು ನಿದ್ರೆಯು ಬರಲಿ
ಹೊಂಗನಸು ನಿದ್ದೆಯಲಿ ಕಂಡು ಬರಲಿ
ನೀ ಮುಡಿದ ಹೂವು
ಬಾಡದೆ ಇರಲಿ, ಸುಖವಿರಲಿ
ನಿನ್ನೊಲವೆ ನಿನ್ನನ್ನು ಕಾಪಾಡಲಿ !
*****
ವಾರದ ಹಿಂದೆ ಕತ್ರಗುಪ್ಪೆಯ ಕೆಎಸ್ನ ಪಾರ್ಕಿನಲ್ಲಿ ಏನನ್ನೋ ಧ್ಯಾನಿಸುತ್ತ ಕುಳಿತಾಗ ಯಾಕೋ, ಈ ಪ್ರಸಂಗ ನೆನಪಾಯಿತು.

Advertisements

1 Comment »

  1. 1
    kattimani 45E Says:

    ಪ್ರಿಯ ಮಣಿಕಾಂತ್ ಸರ್.,

    ಲೇಖನ ಇಷ್ಟವಾಯಿತು,ಬರವಣಿಗೆ ಮತ್ತು ನಿಜಜೀವದಲ್ಲು ಕೆ,ಎಸ್,ನ. ರು ದಂಪತ್ಯ ಪ್ರೀತಿಯನ್ನು ಮೆರೆದವರು, ಸಾಮಾನ್ಯನಿಗೂ ಅರ್ಥವಾಗುವ ಕಾವ್ಯದ ಮೂಲಕ ನಡಿನಾದ್ಯಂತ ಇಂದಿಗೂ ಅಪಾರಪ್ರೀತಿಗಳಿಸಿದವರು.ದಾಂಪತ್ಯಕ್ಕೊಂದು ಆದರ್ಶ ತಂದವರು..


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: