ಈ ಚಿತ್ರದ ಕಾಪಿರೈಟ್ ಎಲ್ಲ ಕನ್ನಡಿಗರದ್ದಂತೆ!

ಇದು ಅಪರೂಪದಲ್ಲಿ ಅಪರೂಪದ್ದು ಎಂಬಂಥ ಚಿತ್ರ. ಎಡದಿಂದ ಬಲಕ್ಕೆ ಗಮನಿಸುತ್ತಾ ಹೋಗಿ: ಈ ಚಿತ್ರದಲ್ಲಿ ಕನ್ನಡ ಸಾಹಿತ್ಯದ ಅಧ್ವರ್ಯುಗಳು ಅನ್ನಿಸಿಕೊಂಡ ಮಾಸ್ತಿವೆಂಕಟೇಶ ಅಯ್ಯಂಗಾರ್, ಡಿ.ವಿ.ಜಿ, ಕುವೆಂಪು, ಎಂ.ವಿ. ಸೀತಾರಾಮಯ್ಯ, ಕೆ. ಶಿವರಾಮಕಾರಂತ, ಅನಕೃ ಮತ್ತು ರಾಜರತ್ನಂ ಇದ್ದಾರೆ !
೧೯೫೫ರಲ್ಲಿ, ಮೈಸೂರಿನಲ್ಲಿ ಆಕಾಶವಾಣಿ ಕೇಂದ್ರ ಶುರುವಾಯಿತಲ್ಲ? ಆ ಸಂದರ್ಭದಲ್ಲಿ ನಡೆದ ಒಂದು ಚರ್ಚೆಯಲ್ಲಿ ಇಷ್ಟೂ ಜನ ಪಾಲ್ಗೊಂಡಿದ್ದರು. ಆಗ, ಹೆಸರಾಂತ ಛಾಯಾಗ್ರಾಹಕ ಟಿ.ಎಸ್. ಸತ್ಯನ್ ಅವರ ತಮ್ಮ ಟಿ.ಎಸ್. ನಾಗರಾಜನ್ ಕ್ಲಿಕ್ಕಿಸಿದ ಚಿತ್ರ ಇದು. ಈ ಅಪರೂಪದ ಫೋಟೋ ಸೆರೆಹಿಡಿದಿದ್ದಕ್ಕೆ ಆಗ ಆಕಾಶವಾಣಿಯವರು ನಾಗರಾಜನಿಗೆ ೬ ರೂಪಾಯಿಗಳ ಗೌರವ ಸಂಭಾವನೆ ಕೊಟ್ಟರಂತೆ!
ನಂಬಿ, ಈ ಏಳು ಮಂದಿ ಖ್ಯಾತನಾಮರು ಜತೆಗಿರುವ ಫೋಟೋ ತೆಗೆಯುವ ಅವಕಾಶ ಬೇರೆ ಯಾವ ಛಾಯಾಗ್ರಾಹಕನಿಗೂ ಸಿಗಲೇ ಇಲ್ಲ. ಇಂಥ ಇನ್ನೊಂದು ಚಿತ್ರ ಇಲ್ಲವೇ ಇಲ್ಲ. ಮನಸ್ಸು ಮಾಡಿದ್ದರೆ, ಈ ಚಿತ್ರದ ಕಾಪಿರೈಟ್ ನನ್ನದು ಎಂದು ಹೇಳಿಕೊಂಡೇ ಟಿ.ಎಸ್ ನಾಗರಾಜನ್ ಅವರು ಸಾವಿರಾರು ರೂ. ಸಂಪಾದಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಬದಲಿಗೆ ಈ ಚಿತ್ರದ ಕಾಪಿರೈಟ್ ಸಮಸ್ತ ಕನ್ನಡಿಗರದ್ದು ಎಂದರು !
ಅದಲ್ಲವೆ ದೊಡ್ಡತನ?

Advertisements

1 Comment »

  1. 1
    kattimani 45E Says:

    ನಿಜವಾಗಿಯುಅಪರೂಪದ್ದು ಸರ್. ಹಾಗೆ ನಾಗರಾಜ್ ರದು ದೊಡ್ಡ ಮನಸ್ಸು.ನಾನಂತು ನನ್ನ ಸಿಸ್ಟಮ್ ಗೆ ವಾಲ್ ಪೇಪರ್ ಮಾಡಿಕೋಂಡಿರುವೆನು. ಪ್ರಕಟಿಸಿದಕ್ಕೆ ನಿಮಗೂ ವಂದನೆಗಳು,,,


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: