ಕುಡಿದಾಗ ಮನುಷ್ಯ ಮೂರು ಥರಾ ಆಡ್ತಾನೆ,

ಯಾಕೆ ಗೊತ್ತಾ?

ತುಂಬ ಹಿಂದಿನ ಮಾತು. ಆಗಿನ್ನೂ `ಗುಂಡು’ ಅಥವಾ ಮದ್ಯ ಬಳಕೆಯಲ್ಲಿ ಇರಲಿಲ್ಲ. ಹೀಗಿದ್ದಾಗಲೇ ಮತ್ತೇರಿಸುವ ಪಾನೀಯವನ್ನು ಕಂಡುಹಿಡಿಯುವ ಯೋಚನೆ ಮನುಷ್ಯನಿಗೆ ಬಂತು. ಆತ ತಡಮಾಡಲಿಲ್ಲ. ಒಂದೆರಡು ದಿನ ಏನೇನೋ ಯೋಚಿಸಿದ. ನಂತರ, ಕಾಡಿಗೆ ಬಂದವನೇ-ಅಲ್ಲಿದ್ದ ಗಿಣಿಗಳಿಗೆ ಬಹುಕಾಲದಿಂದಲೂ ಆಶ್ರಯ ನೀಡಿದ್ದ ಒಂದು ದೊಡ್ಡ ಮರವನ್ನು ಉರುಳಿಸಿ, ಅದರ ಬೇರನ್ನು ತೆಗೆದುಕೊಂಡ.
ನಂತರ ಅದೇ ಕಾಡಿನಲ್ಲಿ ಒಂದು ಹುಲಿಯನ್ನು ಬೇಟೆಯಾಡಿ, ಅದರ ಚರ್ಮವನ್ನು ಸಂಗ್ರಹಿಸಿದ. ನಂತರ ಖುಷಿಯಿಂದ ಮನೆಗೆ ಬಂದವನಿಗೆ, ಅಲ್ಲಿದ್ದ ಹಂದಿಯೊಂದು ಕಾಣಿಸಿತು. ಮದ್ಯ ತಯಾರಿಗೆ ಇವರದ್ದೂ ಸ್ವಲ್ಪ ಪಾಲು ಸೇರಲಿ ಎಂದುಕೊಂಡವನೇ ಆ ಹಂದಿಯ ಬಾಲವನ್ನು ಕತ್ತರಿಸಿಕೊಂಡ.
ಹೀಗೆ ಸಂಗ್ರಹಿಸಿದ ಮರದ ಬೇರು, ಹುಲಿಯ ಚರ್ಮ ಹಾಗೂ ಹಂದಿಯ ಬಾಲವನ್ನು ಚೆನ್ನಾಗಿ ಕುಟ್ಟಿ, ಕಾಯಿಸಿ, ಭಟ್ಟಿ ಇಳಿಸಿದ. ಹಾಗೆ ತಯಾರಾದ ಪದಾರ್ಥವನ್ನೇ `ಮದ್ಯ’ ಎಂದು ಕರೆದ. ಖುಷಿ ಹಾಗೂ ಬೇಸರದ ಸಂದರ್ಭಗಳಲ್ಲಿ ಅದನ್ನು ಉಪಯೋಗಿಸತೊಡಗಿದ. ಇವನಿಂದ ನೊಂದಿದ್ದ ಗಿಣಿ, ಹುಲಿ ಹಾಗೂ ಹಂದಿಗಳು-ನಮಗೆ ಹಿಂಸೆ ನೀಡಿ ತಯಾರಿಸಿದ ಆ ದ್ರವ ಪದಾರ್ಥಕ್ಕೆ ನಮ್ಮ ಗುಣಗಳೇ ಕ್ರಮವಾಗಿ ಬರಲಿ ಎಂದು ಶಾಪಕೊಟ್ಟವು.
ಆ ಶಾಪ, ಇಂದಿಗೂ ತನ್ನ ಜಾರಿಯಲ್ಲಿದೆ. ಹಾಗಾಗಿಯೇ ಮನುಷ್ಯ ಕುಡಿದಾಗ-
ಮೊದಲು ಗಿಣಿಯಂತೆ ಮಾತಾಡಲು ಶುರು ಮಾಡುತ್ತಾನೆ.
ಸ್ವಲ್ಪ ಜಾಸ್ತಿ ಕುಡಿದ ನಂತರ ಕ್ರೂರ ಹುಲಿಯಂತೆ ಎಗರಾಡುತ್ತಾನೆ, ಘರ್ಜಿಸುತ್ತಾನೆ.
ಇನ್ನು ಇನ್ನೂ ಹೆಚ್ಚಾಗಿ ಕುಡಿದರೆ-ಹಂದಿಯಂತೆ ಮಲಗಿಬಿಡುತ್ತಾನೆ!

Advertisements

1 Comment »

  1. 1

    ಕೇಳಿದ್ದೋ? ಕಟ್ಟಿದ್ದೋ? ಏನಾದರೂ ಇರಲಿ, ಒಟ್ಟಿನಲ್ಲಿ ಚೆನ್ನಾಗಿದೆ


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: