ತಾಯಿ-ತಂದೆಯೇ ಡಾಕ್ಟರೇಟ್ ಕೊಟ್ಟು ಬಿಟ್ಟಾರ!

bendre

ಇದು ೧೯೬೮ರಲ್ಲಿ ನಡೆದ ಪ್ರಸಂಗ.
ಆ ವರ್ಷ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬೇಂದ್ರೆಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿತು. ಅದಕ್ಕೂ ಮೊದಲು, ಅಂದರೆ ೧೯೬೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕೂಡ ಬೇಂದ್ರೆಯವರಿಗೆ ಡಾಕ್ಟರೇಟ್ ನೀಡಿತ್ತು. ಇದನ್ನೇ ನೆಪ ಮಾಡಿಕೊಂಡ ಕೆಲವರು, ಬೇಂದ್ರೆಯವರಿಗೆ ಈಗಾಗಲೇ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಟ್ಟಿರುವಾಗ, ಧಾರವಾಡ ವಿ.ವಿ. ಕೂಡ ಮತ್ತೊಮ್ಮೆ ಕೊಡಬೇಕಾದ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು. ಈ ಸಂಬಂಧವಾಗಿ ವಾದ-ವಿವಾದಗಳಾದವು. ಸಾಕಷ್ಟು ಚರ್ಚೆಯೂ ನಡೆಯಿತು. ಇದೇ ಕಾರಣದಿಂದ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮವೂ ಸ್ವಲ್ಪ ತಡವಾಗಿಯೇ ನಡೆಯಿತು.
ಕಡೆಗೊಂದು ದಿನ ಪ್ರಶಸ್ತಿ ಸ್ವೀಕರಿಸಿದ ಬೇಂದ್ರೆ ನಂತರ ಪ್ರತಿಕ್ರಿಯಿಸಿದ್ದು ಹೀಗೆ: ‘ಉಳಿದೋರಿಗೆಲ್ಲ ವಯಸ್ಸಿಗ ಬಂದ ಮ್ಯಾಲ ಡಾಕ್ಟರೇಟ್ ಸಿಗ್ತದ-ಆದ್ರೆ ನಾ ಹುಟ್ತಾನೇ ಡಾಕ್ಟರೇಟ್ ತಗೊಂಡೀನಿ. ‘ನನಗ ಡಾಕ್ಟರೇಟ್ ಪದವೀನ ನನ್ನ ತಾಯ್ತಂದೆಯರೇ ಕೊಟ್ಟು ಬಿಟ್ಟಾರ. ಅಂತೆಯೇ ನಾನು ಈ.. ಬೇಂದ್ರೆ ಇದೀನಿ. ಅಪ್ಪ-ಅಮ್ಮ ನೀಡಿದ ಡಾಕ್ಟರೇಟಿನ ಮುಂದಽ, ಬೇರ್ಯಾವ ಡಾಕ್ಟರೇಟ್ಗೂ ಅಂಥ ಬೆಲೆ ಕಟ್ಟಲಾಗಲ್ಲ ಬಿಡ್ರಿ…’
***
ಬೇಂದ್ರೆ ಹುಟ್ಟಿದ್ದು ಜನವರಿ ೩೧, ೧೮೯೬ರಂದು. ಬೇಂದ್ರೆಯವರ ನಿಧನಾನಂತರ, ಅವರ ಸ್ಮರಣೆಗೆಂದೇ ‘ಬೇಂದ್ರೆ ನೆನಪಿನ ಕಾವ್ಯ ಸ್ಪರ್ಧೆ’ ಏರ್ಪಡಿಸುತ್ತಿದ್ದವರು ರಾಜು ಮೇಸ್ಟ್ರು ಎಂದೇ ಹೆಸರಾಗಿದ್ದ ಚಿ. ಶ್ರೀನಿವಾಸರಾಜು. ಬೇಂದ್ರೆಯವರ ಹುಟ್ಟುಹಬ್ಬದ ದಿನವಾದ ಜ.೩೧ರಂದೇ ಒಂದು ಸಮಾರಂಭ ನಡೆಸಿ, ಬಹುಮಾನಿತರಿಗೆ ಒಂದು ಪುಟ್ಟ ಕಾಣಿಕೆ ನೀಡಿ. ಬೇಂದ್ರೆಯವರ ನೆನಪು ಪದೇ ಪದೆ ಮರುಕಳಿಸುವಂತೆ ಮಾಡುತ್ತಿದ್ದವರು ಶ್ರೀನಿವಾಸ ರಾಜು. ಮೇಸ್ಟ್ರು ನಂತರ ಆ ಕೆಲಸವನ್ನು ಮುಂದುವರಿಸುವ ನೆಪದಲ್ಲಿ ಅವರ ಪ್ರಿಯ ಶಿಷ್ಯ ‘ಸಂಚಯ’ದ ಡಿ.ವಿ. ಪ್ರಹ್ಲಾದ್, ಮೊನ್ನೆ ನಡೆಸಿದ ಅಪರೂಪದ, ಆಪ್ತ ಕಾರ್ಯಕ್ರಮದಲ್ಲಿ-ಬೇಂದ್ರೆ ನಮ್ಮೊಂದಿಗಿದ್ದರು. ಕವಿತೆಯಾಗಿ ಮೆರೆದರು. ಕತೆ ಹೇಳಿ ನಕ್ಕರು ಮತ್ತು ಇದನ್ನೆಲ್ಲ ಕೈ ಹಿಡಿದು ಬರೆಸಿದರು- ಮೇಸ್ಟ್ರ ಥರಾ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: