ಅವರ ಜಾಗ ಯಾವುದೂಂತ ತೋರಿಸ್ತಾ ಇದೀನಿ!

ಅಮೆರಿಕದಲ್ಲಿ ಅದೊಮ್ಮೆ ಸ್ವಾಮಿ ವಿವೇಕಾನಂದರ ಭಾಷಣ ಏರ್ಪಾಡಾಗಿತ್ತು. ಭಾಷಣ ಕೇಳಲು ವಿದೇಶಿಯರು ಮಾತ್ರವಲ್ಲ, ಅಮೆರಿಕದಲ್ಲಿದ್ದ ಭಾರತೀಯರೂ ಹೋಗಿದ್ದರು. ವಿವೇಕಾನಂದರು ತಮ್ಮ ಭಾಷಣದ ಮಧ್ಯೆ ಸ್ವದೇಶಿ ವಸ್ತುಗಳನ್ನು ಬಳಸಿ, ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಅವರು ಸ್ವದೇಶಿ ನಿಲುವಂಗಿಯನ್ನೇ ಧರಿಸಿದ್ದರು ನಿಜ. ಆದರೆ, ಅವರ ಪಾದರಕ್ಷೆಗಳು ಮಾತ್ರ ವಿದೇಶದಲ್ಲಿ ತಯಾರಾಗಿದ್ದವು ಎಂಬುದು ಅಲ್ಲಿದ್ದ ಎಲ್ಲರಿಗೂ ಮೊದಲ ನೋಟಕ್ಕೇ ಅರ್ಥವಾಯಿತು. ಆ ಕಡೆಗೆ ಗಮನ ಕೊಡದವರಂತೆ ಭಾಷಣ ಮುಂದುವರಿಸಿದ ವಿವೇಕಾನಂದರು ಅಮೆರಿಕದಲ್ಲಿರುವ ಭಾರತೀಯರಾದ ನೀವೆಲ್ಲರೂ ಮುಂದೆ `ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಿ. ಆ ಮೂಲಕ ವಿದೇಶಿಯರನ್ನು ವಸ್ತ್ರದ ವಿಷಯದಲ್ಲಾದರೂ ದೂರವಿಡಿ’ ಎಂದರು.

ತಕ್ಷಣವೇ ಬಾಯಿ ಹಾಕಿದ ಅಮೆರಿಕನ್ ಹೆಂಗಸೊಬ್ಬಳು ವ್ಯಂಗ್ಯವಾಗಿ- `ನೀವು ಸ್ವದೇಶಿ ವಸ್ತ್ರಗಳನ್ನೇ ಧರಿಸಬೇಕೆಂದು ಆಗಿಂದಲೂ ಹೇಳುತ್ತಲೇ ಇದ್ದೀರಿ. ಸರಿ. ನಿಮ್ಮ ವಾದವನ್ನು ಒಪ್ಪೋಣ. ಆದರೆ, ನೀವೇಕೆ ಇಂಗ್ಲೆಂಡಿನಲ್ಲಿ ತಯಾರಾದ ಚಪ್ಪಲಿಗಳನ್ನು ಹಾಕಿಕೊಂಡಿದ್ದೀರಿ?’ ಎಂದು ಕೇಳಿಬಿಟ್ಟಳು.
ವಿವೇಕಾನಂದರು ಕೂಡಲೇ- `ನಮ್ಮ ದೇಶದಲ್ಲಿ ಬ್ರಿಟಿಷರಿಗೆ ಯಾವ ಸ್ಥಾನವಿದೆ ಎಂಬುದನ್ನು ತೋರಿಸಲು ಹಾಗೆ ಮಾಡಿದ್ದೇನೆ’ ಅಂದರಂತೆ!

Advertisements

12 Comments »

 1. 1
  ಪಲ್ಲವಿ ಎಸ್‌. Says:

  ಮಣಿಕಾಂತ್‌,

  ವಿವೇಕಾನಂದರ ಬಹಳಷ್ಟು ಬರವಣಿಗೆಗಳನ್ನು ನಾನು ಓದಿದ್ದೇನೆ. ಎಲ್ಲಿಯೂ ಅವರು ಬ್ರಿಟಿಷರ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಾಗಲಿ, ನೀವು ಬರೆದ ಇಂತಹ ಪ್ರಸಂಗಗಳಲ್ಲಿ ಪಾಲ್ಗೊಂಡಿದ್ದಾಗಲಿ ಓದಿಲ್ಲ. ಇದು ನಿಮಗೆ ಎಲ್ಲಿ ಸಿಕ್ಕಿತು? ದಯವಿಟ್ಟು ಆಕರ ತಿಳಿಸಿದರೆ, ಅದನ್ನೂ ಓದಲು ಯತ್ನಿಸುತ್ತೇನೆ.

  ನನಗೆ ತಿಳಿದಂತೆ, ವಿವೇಕಾನಂದರು ಬ್ರಿಟಿಷರ ಆಳ್ವಿಕೆ ವಿರುದ್ಧ ಮಾತನಾಡಿಲ್ಲ. ಅವರ ಮೂಲ ಉದ್ದೇಶ ವ್ಯಕ್ತಿಯನ್ನು ಜಾಗೃತಗೊಳಿಸುವುದಾಗಿತ್ತು. ಜಾಗೃತ ವ್ಯಕ್ತಿ ಏನು ಮಾಡಬೇಕು ಎಂಬುದರ ಕುರಿತಾಗಿತ್ತು.

  – ಪಲ್ಲವಿ ಎಸ್‌.

 2. 2

  Akkareya medam,
  naanu baritaa irodu khadak satya.
  ramakrishanashrama davaru prakatisiruva pustaka dalli ee Vishaya ide.
  Monne Ashrama kke hogiddaga alli maataadtaa iddaga ee vishaya prastaapakke bantu.
  nanna baraha dalli KAALA da bagge anumaana barabahude vinaha vishaya n maahiti bagge alla.bareyuva munna 10 sarti yochisi nantara ve barediddene.
  nimma preetuya maatugalige thanx
  manikanth.

 3. 3
  skhalana Says:

  nanage gottiro hange Pallavi avaru heltirodu sathya. Vivekanandaru ellu bere deshadavara bagge keelaagi maathadiddu oddiddu gnapaka illa.

  Skhalana
  skhalana.wordpress.com

 4. 4
  ಪಲ್ಲವಿ ಎಸ್‌. Says:

  ಪ್ರೀತಿಯ ಮಣಿಕಾಂತ್‌,

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗೆ ಗೊತ್ತಿರುವ ಖಡಕ್‌ ಸತ್ಯದ ಆಕರ ಗ್ರಂಥ ಯಾವುದು ಎಂದು ಹೇಳಿದರೆ, ನಾನೂ ನೋಡಬಹುದು. ರಾಮಕೃಷ್ಣಾಶ್ರಮದ ಬಹಳಷ್ಟು ಪುಸ್ತಕಗಳು ನನ್ನ ಪರಿಚಯದವರ ಬಳಿ ಇವೆ. ಕೆಲವೊಂದು ನನ್ನ ಹತ್ತಿರವೂ ಇವೆ. ನಾನೂ ಒಂದ್ಸಾರಿ ಆ ಮಾಹಿತಿ ನೋಡುತ್ತೇನೆ. ಅನ್ಯಥಾ ಭಾವಿಸಬೇಡಿ.

 5. 5

  akkareya pallavi n Skalana(?) avare,
  Namaskara.
  nimma mail id kalisi.nimage ee bagge mahiti odagisuttene.
  Akshara maitri sadaa jaariyallirali…
  dhanyavaada.

 6. 6
  ಪಲ್ಲವಿ ಎಸ್‌. Says:

  ನನ್ನ ಈ ಮೇಲ್‌ ಐಡಿ
  dharwad DOT pallavi AT mail DOT com

  ಸ್ಪಾಮ್‌ ರಗಳೆ ತಪ್ಪಿಸಿಕೊಳ್ಳಲು . ಅನ್ನು ಡಾಟ್‌ ಎಂದೂ @ ಅನ್ನು AT ಎಂದೂ ಬರೆದಿದ್ದೇನೆ. ನಿಮ್ಮ ಆಕರಗ್ರಂಥ ಬಹಿರಂಗವಾಗಿ ಹೇಳಲಾಗದಂಥದ್ದೇ ಎಂಬ ಕುತೂಹಲ ಹುಟ್ಟಿಸಿದೆ.

 7. 7
  ಪಲ್ಲವಿ ಎಸ್‌. Says:

  ಕ್ಷಮಿಸಿ, ನನ್ನ ಈ ಮೇಲ್‌ ಐಡಿ
  dharwad DOT pallavi AT gmail DOT com

  ಸ್ಪಾಮ್‌ ರಗಳೆ ತಪ್ಪಿಸಿಕೊಳ್ಳಲು . ಅನ್ನು ಡಾಟ್‌ ಎಂದೂ @ ಅನ್ನು AT ಎಂದೂ ಬರೆದಿದ್ದೇನೆ. ನಿಮ್ಮ ಆಕರಗ್ರಂಥ ಬಹಿರಂಗವಾಗಿ ಹೇಳಲಾಗದಂಥದ್ದೇ ಎಂಬ ಕುತೂಹಲ ಹುಟ್ಟಿಸಿದೆ

 8. 8
  skhalana Says:

  nanna email id skhalana AT yahoo DOT com
  dhanyavada

 9. 10

  Akkareya Pallavi n Skhalana,
  Nimage ninne mail maadiddene…mail sikkida bagge tilisi.haage nimage samadhaana aaytaa adannu kuda tilisi…
  Manikanth.

 10. 11

  ರಹಸ್ಯ ಮಾಹಿತಿ! ನನಗೂ ಬೇಕು. ಮಿಂಚಂಚೆ ವಿಳಾಸ ವರ್ಡ್-ಪ್ರೆಸ್ ಬಳಸುತ್ತಿರುವ ನಿಮಗೆ ಲಭ್ಯವಿದೆ ಎಂದುಕೊಂಡಿದ್ದೇನೆ.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: