ಗಯಟೆ, ಗ್ರೇಟ್ ಅನ್ನಿಸಿಕೊಂಡದ್ದು ಹೇಗೆ ಗೊತ್ತ?

123

ಆತ ತಾನು ಸಾಯಲು ಹೆದರಿ ಕಾದಂಬರಿಯ ಕಥಾನಾಯಕನನ್ನು ಸಾಯಿಸಿದ!
ಜಗತ್ತಿನ ಶ್ರೇಷ್ಠ ಸಾಹಿತಿಗಳು ಎಂದು ಪಟ್ಟಿ ಮಾಡಲು ಹೊರಟಾಗ ತಕ್ಷಣ ನೆನಪಾಗುವಾತ ಜರ್ಮನ್ ಸಾಹಿತಿ ಗಯಟೆ (ಎಟಛಿಠಿeಛಿ). ತನ್ನ ಮೊದಲ ಕೃತಿ `ದಿ ಸಾರೋಸ್ ಆಫ್ ವೆರ್ಥರ್’ (Seಛಿ oಟಡ್ಟ್ಟಿಟಡಿo ಟ್ಛ ಛ್ಟಿಠಿe) ಮೂಲಕ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮನೆಮನೆಯ ಮಾತಾದವನು ಗಯಟೆ.
ಬಹುಮಂದಿಗೆ ಗೊತ್ತಿಲ್ಲದ ಸ್ವಾರಸ್ಯವೊಂದಿದೆ. ಅದು ಗಯಟೆಯ ವಿಫಲ ಪ್ರೇಮದ ಕಥೆ. ಏನೆಂದರೆ, ಯೌವನದ ದಿನಗಳಲ್ಲಿ ಉಳಿದೆಲ್ಲರಂತೆಯೇ ಗಯಟೆ ಕೂಟ ಸುಂದರಿಯೊಬ್ಬಳ ಮೋಹದಲ್ಲಿ ಬಿದ್ದ. ಸ್ವಾರಸ್ಯ ಕೇಳಿ: ಆ ವೇಳೆಗಾಗಲೇ ತಾನಿದ್ದ ನಗರದಲ್ಲಿ ಹತ್ತು ಮಂದಿಯಿಂದ ಕವಿ, ಸಾಹಿತಿ ಎಂದು ಕರೆಸಿಕೊಂಡಿದ್ದರೂ; ಆ ಸುಂದರಿಯ ಮುಂದೆ ನಿಂತು`ಐ ಲವ್ ಯೂ’ ಎನ್ನುವ ಧೈರ್ಯ ಗಯಟೆಗೆ ಇರಲಿಲ್ಲ. ಆತ- ಇವತ್ತು, ನಾಳೆ, ನಾಡಿದ್ದು, ಆಚೆನಾಡಿದ್ದು ಈ ವಿಷಯ ಹೇಳಿದರಾಯಿತು ಎಂದು ಹಾಗೇ ದಿನ ನೂಕಿದ. ಈ ಮಧ್ಯೆ ಕಣ್ಣಭಾಷೆಯಲ್ಲೇ ಆ ಬೆಡಗಿಗೆ ಎಲ್ಲವನ್ನೂ ಹೇಳಿಬಿಡಲು ಪ್ರಯತ್ನಿಸಿದ. ಆದರೆ ಪ್ರಯೋಜನವಾಗಲಿಲ್ಲ.
ಕಡೆಗೊಂದು ದಿನ ಭಂಡ ಧೈರ್ಯ ಮಾಡಿ, ಈ ಕವಿ ಸಾರ್ವಭೌಮ ಆ ಬೆಡಗಿಯ ಮುಂದೆ ನಿಂತು ತೊದಲುತ್ತ, ತೊದಲುತ್ತಲೇ `ನಾನು… ನಾನು ನಿಮ್ಮನ್ನು ಪ್ರೀ…ತಿ…ಸ್ತಾ…ಇ…ದೀ…ನಿ’ ಅಂದೇಬಿಟ್ಟ. ಆ ಬೆಡಗಿ ಇವನನ್ನೇ ಒಮ್ಮೆ ಅನುಕಂಪದಿಂದ ನೋಡುತ್ತ-`ಈ ಮಾತು ಹೇಳ್ತೀರ ಅಂತ ನಾನು ಒಂದು ವರ್ಷದಿಂದ ಕಾದಿದ್ದೆ ಕಣ್ರೀ. ನೀವು ಹೇಳಲೇ ಇಲ್ಲ. ತಿಂಗಳ ಹಿಂದಷ್ಟೇ ನನಗೆ ಎಂಗೇಜ್ಮೆಂಟ್ ಆಯ್ತು. ಸಾರಿ’ ಎಂದು ಕಣ್ತುಂಬಿಕೊಂಡು ಹೋಗಿಯೇಬಿಟ್ಟಳು.
ಇಂಥದೊಂದು ಸನ್ನಿವೇಶ ಎದುರಾಗಬಹುದೆಂದು ಗಯಟೆ ಕನಸು ಮನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆ ಸುಂದರಿಯಿಲ್ಲದೆ ಬದುಕುವುದೇ ಸಾಧ್ಯವಿಲ್ಲ ಎಂದಾತ ಲೆಕ್ಕ ಹಾಕಿದ. ಅವಳೇ ಸಿಗಲಿಲ್ಲ ಎಂದ ಮೇಲೆ ಬದುಕಿ ಪ್ರಯೋಜನವೇನು ಎಂದು ಯೋಚಿಸಿ ವಿಷ ಕುಡಿದು ಸತ್ತು ಹೋಗಲು ನಿರ್ಧರಿಸಿದ. ಆದರೆ ವಿಷದ ಬಾಟಲಿ ಕೈಗೆತ್ತಿಕೊಂಡಾಗ ಆತ ನಿಂತಲ್ಲೇ ನಡುಕ ಶುರುವಾಯಿತು. ಥತ್, ಇದೇಕೋ ಸರಿ ಹೋಗುತ್ತಿಲ್ಲ ಎಂದುಕೊಂಡು ಕೆಲ ದಿನಗಳ ನಂತರ ಒಂದು ಬೆಟ್ಟದ ಮೇಲಿಂದ ಜಿಗಿದು ಸಾಯಲು ಹೋದ. ಆದರೆ ಬೆಟ್ಟ ಹತ್ತುವ ಮೊದಲೇ ಅವನ ಕಾಲು ನಡುಗಲು ಆರಂಭಿಸಿದವು!
ಆತ್ಮಹತ್ಯೆ ಮಾಡಿಕೊಳ್ಳುವುದು ನನ್ನಿಂದಾಗದ ಕೆಲಸ ಅನ್ನಿಸಿದ ತಕ್ಷಣ-ತನ್ನ ಬದುಕಿನ ಕಥೆಯನ್ನೇ ಕಾದಂಬರಿ ರೂಪದಲ್ಲಿ ಬರೆದು ಕಥಾನಾಯಕನನ್ನೇ ಕಡೆಯಲ್ಲಿ, ಆತ್ಮಹತ್ಯೆಯ ಮೂಲಕ ಸಾಯಿಸಿಬಿಟ್ಟರೆ ಹೇಗೆ ಎಂದು ಗಯಟೆ ಯೋಚಿಸಿದ. ಮುಂದೆ, ತನ್ನ ಮೊದಲ ಕಾದಂಬರಿಗೆ ಅಂಥದೇ ಅಂತ್ಯವನ್ನು ನೀಡಿದ!
ಇದೇನೂ ಗೊತ್ತಿಲ್ಲದ ಓದುಗರು- ವಿಫಲ ಪ್ರೇಮದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡ ಕಥಾನಾಯಕನಿಗಾಗಿ ಮರುಗಿದರು. ಗಯಟೆಯನ್ನು ಶ್ರೇಷ್ಠ ಸಾಹಿತಿ ಎಂದು ಪರಿಗಣಿಸಿ, ಆತನ ಕೈ ಮುಟ್ಟಿ ಕಣ್ಣಿಗೆ ಒತ್ತಿಕೊಂಡರು!
ಇದು ಸತ್ಯವೂ ಹೌದು; ವಿಚಿತ್ರವೂ ಹೌದು…

Advertisements

1 Comment »

  1. 1
    Arun Says:

    ನಮಸ್ಕಾರ ಮಣಿಕಾಂತರಿಗೆ,

    ನಿಮ್ಮ ಬ್ಲಾಗನ್ನು ಬಹಳ ದಿನಗಳಿಂದ ಉತ್ಸುಕವಾಗಿ ಓದುತ್ತಿದ್ದೇನೆ. ನಿಮ್ಮ ಈ ಬರಹದಲ್ಲಿ ಒಂದು ತಪ್ಪಿದೆ – ಆ ಜರ್ಮನ್ ಲೇಖಕನ ಹೆಸರು – ಗ್ಯೋಥೆ ಅಂತ (Goethe). ಅವರ ಪೂರ್ಣ ಹೆಸರು ಯೊಹಾನ್ ವುಲ್ಫಗಾಂಗ್ ಫಾನ್ ಗ್ಯೋಥೆ ಎಂದು. ಅವನ ಹೆಸರಿನಲ್ಲಿ ಜರ್ಮನ್ ಭಾಷೆಯ ಸಂಸ್ಥೆ ಕೂಡ ಉಂಟು.

    ಅರುಣ ಪ್ರಕಾಶ


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: