ನವೆಂಬರ್ ೧ ನನಗೆ ಶ್ರಾದ್ಧದ ದಿನ ಎಂದಿದ್ದರು ಪೈ!

govinda_pai

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ
ನಮ್ಮ ಜನ್ಮದಾತೆಯೆ…
ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು. ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ ‘ಎಂ’ ಎಂಬ ಇನಿಷಿಯಲ್ ತೋರುತ್ತಾ ‘ಎಂ’ ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು. ಮುಂದುವರಿದು- ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.
೧೯೫೬ರ ನವೆಂಬರ್ ೧ರಂದು ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಸಿಹಿ ಹಂಚಿದ್ದರು ಗೋವಿಂದ ಪೈ. ಆ ಸಂಭ್ರಮದಲ್ಲೇ ತಾಯೆ ಬಾರ ಮೊಗವ ತೋರ… ಗೀತೆ ಬರೆದರು. ಆದರೆ, ನವೆಂಬರ್ ೧ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿಹೋಯಿತು. ಜತೆಗೆ ಮಂಜೇಶ್ವರ ಕೂಡ!
ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ? ಎಂದರು. ಮುಂದುವರಿದು-‘ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ’ ಎಂದರು.
ಮುಂದೆ ೧೯೬೩ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!

Advertisements

2 Comments »

 1. 1
  G.P.RAMANNA Says:

  Nimma notings chennagide manikanth. Kannadigaru aascharya paduvashtu kannada premavannu pai avaru prakatisiddaru thamma baravanigeya mukhena.
  gpr

 2. 2
  G.P.RAMANNA Says:

  Pai avara kannada premakke olleya udaharaneyagaballa sangathi heliddiri. thumba khushi ayithu.
  gpr


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: