ಐವತ್ತು ವರ್ಷ ಬರೆದೇ ಬದುಕಿದ್ದು ಸಾಧನೆಯಲ್ಲವೇ?

ದಶಕಗಳ ಹಿಂದಿನ ಮಾತು: ಉದಯ್ ಜಾದೂಗಾರ್ ಅವರು ಆಗಷ್ಟೇ ಮ್ಯಾಜಿಕ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದ ದಿನಗಳವು. ಅದೊಮ್ಮೆ ಅವರು ಹಿರಿಯ ಬಂಧುಗಳನ್ನು ಭೇಟಿ ಮಾಡಿದರಂತೆ. ಉಭಯ ಕುಶಲೋಪರಿಯ ಸಂದಭ ದಲ್ಲಿ ಆ ಹಿರಿಯರು- ‘ಏನ್ಮಾಡ್ತಾ ಇದೀಯಪ್ಪ’ ಅಂದರಂತೆ. ‘ಮ್ಯಾಜೀಕ್ ಮಾಡ್ತೀನಿ’ ಅಂದಿದ್ದಾರೆ ಉದಯ್.
ತಕ್ಷಣವೇ ಆ ಹಿರಿಯರು ಕೇಳಿದರಂತೆ: ‘ಅದ್ಸರಿ ಕಣಯ್ಯಾ, ಹೊಟ್ಟೆಪಾಡಿಗೆ ಏನು ಮಾಡ್ತೀಯ?’
ಒಂದು ಕಾಲದಲ್ಲಿ ಮ್ಯಾಜಿಕ್ ಮಾಡ್ತಿದ್ದವರಿಗೆ ಎದುರಾಗುತ್ತಿದ್ದ ಪ್ರಶ್ನೆಯೇ ಈಗ ಕವಿತೆ ಬರೆಯುತ್ತೇನೆ ಎನ್ನುವವರಿಗೆ ಎದುರಾಗುತ್ತದೆ. ಸ್ವಾರಸ್ಯವೆಂದರೆ, ಹೆಚ್ಚು ಕಡಿಮೆ, ಇದೇ ಅರ್ಥ ಬರುವ ಮಾತುಗಳನ್ನು ವರಕವಿ ಬೇಂದ್ರೆಯವರು ತಮ್ಮನ್ನು ಕುರಿತೇ ಹೇಳಿಕೊಂಡಿದ್ದರು.
ಆ ಸಂದರ್ಭದ ವಿವರಣೆ ಹೀಗಿದೆ: ಬೇಂದ್ರೆಯವರು ಆಗ ಸೊಲ್ಲಾಪುರದಲ್ಲಿ ಸ್ಕೂಲ್ ಟೀಚರ್ ಆಗಿದ್ದರು. ಅವರಿಗೆ ಐವತ್ತು ವರ್ಷ ತುಂಬಿದ ಸಲುವಾಗಿ ಧಾರವಾಡದಲ್ಲಿ ಸನ್ಮಾನ ಮಾಡಲು ಬೇಂದ್ರೆಯವರ ಗೆಳೆಯರು, ಅಭಿಮಾನಿಗಳು ನಿರ್ಧರಿಸಿದರು. ಕಾರ್ಯಕ್ರಮದ ದಿನವನ್ನೂ ನಿಗದಿ ಮಾಡಿದರು. ಬೇಂದ್ರೆಯವರು ಸೊಲ್ಲಾಪುರದಿಂದ ಧಾರವಾಡಕ್ಕೆ ರೈಲಿನಲ್ಲಿ ಬಂದರು. ಹುಬ್ಬಳ್ಳಿಯಲ್ಲಿ ರೈಲು ನಿಂತದ್ದೇ ತಡ, ಅಭಿಮಾನಿಗಳು ನಾಮುಂದು ತಾಮುಂದು ಎಂಬಂತೆ ನುಗ್ಗಿ ಬೇಂದ್ರೆಯವರಿಗೆ ಹಾರ ಹಾಕಿ ಅಭಿನಂದಿಸಿದರು.
ಆಗ ಬೇಂದ್ರೆ ಹೇಳಿದ್ದಿಷ್ಟು: ‘ಈ ಸತ್ಕಾರ ನನಗಲ್ಲ. ಬೇಂದ್ರೆಗೂ ಅಲ್ಲ. ಎಲ್ಲ ಸತ್ಕಾರ ಕಾವ್ಯದೇವಿಗೆ ಸಲ್ಲಬೇಕು. ಆದರೂ ನೀವು ನನ್ನನ್ನು ಸತ್ಕರಿಸುತ್ತಿರುವುದಕ್ಕೆ ನನ್ನ ಕಣ್ತುಂಬಿ ಬಂದಿದೆ. ಅದನ್ನೂ ಮೀರಿದ ಇನ್ನೊಂದು ಆನಂದವೂ ಇದೆ. ಏನೆಂದರೆ- ಕರ್ನಾಟಕದಲ್ಲಿ; ಕನ್ನಡದಲ್ಲಿ ಒಬ್ಬ ಕವಿ, ಬರೆಯುತ್ತ ಬರೆಯುತ್ತಲೇ ಐವತ್ತು ವರ್ಷ ಬದುಕಿದ್ದಾನಲ್ಲ? ಅದು ಆನಂದದ ಸಂಗತಿಯಲ್ಲವೆ?’

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: