ಹಾಗೇ ಸುಮ್ಮನೆ ಜೀವಉಳಿಸಿದ್ದು ಗೊತ್ತಾದರೆ ಜೀವ ತೆಗೀತಾರೆ!

hitler

ಅವು ಸರ್ವಾಧಿಕಾರಿ ಹಿಟ್ಲರ್ನ ಅಬ್ಬರದ ದಿನಗಳು.
ಎಲ್ಲರೂ ಹಿಟ್ಲರನ ತಿಕ್ಕಲುತನ, ಅವನ ಅಮಾನುಷ ಕೌರ್ಯ, ಅತಿರೇಕದ ವರ್ತನೆ, ಇಡೀ ಜಗತ್ತನ್ನೇ ಆಳಬೇಕೆಂಬ ದುರಾಸೆ, ಅಸಹ್ಯ ಹುಟ್ಟಿಸುವ ವರ್ಣಬೇಧ ನೀತಿಯ ಕುರಿತೇ ಮಾತಾಡುತ್ತಿದ್ದರು. ಆ ಧೂರ್ತನನ್ನು ಯಾರಾದರೂ ಧೀರರು ಹೊಡೆದು ಹಾಕಬಾರದೆ? ಯಾವುದಾದರೂ ಒಂದು ಕಾಯಿಲೆ ಅವನನ್ನು ಬಲಿ ತೆಗೆದುಕೊಳ್ಳಬಾರದೆ ಎಂದು ಮಾತಾಡಿಕೊಳ್ಳುತ್ತಿದ್ದರು.
ಇಂಥ ಸಂದರ್ಭದಲ್ಲಿಯೇ ಹಿಟ್ಲರ್ ಒಮ್ಮೆ ಹೊಳೆಯಲ್ಲಿ ಈಜಾಡಲೆಂದು ಹೋದ. ಖುಷಿಯಿಂದ ಈಜುಡುತ್ತಿದ್ದವನು ಆಕಸ್ಮಿಕವಾಗಿ ಸುಳಿಗೆ ಸಿಕ್ಕಿಕೊಂಡ. ಸರ್ವಾಧಿಕಾರಿಯಾದರೇನು? ಅವನಿಗೂ ಪ್ರಾಣಭೀತಿಯಿರುತ್ತದಲ್ಲ? ಅದೇ ಕಾರಣದಿಂದ ‘ಕಾಪಾಡಿ, ಕಾಪಾಡಿ’ ಎಂದು ಕೂಗಿಕೊಂಡ.
ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ಓಡಿಬಂದು ಹೊಳೆಗೆ ಹಾರಿ ಹಿಟ್ಲರ್ನ ಜೀವ ಉಳಿಸಿದ. ಇದರಿಂದ ಖುಷಿಯಾದ ಹಿಟ್ಲರ್: ‘ಅಯ್ಯಾ, ನಿನ್ನ ಉಪಕಾರವನ್ನು ನಾನು ಹೇಗೆ ತೀರಿಸಲಿ? ಈ ಉಪಕಾರಕ್ಕೆ ಪ್ರತಿಯಾಗಿ ನಿನಗೆ ಯಾವ ರೀತಿ ಸಹಾಯ ಮಾಡಲಿ?’ ಎಂದು ಕೇಳಿದನಂತೆ.
ಅದಕ್ಕೆ ಆ ರೈತ ತೊದಲುತ್ತ ‘ಸ್ವಾಮೀ, ನಾನು ನಿಮ್ಮ ಜೀವ ಉಳಿಸಿದ ವಿಚಾರವನ್ನು ಅಪ್ಪಿ ತಪ್ಪಿ ಕೂಡ ಯಾರಿಗೂ ಹೇಳಬೇಡಿ. ನೀವೇನಾದರೂ ಹೇಳಿದಿರೋ, ಎಲ್ಲರೂ ಸೇರಿಕೊಂಡು ನನ್ನ ಜೀವ ತೆಗೆಯುತ್ತಾರೆ. ಹಾಗಾಗಿ ನಾನು ನಿಮ್ಮ ಜೀ ಉಳಿಸಿದ ವಿಚಾರವನ್ನು ಗುಟ್ಟಾಗಿಟ್ಟರೆ, ಅದೇ ನೀವು ನನಗೆ ಮಾಡುವ ಮಹದುಪಕಾರವಾಗುತ್ತದೆ’ ಎಂದನಂತೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: