ಅಣ್ಣಾವ್ರು ಹೇಳಿದ ಧೈರ್ಯದ ಮಾತು ‘ಗಿರಿಕನ್ಯೆ’ಯ ಹಾಡಿಗೆ ಸ್ಫೂರ್ತಿಯಾಯಿತು !

dr-raj
ಕೂಡಿ ಬಾಳೋಣ ಇನ್ನೆಂದು…..
ಚಿತ್ರ: ಗಿರಿಕನ್ಯೆ. ಗೀತೆರಚನೆ: ಚಿ.ಉದಯಶಂಕರ್, ಗಾಯನ: ಡಾ. ರಾಜ್ಕುಮಾರ್,
ಸಂಗೀತ : ರಾಜನ್-ನಾಗೇಂದ್ರ.

ಕೂಡಿಬಾಳೋಣ ಇನ್ನೆಂದು ಸೇರಿ ದುಡಿಯೋಣ
ದುಡಿಮೆಯೇ ಬಡತನ ಅಳಿಸಲು ಸಾಧನ
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ ಐಐಪಐಐ

ರೋಷವು ಎಂದೂ ಶಾಂತಿಯನ್ನು ನೀಡುವುದಿಲ್ಲ
ದ್ವೇಷವು ಎಂದೂ ಸುಖವನ್ನು ಕೊಡುವುದೇ ಇಲ್ಲ
ವಿರಸ ವಿಷವು ಸುಳ್ಳಲ್ಲ
ಮೆರೆವ ಜನರ ಭೂ ತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ.
ಮಣ್ಣೇ ಹೊನ್ನು ನಮಗೆಲ್ಲ
ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ ಐಐ೧ಐಐ

ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ
ನಗುತ ಸೇರಿ ದುಡಿವಾಗ ಬೇಸರವಿಲ್ಲ
ಎಂದೂ ನಮಗೆ ಆಯಾಸ ತೋರುವುದಿಲ್ಲ
ಮೇಲು ಕೀಳು ಇಲ್ಲಿಲ್ಲ
ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ ಐಐ೨ಐಐ

’ಸಂತ ತುಕಾರಾಂ’ ಚಿತ್ರದಿಂದ ‘ಆಕಸ್ಮಿಕ’ದವರೆಗೆ ಡಾ. ರಾಜ್ ನಟಿಸಿದ ಎಲ್ಲ ಚಿತ್ರಗಳ ಸಾಹಿತ್ಯ ವಿಭಾಗದಲ್ಲಿ ದುಡಿದವರು ಚಿ. ಉದಯಶಂಕರ್. ಒಂದರ್ಥದಲ್ಲಿ ಉದಯಶಂಕರ್ ಅವರ ಸಾಹಿತ್ಯ ಡಾ. ರಾಜ್ ಅವರ ಮುಖವಾಣಿಯಂತಿತ್ತು ಎನ್ನಬಹುದು.
ಬೆಳ್ಳಿ ತೆರೆಯ ಮೇಲೆ ರಾಜ್ಕುಮಾರ್ ಅವರ ಪಾತ್ರ ಹೇಗೆ ಮಾತಾಡಬೇಕು, ಹೇಗೆ ಹಾಡಬೇಕು ಎಂಬುದನ್ನು ಉಳಿದೆಲ್ಲರಿಗಿಂತ ಚನ್ನಾಗಿ ಅರ್ಥಮಾಡಿಕೊಂಡಿದ್ದವರು ಉದಯ ಶಂಕರ್. ಹಾಗೆ ಅವರಿಗೆಂದೇ ಅಪರೂಪದಲ್ಲಿ ಅಪರೂಪದ್ದು ಎಂಬಂಥ ಗೀತೆಗಳನ್ನು ಅವರು ಬರೆದದ್ದೂ ಉಂಟು. ‘ ನಾನಿರುವುದೇ ನಿಮಗಾಗಿ’ ಎಂಬ ಮಯೂರ ಚಿತ್ರದ ಶೈಲಿ, ಜೇನಿನ ಮಳೆಯೋ ಹಾಲಿನ ಹೊಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ’ ಎನ್ನುವ ಕನ್ನಡ ಅಭಿಮಾನದಲ್ಲಿ, ‘ಚೆಲುವೆಯ ನೋಟ ಚೆನ್ನ’ ಎಂಬ ರಸಿಕಭಾವ, ‘ಹೇ ಹರಿ ಸಿಗಿವೆಂ ಕ್ಷಣದಲ್ಲಿ ನಿನ್ನ ನಾಂ….‘ ಎನ್ನುವಾಗಿನ ಆರ್ಭಟ, ‘ಹಾಲಲ್ಲಾದರು ಹಾಕು, ನೀರಲ್ಲಾದರೂ ಹಾಕು’ ಎಂಬ ಭಕ್ತಿ ಪರವಶತೆ, ‘ನಿನಗಾಗಿ ಓಡೋಡಿ ಬಂದೆ’ ಎನ್ನುವ ವಿರಹ ಛಾಯೆ, ‘ಬಿಸಿಬಿಸಿ ಕಜ್ಜಾಯ’ ಎಂಬಲ್ಲಿನ ತಮಾಷೆ, ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಎಂಬ ವೇದಾಂತ ದೃಷ್ಟಿ, ‘ಶ್ರಾವಣ ಮಾಸ ಬಂದಾಗ’ ಎನ್ನುವ ಪ್ರಕೃತಿ ಗೀತೆ…. ಹೀಗೆ ರಾಜ್ ಅವರಿಗೆಂದು ಚಿ.ಉ. ಬರೆದ ಗೀತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ರಾಜ್ಕುಮಾರ್ ಅವರೊಂದಿಗೆ ಅತಿ ನಿಕಟವಾಗಿದ್ದವರು ಚಿ. ಉದಯಶಂಕರ್. ಅವರಿಬ್ಬರದು ಮಾತಲ್ಲಿ ವಿವರಿಸಲಾರದಂಧ ಗೆಳೆತನ. ಯಾವುದೇ ಪಾತ್ರದಲ್ಲಿ ಅಭಿನಯಿಸಿದರೂ, ನಿರ್ದೇಶಕರು ಟೀಕೆ ಓಕೆ ಅಂದರೂ, ರಾಜ್ ಸೀದಾ ಉದಯಶಂಕರ್ ಬಳಿಗೆ ಬಂದು ‘ ನಾನು ಚನ್ನಾಗಿ ಅಭಿನಯಿಸಿದೆ ನಾ? ಇನ್ನೊಂದು ಸಲ ಮಾಡಬೇಕಾ? ನಿಮಗೆ ಒಪ್ಪಿಗೆ ಯಾಯ್ತಾ? ಎಂದು ಕೇಳುತ್ತಿದ್ದರು. ಉದಯಶಂಕರ್ ಕೂಡ ಅಷ್ಟೆ: ಹಾಡು ಬರೆದ ನಂತರ, ಅದನ್ನು ರಾಜ್ ಅವರಿಗೆ ತೋರಿಸಿ-‘ಈ ಹಾಡು ಚನ್ನಾಗಿದೆಯೇ? ನಿಮಗೆ ಇಷ್ಟವಾಯಿತೆ? ಎಂದು ಸಂಕೋಚದಿಂದ ಕೇಳುತ್ತಿದ್ದರು. ಅವರ ಗೆಳೆತನವನ್ನ ಭೋಜರಾಜ ಹಾಗೂ ಕಾಳೀದಾಸರ ಗೆಳೆತನಕ್ಕೆ ಹೋಲಿಸಬಹುದೇನೋ. ಅಂಥ ಗೆಳೆಯರನ್ನು ನಾನು ಎಲ್ಲಿಯೂ ನೋಡಲಿಲ್ಲ ಎನ್ನುತ್ತಾರೆ ದೊರೆ-ಭಗವಾನ್ ಜೋಡಿಯ ಪೈಕಿ ಒಬ್ಬರಾದ ಭಗವಾನ್.
ಯಾವ ಕ್ಷಣದಲ್ಲಿಯೇ ಆಗಲಿ, ನಿಂತಲ್ಲೇ ಗೀತೆ ರಚಿಸುವ ಸಾಮರ್ಥ್ಯ ಉದಯ ಶಂಕರ್ ಅವರಿಗಿತ್ತು. ಒಂದು ಸಂದರ್ಭದಲ್ಲಿ ಡಾ. ರಾಜ್ ಹೇಳಿದ ಧೈರ್ಯದ ಮಾತನ್ನೇ ಅವರು ವಾಹ್ವಾಹ್ ಎಂಬಂಥ ಚಿತ್ರಗೀತೆಯನ್ನಾಗಿಸಿದರು. ಆ ಸಂದರ್ಭದಲ್ಲಿ ವಿವರಣೆ ಇಲ್ಲಿದೆ:
****
‘ಗಿರಿಕನ್ಯೆ’ ಚಿತ್ರದ ತಯಾರಿ ನಡೆದಿತ್ತು. ಈ ಸಂದರ್ಭದಲ್ಲಿ ಖಾಸಗಿ ಬದುಕಿನಲ್ಲಿ ಉದಯಶಂಕರ್ ಅವರಿಗೆ ಒಂದಿಷ್ಟು ಕಷ್ಟಗಳು ಎದುರಾದವು. ಒಂದು ದಿನ ರಾಜ್ ಅವರೊಂದಿಗೆ ಎಲ್ಲವನ್ನೂ ಹೇಳಿಕೊಂಡರು ಉದಯಶಂಕರ್. ಕಡೆಗೆ ‘ಈ ಕಷ್ಟಗಳಿಂದ ನಾನಂತೂ ಹೈರಾಣಾಗಿ ಹೋಗಿದೀನಿ’ ಅಂದರು. ತಕ್ಷಣವೇ ಅವರ ಕೈ ಹಿಡಿದುಕೊಂಡು ರಾಜ್ ಹೇಳಿದರಂತೆ: ‘ ಈ ಕಷ್ಟಗಳಿಗೆಲ್ಲ ಹೆದರ ಬೇಡಿ. ನಾವೆಲ್ಲಾ ನಿಮ್ಮ ಜತೆಗಿದ್ದೀವಿ. ಏನೇ ಕಷ್ಟ ಬಂದ್ರೂ ಜತೆಯಾಗಿ ಎದುರಿಸೋಣ. ಜೊತೇಲಿ ಬದುಕೋಣ. ಏನೇ ಕಷ್ಟ ಇದ್ರೂ ಶಿವಾ ಅಂತ ಜಮಾಯಿಸ್ಬಿಡೋಣ. ಸಮಾಧಾನ ಮಾಡ್ಕೊಳ್ಳಿ, ಧೈರ್ಯ ತಂದ್ಕೊಳ್ಳಿ ಉದಯಶಂಕರ್ ಅವರೇ….’
ಈ ಘಟನೆಯಾಗಿ ಕೆಲ ದಿನಗಳ ನಂತರ ರಾಜ್ಕುಮಾರ್, ತಮ್ಮ ಹುಟ್ಟೂರು ಗಾಜನೂರಿಗೆ ಹೊರಟರು. ಜೊತೆಗೆ ಉದಯಶಂಕರ್ ಅವರನ್ನೂ ಕರೆದುಕೊಂಡರು. ಊರಿಗೆ ಹೋದರೆ, ತಲೆಗೆ ಟವೆಲ್ ಕಟ್ಟಿ, ಮಂಡಿಯ ತನಕ ಪಂಚೆ ಎತ್ತಿಕಟ್ಟಿ ಹೊಲ ಉಳಲು ನಿಂತುಬಿಡುತ್ತಿದ್ದ ರಾಜಣ್ಣ, ಅವತ್ತೂ ಹಾಗೆಯೇ ಮಾಡಿದರಂತೆ. ಬೆಳಗಿನಿಂದ ಮಧ್ಯಾಹ್ನದ ತನಕ ದುಡಿದರೂ, ಅವರ ಮೊಗದಲ್ಲಿ ಆಯಾಸದ ಲಕ್ಷಣವೇ ಕಾಣಲಿಲ್ಲವಂತೆ. ಈ ಸಂದರ್ಭದಲ್ಲಿಯೇ ಉದಯಶಂಕರ್ ಅವರಿಗೆ-ತಮ್ಮ ಜಮೀನನ್ನು ಕೈ ಮಾಡಿ ತೋರಿಸುತ್ತಾ, ಊರಿಗೆ ಬಂದ್ರೆ ನನಗೆ ಉಳಿದದ್ದೆಲ್ಲ ಮರೆತುಹೋಗುತ್ತೆ. ಹೀಗೆ ದುಡಿಮೆ ಮಾಡ್ಕೊಂಡು ಇದ್ದು ಬಿಡೋಣ ಅನಿಸುತ್ತೆ. ಈ ಸೀಮೆಯ ಅಷ್ಟೂ ಜನ ಮಳೆಯನ್ನು ನಂಬಿಕೊಂಡೇ ಬದುಕ್ತಾ ಇದಾರೆ. ನಮ್ಮ ಜಮೀನಿಗೆ ಕೂಡಾ ಮಳೆಯೇ ಆಸರೆ. ನಾವಿನ್ನೂ ಬೋರ್ ಹಾಕಿಸಿಲ್ಲ. ಚನ್ನಾಗಿ ಮಳೆ ಬಿದ್ದ ವರ್ಷ, ನಮ್ಮ ಬೆವರಿಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ…. ಎಂದೆಲ್ಲ ವಿವರಿಸಿದರಂತೆ.
ಗಾಜನೂರಿನಿಮದ ವಾಪಸ್ ಬಂದ ನಂತರ ‘ಗಿರಿಕನ್ಯೆ’ ಚಿತ್ರದ ಸಾಹಿತ್ಯ ಸಂಭಾಷಣೆ-ರಚನೆಯಲ್ಲಿ ಮಗ್ನರಾದವರು ಉದಯಶಂಕರ್. ಆ ಚಿತ್ರದಲ್ಲಿ ದುಡಿಯುವ ವರ್ಗದ ಕೆಳಸ್ತರದ ಜನರ ಬದುಕಿನ ಕಥೆಯಿತ್ತು. ಅವರೆಲ್ಲರ ಮುಂದಾಳಾಗಿ ನಾಯಕನಿದ್ದ. ಆತ ಜೊತೆಗಿದ್ದ ಎಲ್ಲರನ್ನೂ ಹುರಿದುಂಬಿಸುವಂಥ ಒಂದು ಹಾಡು ಬರೆಯಬೇಕಲ್ಲ ಎನ್ನಿಸಿದಾಗ ಒಂದೆರಡು ನಿಮಿಷ ಯೋಚಿಸಿದರು ಉದಯಶಂಕರ್. ಆಗಲೇ ಅವರಿಗೆ ‘ತಮ್ಮ ಸಂಕಟದ ಸಂದರ್ಭದಲ್ಲಿ ರಾಜ್ಕುಮಾರ್ ಧೈರ್ಯ ಹೇಳಿದ್ದು; ಗಾಜನೂರಿನಲ್ಲಿ ರೈತಾಪಿ ಜನರ ಬದುಕಿನ ಕಷ್ಟದ ಬಗ್ಗೆ ವಿವರಿಸಿದ್ದು ನೆನಪಿಗೆ ಬಂತು.
‘ನಾವೆಲ್ಲ ಜೊತೆಗಿರೋಣ ಉದಯ ಶಂಕರ್. ಕಷ್ಟವನ್ನ ಜೊತೆಯಾಗಿ ಎದುರಿಸೋಣ’ ಎಂದಿದ್ದರಲ್ಲ ರಾಜ್? ಆ ಸಾಲುಗಳನ್ನೇ ಸೇರಿಸಿ-‘ಗಿರಿಕನ್ಯೆ’ಗೆ ಪಲ್ಲವಿ ಬರೆದುಬಿಟ್ಟರು ಉದಯಶಂಕರ್. ಮುಂದೆ ಹಾಡೆಂಬುದು ತಂತಾನೇ ಅರಳುತ್ತಾ ಹೋಯಿತು. ಮಲ್ಲಿಗೆಯ ಪರಿಮಳದಂತೆ; ಕಂದನ ಕಿಲಕಿಲ ನಗೆಯಂತೆ !

Advertisements

3 Comments »

 1. 1

  So rite.. I like Raj’s Nee Bandu nitaga..’ from His Superb movie Kasturi Nivas. And Both Raj And UdayShankar ji are Great Legends, God given diamonds to Kannda Film industry as well as Karnataka..

  …I pray God, send them Again to Karnataka.. 😦
  Missing Dr Raj, and UdayShankar ji..

 2. 2
  manju b v Says:

  manjunatha b v so its too currect. rajkumar has great personality. udayashankar has a great mentality. so we like each other. thumbida koda thulukodilla annodakke dr.raj gintha olle udaharane sigalaradu

 3. […] Koodi Balona Innendu Seri Dudiyona baalona innendu innendhu endendu seri dudiyona yendendu dhudiyona […]


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: