ಅಪ್ಪಾ, ನೀನು ಗ್ರೇಟ್…

1111

ನನಗೆ ೬ ವರ್ಷವಿದ್ದಾಗ, ಅರೆ, ಅಪ್ಪನಿಗೆ ಎಷ್ಟೊಂದು ವಿಷಯ ಗೊತ್ತಲ್ವಾ ಅನಿಸುತ್ತಿತ್ತು.
೧೦ನೇ ವರ್ಷಕ್ಕೆ ಕಾಲಿಟ್ಟಾಗ ಅಪ್ಪ ಒಂಥರಾ ಸಿಡುಕನಂತೆ ಕಂಡ.
೧೨ನೇ ವರ್ಷದಲ್ಲಿ ಹಿಂತಿರುಗಿ ನೋಡಿದಾಗ, ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸ್ತು.
೧೪ನೇ ವಯಸ್ಸಿಗೆ ಬಂದಾಗಂತೂ-ಉಫ್, ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ.
೧೬ನೇ ವರ್ಷದಲ್ಲಿ ನನಗೂ ಅಪ್ಪನಿಗೂ ಸಣ್ಣ ಜಗಳವಾಯ್ತು.
೧೮ಕ್ಕೆ ಬಂದೆನಾ? ಅಪ್ಪ, ವಿಪರೀತ ಬಿಗಿಯಾದವನಂತೆ, ತೀರಾ ಒರಟನಂತೆ ಕಂಡ.
೨೦ನೇ ವಯಸ್ಸಿನಲ್ಲಿ ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ.
೨೫ರಲ್ಲಿದ್ದಾಗ ಅಪ್ಪಂಗೂ-ನನಗೂ ಹೊಂದಾಣಿಕೆಯೇ ಇರಲಿಲ್ಲ.
೩೨ನೇ ವರ್ಷದಲ್ಲಿ ನನ್ನ ಮಗ/ ಮಗಳ ರಂಪ ಕಂಡು ತಲೆ ಚಿಟ್ಟು ಹಿಡೀತು.
೩೬ ರಲ್ಲಿದ್ದಾಗ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ: ಅಪ್ಪ ನೆನಪಾದ.
೪೦ನೇ ವಯಸ್ಸಿಗೆ ಬಂದಾಗ ಅಪ್ಪನಿಗಿಂತ ಜಾಸ್ತಿ ಬಿಗಿಯಾಗದೇ ಹೋದ್ರೆ ಮಕ್ಕಳು ಬಗ್ಗಲ್ಲ ಅನ್ನಿಸ್ತು.
೪೫ರ ವಯಸ್ಸಿನಲ್ಲಿ -ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೊಂದು ಕಷ್ಟ ಆಯ್ತೋ ಅಂದುಕೊಂಡೆ.
೫೦ರಲ್ಲಿದ್ದಾಗ ಅಂದುಕೊಂಡೆ: ಒಂದು ಮಗು ಸಾಕೋದೇ ಕಷ್ಟ, ಅಪ್ಪ ನಾಲ್ಕು ಮಕ್ಕಳನ್ನು ಹೇಗೆ ಸಾಕಿದ?
೫೫ನೇ ವಯಸ್ಸಿನಲ್ಲಿ ಮಗ/ಮಗಳು ನನ್ನನ್ನೇ ಹೀನಾಯವಾಗಿ ನಿಂದಿಸಿದ್ದರು ಅಳುಬಂತು ನನಗೆ !.

ಕಡೆಗೂ, ಹಳೆಯದೆಲ್ಲ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಫೋಟೋ ಮುಂದೆ ನಿಂತು, ಅಪ್ಪಾ ಯು ಆರ್ ಗ್ರೇಟ್ ಅಂದಾಗ ನನಗೆ ೬೦ ತುಂಬಿತ್ತು. ಅಪ್ಪನ ಮಹತ್ವ ತಿಳಿಯಲು ೫೪ ವರ್ಷ ಬೇಕಾಯ್ತು !

Advertisements

6 Comments »

 1. ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

 2. 3
  bedrefoundation Says:

  ಮಣಿಕಾಂತ್ ಗೆ ಮಣಗಟ್ಟಲೇ ಥ್ಯಾಂಕ್ಸ್.
  ನಾವೆಲ್ಲರೂ ಅಪ್ಪನನ್ನು ಗ್ರೇಟ್ ಅಂತ ಒಪ್ಪಿಕೊಳ್ಳಲು ಅಷ್ಟೊಂದು ಸಮಯ ಕಾಯುವ ಅಗತ್ಯ ಇಲ್ಲ, ಅಲ್ಲವೇ?
  ಬೇದ್ರೆ ಮಂಜುನಾಥ್

 3. 4
  satya Says:

  Super, nappanna kanmunde tarisidiri, jothege kannanchalli kannira tarisidiri, thaumba thanks

 4. 5

  ಚೆನ್ನಾಗಿದೆ.. ಇದೆ ರೀತಿಯ “ನನ್ನ ಅಮ್ಮ ಹೇಳಿದ ಸುಳ್ಳುಗಳು” ಎಂಬ ಶೀರ್ಷಿಕೆಯ ಲೇಖನವನ್ನೆಲ್ಲೋ ಓದಿದ ನೆನಪು…

 5. 6
  Ganesh Says:

  ಅಪ್ಪನನ್ನ ಅರ್ಥ ಮಾಡಿಕೊಳ್ಳಲಿಕ್ಕೆ ಈ ಬರಹ ಓದಿದರೆ ಸಾಕು ಅನ್ಸುತ್ತೆ.

  ಮಣಿಕಾಂತರ ಬರಹದ ತೀವ್ರತೆ ಭಾವವಲಯವನ್ನ ಅದು ಹೇಗೆ ಸ್ಪರ್ಶಿಸುತ್ತದೆಯೋ ಗೊತ್ತಿಲ್ಲ. ಆದ್ರೆ, ನಮಗೇ ಗೊತ್ತಿಲ್ಲದಂತೆ ಹೃದಯ ಮಾತ್ರ ಮಿಡಿಯುತ್ತದೆ, ಒಲವಿನ ವ್ಯಕ್ತಿಗಳಿಗಾಗಿ….

  ಥ್ಯಾಂಕ್ಯೂ ಮಣಿಕಾಂತ್

  ಗಣೇಶ್.ಕೆ


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: