‘ಪ್ರೀತಿ’ ಅಂದ್ರೆ ಏನು?

ಈ ಪ್ರಶ್ನೆಗೆ ಹದಿಹರಯದವರ ಉತ್ತರಗಳು ಸಾಮಾನ್ಯವಾಗಿ ಹೀಗಿರುತ್ತವೆ. ಉತ್ತರ ಕೊಟ್ಟವರು ಹುಡುಗಿಯರಾದರೆ- ‘ಅವನ ಮೇಲಿನ ಪ್ರೀತಿಗೋಸ್ಕರ ಹೆತ್ತವರ ವಿರೋಧ ಕಟ್ಟಿಕೊಂಡೆ, ಬಂಧುಗಳನ್ನು ದೂರ ಮಾಡಿಕೊಂಡೆ, ಅದೆಷ್ಟೋ ಜನರಿಂದ ಕೆಟ್ಟ ಮಾತು ಕೇಳಿದೆ. ಅವಮಾನ ಸಹಿಸಿಕೊಂಡೆ. ಅದೇ ಪ್ರೀತಿ … ಎಂದೆಲ್ಲಾ ಹೇಳುತ್ತಾರೆ.

ಹುಡುಗರಾದರೆ- ಅವಳಿಗೋಸ್ಕರ ಹೊಸ ಬೈಕು ತಗೊಂಡೆ, ಸೈಟ್ ತಗೊಂಡೆ, ಕೆಲಸ ಕಳೆದುಕೊಂಡೆ. ಐದಾರು ಬಾರಿ ಅವಳ ಅಣ್ಣ ತಮ್ಮಂದಿರಿಂದ ಒದೆ ತಿಂದೆ, ಅವಳಿಗೋಸ್ಕರ ಅಂತಾನೇ ಸಾವಿರ ಸಾವಿರ ಖರ್ಚು ಮಾಡಿದೆ. ಮನೆಮಂದಿಯ ಪ್ರೀತಿ ಕಳೆದುಕೊಂಡೆ, ಮಾನಸಿಕ ನೆಮ್ಮದೀನೂ ಕಳಕೊಂಡೆ. ಪ್ರೀತಿ ಅಂದ್ರೆ ಏನೆಂದು ತೋರಿಸೋಕೆ ಅಂತಾನೇ ಅವಳಿಗೆ ಆರು ಬಾರಿ ರಕ್ತದಲ್ಲಿ ಪತ್ರ ಬರೆದುಕೊಟ್ಟೆ ಅನ್ನುತ್ತಾರೆ!
ಆದರೆ, ಪ್ರೀತಿ ಅಂದ್ರೆ ಏನು ಎಂಬ ಪ್ರಶ್ನೆಯನ್ನು ೪ ರಿಂದ ೮ ವರ್ಷದ ಮಕ್ಕಳಿಗೆ ಕೇಳಿದಾಗ ಅವರು ನೀಡಿದ ಸ್ವಾರಸ್ಯಕರ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಮಕ್ಕಳ ಹೆಸರಿದೆ, ಅವರ ವಯಸ್ಸೂ ಇದೆ. ಇದು ಇಂಟರ್‌ನೆಟ್‌ನಲ್ಲಿ ಸಿಕ್ಕ ಮಾಹಿತಿ…….

* ನಮ್ಮ ಅಜ್ಜಿಗೆ ಆರ್ಥರೈಟಿಸ್ ಕಾಯಿಲೆ ಅಮರಿಕೊಂಡು ಬಿಡ್ತು. ಅವತ್ತಿಂದ ಅಜ್ಜಿಗೆ ಕೈ ಕಾಲಿನ ಬೆರಳುಗಳನ್ನು ಮಡಿಚುವುದಕ್ಕಾಗಲಿ, ಸರಾಗವಾಗಿ ಓಡಾಡುವುದಕ್ಕಾಗಲಿ, ಚಿಕ್ಕಪುಟ್ಟ ಕೆಲಸ ಮಾಡುವುದಕ್ಕಾಗಲಿ ಆಗ್ತಾ ಇರಲಿಲ್ಲ. ಅಂಥ ಸಂದರ್ಭದಲ್ಲಿ ಅಜ್ಜಿಗಿಂತ ಹನ್ನೆರಡು ವರ್ಷಕ್ಕೆ ಹಿರಿಯರಾಗಿದ್ದ ನನ್ನ ಅಜ್ಜ, ಹೆಂಡತಿಯ ಸೇವೆಗೆ ನಿಂತು ಬಿಟ್ರು. ದಿನಾಲೂ ಬೆಳಗ್ಗೆ, ಮಧ್ಯಾಹ್ನ, ಸಂಜೆಯ ಹೊತ್ತು ಅಜ್ಜಿಯ ಕೈ-ಕಾಲಿನ ಬೆರಳುಗಳಿಗೆ, ಮೊಣಕೈಗೆ, ಹಿಂಗಾಲಿಗೆ ಮಸಾಜು ಮಾಡುವುದೇ ಅಜ್ಜನ ಕೆಲಸ ಆಗಿಬಿಡ್ತು. ಮುಂದೊಂದು ದಿನ ಅಜ್ಜನಿಗೇ ಆರ್ಥರೈಟಿಸ್ ಬಂದುಬಿಡ್ತು. ಆಗ ಕೂಡ ಅಜ್ಜ, ಅಜ್ಜಿಗೆ ಮಸಾಜ್ ಮಾಡೋದನ್ನು ನಿಲ್ಲಿಸಲಿಲ್ಲ. ನಿಜವಾದ ಪ್ರೀತಿ ಅಂದ್ರೆ ಅದೇ.
-ರೆಬೆಕಾ, ೮ ವರ್ಷ.

* ಆಟವಾಡಲು ಹೋಗುವ ಮುನ್ನ ಏಳು ವಯಸ್ಸಿನ ಹುಡುಗಿ ಬಟ್ಟೆ ತುಂಬಾ ಪರ್‌ಫ್ಯೂಮ್ ಹಾಕ್ಕೊಂಡಿರ‍್ತಾಳೆ. ಅವಳದೇ ವಯಸ್ಸಿನ ಹುಡುಗ ಕೆನ್ನೆಗೆ ಆಫ್ಟರ್ ಶೇವ್ ಲೋಷನ್ ಹಾಕ್ಕಂಡಿರ‍್ತಾನೆ. ಆಟದ ಸಂದರ್ಭದಲ್ಲಿ, ಈ ಘಮಘಮ ವಾಸನೆ ತುಂಬಾ ಚನ್ನಾಗಿದೆ ಅಲ್ವ ಎಂದು ಅವರಿಬ್ರೂ ಪರಸ್ಪರ ಹೇಳಿಕೊಳ್ತಾರೆ ನೋಡಿ- ಅದೇ ಪ್ರೀತಿ.
-ಬಿಲ್ಲಿ, ೪ ವರ್ಷ.

* ಪಾನಿಪೂರಿ, ಗೋಬಿಮಂಚೂರಿ ತಿಂದು ಚ್ಯೂಸ್ ಕುಡಿದು ಬರೋಣ ಅಂತ ಹೊರಗೆ ಹೋಗಿದ್ದಾಗ, ತಿಂಡಿಗೆ ಬಾಯಿ ಹಾಕುವ ಮೊದಲೇ ಒಂದಷ್ಟು ಜನ ಬಡವರು ಬಂದು ‘ಅಮ್ಮಾ ಹಸಿವು…’ ಅಂತಾರೆ. ಅಂಥ ಸಂದರ್ಭದಲ್ಲಿ ಅವರಿಗೆ ಹೊಟ್ಟೆ ತುಂಬುವಷ್ಟು ಊಟ ಹಾಕಿಸಿ, ಅವರು ಸಂತೃಪ್ತಿಯಿಂದ ತೇಗುವುದನ್ನು ಕಂಡು ಖುಷಿಪಡುವುದಿದೆಯಲ್ಲ? ಅದೇ ಪ್ರೀತಿ.
-ರಾಮುಲು, ೬ ವರ್ಷ.

* ಅಪ್ಪ-ಅಮ್ಮ, ಬಂಧು-ಬಳಗ, ಗುರು-ಹಿರಿಯರು ಮತ್ತು ಇತರರಿಗೆ ನಮ್ಮಿಂದ ಯಾವ ಸಂದರ್ಭದಲ್ಲಿಯೂ ನೋವಾಗದಂತೆ ನೋಡಿಕೊಳ್ಳುವುದೇ ನಿಜವಾದ ಪ್ರೀತಿ.
-ಗೀತಾಂಜಲಿ, ೮ ವರ್ಷ.

* ಕೆಲಸದ ಒತ್ತಡ ಅಥವಾ ಯಾವುದೋ ಸಂಕಟದ ಕಾರಣದಿಂದ ನಾವು ವಿಪರೀತ ಸುಸ್ತಾಗಿದ್ದಾಗ, ಜೊತೆಗಿದ್ದವರು ನಮ್ಮ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸ್ತಾರಲ್ಲ- ಅದು ನಿಜವಾದ ಪ್ರೀತಿಯ ಲಕ್ಷಣ.
-ಮೇರಿ, ೬ ವರ್ಷ.

* ನಮ್ಮ ಡ್ಯಾಡಿ ಸಂಜೆ ಆಫೀಸಿನಿಂದ ಬರ‍್ತಾರಲ್ಲ? ಆಗ ಕಾಫಿ ತಯಾರಿಸಿದ ಅಮ್ಮ, ಪಪ್ಪಂಗೆ ಕೊಡುವ ಮೊದಲೇ ಒಂದು ಗುಟುಕು ಕುಡಿದು, ರುಚಿ ಸರಿಯಾಗಿದೆ ಎಂದು ಗ್ಯಾರಂಟಿ ಮಾಡಿಕೊಂಡು, ನಂತರವಷ್ಟೇ ಕಾಫಿ ಕೊಟ್ಟು, ರಿಲ್ಯಾಕ್ಸ್ ಆಗಿ ಎನ್ನುತ್ತಾ, ಮೃದುವಾಗಿ
ಪಪ್ಪನ ತಲೆ ನೇವರಿ ಸುತ್ತಾಳಲ್ಲ? ಅದು ಪ್ರೀತಿ.
-ಡ್ಯಾನಿ, ೭ ವರ್ಷ.

* ತುಂಬ ದ್ವೇಷಿಸುವ ಗೆಳೆಯ/ಗೆಳತಿಯ ಬದುಕು ಸಂಕಷ್ಟಕ್ಕೆ ಸಿಕ್ಕಿಕೊಂಡಿದೆ ಅಂದಾಗ, ತಕ್ಷಣವೇ ಅವರ ನೆರವಿಗೆ ಧಾವಿಸುವುದಿದೆಯಲ್ಲ- ಪ್ರೀತಿಯೆಂದರೆ ಅದೇ, ಅದೇ.
-ಅಮೃತಾ, ೮ ವರ್ಷ.

* ಬರ್ತ್‌ಡೇ ಖುಷಿಯಲ್ಲಿದ್ದ ಮಗು, ತನಗಾಗಿ ತಂದಿದ್ದ ಉಡುಗೊರೆಗಳನ್ನು, ಹೊಸ ಬಟ್ಟೆಗಳನ್ನು ಅಲ್ಲಿರುವ ಎಲ್ಲ ಮಕ್ಕಳಿಗೂ ಹಂಚಬೇಕು ಎಂದು ಪಟ್ಟುಹಿಡಿದು ಅಳುತ್ತದಲ್ಲ- ಅದು ಪ್ರೀತಿ.
-ಬಾಬ್ಬಿ, ೭ ವರ್ಷ.
* ನೀನು ಈ ಡ್ರೆಸ್‌ನಲ್ಲಿ ತುಂಬ ಚನ್ನಾಗಿ ಕಾಣ್ತೀಯ ಎಂದು ತಮಾಷೆಗೆ ಹೇಳಿದ್ರೆ, ಅದನ್ನೇ ನಿಜವೆಂದು ನಂಬಿ, ನಂತರದ ಪ್ರತಿ ಭೇಟಿಯಲ್ಲೂ ಆ ಡ್ರೆಸ್‌ನಲ್ಲೇ ಗೆಳೆಯ/ಗೆಳತಿ ಕಾಣಿಸಿಕೊಳ್ತಾರಲ್ಲ? ಅದೇ ಶುದ್ಧ ಪ್ರೀತಿ.
-ಹಾರಿಕಾ, ೬ ವರ್ಷ.

* ಈಗಲೋ ಆಗಲೋ ಸಾಯಬಹುದು ಎಂಬಂತೆ ಕಾಣುವ ಅಜ್ಜ-ಅಜ್ಜಿ, ಭರ್ತಿ ೬೦ ವರ್ಷ ಜತೆಯಾಗಿ ಬದುಕಿದ ನಂತರವೂ ನೆನ್ನೆಯಷ್ಟೇ ಪರಿಚಯವಾದವರಂತೆ ಹರಟುತ್ತಾ ಕೂತಿರುತ್ತಾರಲ್ಲ? ಅದೇ ನಿಜವಾದ ಪ್ರೀತಿ.
-ಜೋಸಫಿನ್, ೯ ವರ್ಷ.

* ಆಟವಾಡುವಾಗ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದರೂ, ಅದನ್ನು ಕಂಡರೆ ಅಮ್ಮನಿಗೆ ಬೇಸರವಾಗುತ್ತೆ ಎಂಬ ಕಾರಣಕ್ಕೆ ಸತ್ಯ ಹೇಳದೆ, ಅನಿವಾರ‍್ಯವಾಗಿ ಸುಳ್ಳು ಹೇಳಿ ಆಕೆಯನ್ನು ಖುಷಿಪಡಿಸಲು ಒಂದು ಮಗು ಪ್ರಯತ್ನಿಸುತ್ತೆ ನೋಡಿ- ಅದೇ ಪ್ರೀತಿ.
-ಜೆಸ್ಸಿಕಾ, ೮ ವರ್ಷ.

* ಅವತ್ತು ನನ್ನ ಅರಂಗೇಟ್ರಂ ನಡೆಯಲಿತ್ತು. ಮೇಕಪ್ ಮುಗಿಸಿಕೊಂಡು ಸಭಾಂಗಣಕ್ಕೆ ಬಂದು ನೋಡಿದರೆ- ಜನಜಾತ್ರೆ! ಅಷ್ಟೊಂದು ಜನರನ್ನು ಕಂಡದ್ದೇ ನನಗೆ ನನಗೆ ಮೈ ನಡುಕ ಶುರುವಾಯಿತು. ಕಾಲುಗಳು ಗಡಗಡ ನಡುಗಲು ಶುರುಮಾಡಿ ದವು. ಪ್ರೇಕ್ಷಕರೆಲ್ಲ ನನ್ನನ್ನೇ ನೋಡುತ್ತಿದ್ದರು. ನಾನು ಗಾಬರಿಯಿಂದ ಪ್ರೇಕ್ಷಕರ ಮಧ್ಯೆ ಕೂತಿದ್ದ ತಂದೆಯ ಕಡೆ ನೋಡಿದೆ. ಅಪ್ಪ ಸಂಭ್ರಮದಿಂದ ನಗುತ್ತ, ನನಗಷ್ಟೇ ಅರ್ಥವಾಗುವಂತೆ- ಗೆದ್ದು ಬಾ ಮಗಳೇ ಎಂದರು. ಅಪ್ಪನ ಮಾತು ‘ಅರ್ಥವಾದ’ ತಕ್ಷಣ ನನ್ನ ಮೈ ನಡುಕ ನಿಂತು ಹೋಯಿತು. ಹೌದು, ನನ್ನ ಮಟ್ಟಿಗೆ ಅದೇ ನಿಜವಾದ ಪ್ರೀತಿ.
-ಪ್ರತಿಭಾ, ೭ ವರ್ಷ.

* ಮಲಗಿರುವ ಕಂದನ ಹಣೆಗೆ, ಅದಕ್ಕೆ ಗೊತ್ತಾಗದಂತೆ ಚುಂಬಿಸಿ, ಅಮ್ಮ ಖುಷಿಪಡ್ತಾಳೆ ನೋಡಿ; ಅದೇ ನಿಜವಾದ ಪ್ರೀತಿ.

-ಕ್ಲಾರಾ, ೫ ವರ್ಷ.
* ಅಮ್ಮನ ಗೈರು ಹಾಜರಿಯಲ್ಲಿ ಮಕ್ಕ ಳೊಂದಿಗೆ ಊಟಕ್ಕೆ ಕೂತ ತಂದೆ, ಪಾತ್ರೆಯಲ್ಲಿ ಒಂದೇ ಒಂದು ಅಗುಳೂ ಉಳಿದಿಲ್ಲ ಎಂದು ತಿಳಿದನಂತರ ಕೂಡ- ‘ಕಂದಾ, ಹೊಟ್ಟೆ ತುಂಬಿದ್ಯಾ? ಇನ್ನೂ ಸ್ವಲ್ಪ ಊಟ ಬೇಕಾ?’ ಅಂತ ಆಸೆಯಿಂದ ಕೇಳ್ತಾನಲ್ಲ- ಅದೇ ಪ್ರೀತಿ.
-ಜಾಕೋಬ್, ೭ ವರ್ಷ.

* ಬೆಳಗಿಂದ ಸಂಜೆಯವರೆಗೂ ಟಾಮಿಯನ್ನು ಒಂಟಿಯಾಗಿ ಬಿಟ್ಟು ಹೋದರೂ, ಸಂಜೆ ಮನೆಯ ಜನರೆಲ್ಲ ಬಂದ ತಕ್ಷಣ ಅದು ಓಡೋಡಿ ಬಂದು ಎಲ್ಲರ ಕೈ, ಕಾಲಿಗೆ ತಾಕಿಕೊಂಡೇ ಓಡಾಡುತ್ತಾ, ಎಲ್ಲರಿಂದಲೂ ತನ್ನನ್ನು ಮುದ್ದು ಮಾಡಿಸಿಕೊಳ್ಳುತ್ತ, ಆಗಾಗ್ಗೆ ಹುಸಿಕೋಪ ತೋರುತ್ತದಲ್ಲ? ಅದೇ ಪ್ರೀತಿ.
-ರ‍್ಯಾಂಡಿ, ೪ ವರ್ಷ.

* ಗ್ಯಾಂಗ್ರಿನ್‌ಗೆ ಒಳಗಾಗಿ ಕೈ ಕತ್ತರಿಸಿಕೊಂಡ ಗಂಡನ ಮುಂದೆ ಕುಳಿತು, ‘ನಿಮಗೆ ಏನೂ ಆಗಿಲ್ಲ ರೀ, ಈಗಲೂ ನೀವು ಬಹಳ ಚನ್ನಾಗಿ ಕಾಣ್ತಿದೀರ’ ಎಂದು ಹೆಂಡತಿ ಧೈರ‍್ಯ ಹೇಳ್ತಾಳಲ್ಲ, ಅದೇ ನಿಜವಾದ ಪ್ರೀತಿ.
-ಕೆವಿನ್ ಕರೇನ್, ೬ ವರ್ಷ.

* ಅಮ್ಮ ಹುಷಾರಿಲ್ಲದೆ ಮಲಗಿದ್ದಾಗ, ಹಿಂದೆ ಆಕೆ ಮಾಡಿದ್ದ ಪ್ರಾರ್ಥನೆಯನ್ನೇ ಅರೆಬರೆಯಾಗಿ ನೆನಪು ಮಾಡಿಕೊಂಡು ದೇವರ ಮುಂದೆ ಕುಳಿತ ಪುಟ್ಟ ಮಗು- ‘ನಮ್ಮ ಅಮ್ಮನಿಗೆ ಒಳ್ಳೆಯದು ಮಾಡಪ್ಪಾ’ ಎಂದು ಪ್ರಾರ್ಥಿಸುತ್ತಾ ಕಂಬನಿ ಮಿಡಿಯುತ್ತದಲ್ಲ; ಈ ಮಾತುಗಳನ್ನು ಆಕಸ್ಮಿಕವಾಗಿ ಕೇಳಿಸಿಕೊಂಡ ಅಮ್ಮ ಹಾಸಿಗೆಯಲ್ಲೇ ಕಣ್ಣೀರಾಗುತ್ತಾಳಲ್ಲ. ಅದೇ ಪ್ರೀತಿ.
-ಅಮೆಂಡೋ, ೭ ವರ್ಷ.

* ಸೋತು ಬಂದವರನ್ನು ಎಲ್ಲರೂ ಹೀಗಳೆಯುತ್ತಿದ್ದಾಗ ಅವನನ್ನು ಪಕ್ಕಕ್ಕೆ ಕರೆದು- ‘ಇದಕ್ಕೆಲ್ಲ ಯೋಚನೆ ಮಾಡಬೇಡ. ಸೋಲೇ ಗೆಲುವಿನ ಸೋಪಾನ’ ಎಂದು ಸಮಾಧಾನ ಹೇಳುವ ಅಪರಿಚಿತನ ಮಾತಿದೆಯಲ್ಲ; ಅದೇ ಪ್ರೀತಿ.
-ಸ್ಟೀವನ್‌ಸನ್, ೬ ವರ್ಷ

* ಮನೆಯ ಮುಂದೆ ಕಡ್ಲೆಕಾಳಿನಷ್ಟು ಗಾತ್ರದ ಬೆಲ್ಲದ ಚೂರನ್ನು ಐದಾರು ಇರುವೆಗಳು ಹೊತ್ತೊಯ್ಯುವುದನ್ನು ಕಂಡ ಮಗು, ಸರಸರನೆ ಒಳಗೆ ಹೋಗಿ ಎರಡು ಸ್ಪೂನ್ ಸಕ್ಕರೆ ತಂದು ಅವುಗಳ ಮುಂದೆ ಹಾಕಿ- ‘ಹೊಟ್ಟೆ ತುಂಬ ತಿನ್ನಿ’ ಎಂದು ಹೇಳುವ ಮಾತಿದೆಯಲ್ಲ? ಅದು ನಿಜವಾದ ಪ್ರೀತಿ.
-ಟಬು, ೮ ವರ್ಷ.

* ರಾತ್ರಿ ಊಟ ಮಾಡುತ್ತಾ, ಆಗಸದಲ್ಲಿರುವ ಚಂದ್ರನನ್ನೇ ಖುಷಿಯಿಂದ ನೋಡುವ ಮಗು- ‘ಊಟ ಮಾಡೋಣ ಬಾರೋ’ ಎಂದು ಕೂಗುವುದು; ಅವನು ಬರದೇ ಹೋದಾಗ ಒಂದು ತುತ್ತು ತೆಗೆದು ಕೆಳಗಿಟ್ಟು- ‘ನಾನು ಅವಿತುಕೊಂಡಿರ‍್ತೀನಿ ಬೇಗ ಬಂದು ತಿಂದ್ಕೊಂಡು ಹೋಗು’ ಎನ್ನುತ್ತಾ ಬಾಗಿಲ ಮರೆಯಲ್ಲಿ ಅಡಗಿ ನಿಲ್ಲುತ್ತದಲ್ಲ? ಅದು ಪ್ರೀತಿ.
-ಕಾರ್ತಿಕ್ ಆರ್. ರೆಡ್ಡಿ, ೫ ವರ್ಷ.

* ಪಕ್ಕದ ಮನೆಯ ಆಂಟಿ ಡಿಢೀರನೆ ತೀರಿಕೊಂಡ್ರು. ದಿಕ್ಕು ತೋಚದಂತಾದ ಅಂಕಲ್ ಚೋರಾಗಿ ಅಳಲು ಶುರುಮಾಡಿದ್ರು. ಅದನ್ನು ಕಂಡು ನಾನು ಒಂದೊಂದೇ ಹೆಜ್ಜೆ ಇಡ್ತಾ ಅಂಕಲ್ ಹತ್ರ ಹೋದೆ. ಅವರ ತೊಡೆ ಹತ್ತಿ ಕೂತ್ಕೊಂಡೆ. ನಂತರ ಅವರ ಕಣ್ಣೀರು ಒರೆಸೋಕೆ ಹೋದೆ. ತಕ್ಷಣವೇ ನನಗೂ ವಿಪರೀತ ಅಳು ಬಂತು. ಅವರ ಜೊತೆಗೇ ಅಳುತ್ತಾ ಕೂತುಬಿಟ್ಟೆ. ಆಗ ಅಂಕಲ್, ತಮ್ಮ ದುಃಖ ಮರೆತು, ನನ್ನನ್ನು ಸಮಾಧಾನ ಮಾಡೋಕೆ ನಿಂತರು. ನಿಜವಾದ ಪ್ರೀತಿ ಅಂದ್ರೆ ಅದೇ.
-ರೂಪ್ ಕನ್ವರ್, ೬ ವರ್ಷ.

* ಬಿಸಿಲು ಕಾಯುತ್ತ ಕೂತ ಮಗು, ದಿಢೀರನೆ ಬಿಸಿಲು ಹೆಚ್ಚಿದಾಗ ಆಕಾಶದ ಸೂರ‍್ಯನನ್ನೇ ನೋಡುತ್ತಾ- ‘ನಂಗೆ ಚುರು ಚುರು ಅನ್ನಿಸ್ತೀಯಾ? ನಿಂಜೊತೆ ‘ಠೂ’ ಎಂದು ಮುಖ ಊದಿಸಿಕೊಂಡು ಒಳಗೆ ಹೋಗಿ ಅಮ್ಮನಿಗೆ ಸೂರ್ಯನ ಮೇಲೆ ದೂರು ಹೇಳುತ್ತದಲ್ಲ? ಅದೇ ಪ್ರೀತಿ.
-ವಿಕ್ರಮನ್, ೬ ವರ್ಷ.

42 Comments »

 1. 1

  ಪ್ರೀತಿಯ ವ್ಯಾಕ್ಯ ಚೆನ್ನಾಗಿದೆ
  ಪ್ರೀತಿ ”ಅವರವರ ಮನಕೆ ತಿಳಿದಂತೆ” ಏನಾದರೆ ಸೂಕ್ತವೇನೋ ಅಲ್ಲವೇ?
  ಅದು ಹೀಗೆಯೇ ಎನ್ನುವುದು ಕಷ್ಟ
  ಒಳ್ಳೆಯ ಲೇಖನ

 2. 5
  'ಗುರು-ದೆಸೆ !! Says:

  ಮಣಿಕಾಂತ್ ಅವ್ರೆ..

  ಪ್ರೀತಿಯ ಬಗ್ಗೆ ಅವರ ಮಾತುಗಳು ಎಷ್ಟು ಸರಿ ಅಲ್ಲವೇ?

  ನನ್ನ ‘ಮನಸಿನಮನೆ’ಗೆ..:http//manasinamane.blogspot.com

 3. 6

  ಪ್ರೀತಿ ಎಂದರೆ ಮುಳ್ಳನ್ನೂ ಮರೆಸುವ ಹೂ ಮನದ ಸೌಂದರ್ಯ 🙂
  :ನೂತನ್ ಎಚ್ ಬಿ ೨೬ ವರ್ಷ.

 4. 10
  ajay kumar Says:

  ಪ್ರೀತಿ ಅಂದರೆ ಹದಿ ಹರೆಯದ ಎರಡು ಹೃದಯಗಳ ಪಯಣಕ್ಕೆ ಹಾದಿ.ಪ್ರೀತಿ ಪ್ರತಿಯೊಬ್ಬರ ಜೀವನದಲ್ಲಿ ಪ್ರತಿಯೊಂದು ಕ್ಷಣ ಅವಶ್ಯಕವಿರುವ ಸಂಬಂಧ.

 5. 11
  NANDINI Says:

  PRETHI ANDRY DOKAVANU MARYSUTY,, ADARY KYLAVOMY DUKA KODUTHI

 6. 13
  kavya Says:

  prethi andry novu, nalevu eardu arey nage adu…….

 7. 15
  kavya cn Says:

  prethi mathu thubaa channgedey…….. edu neja.

 8. 17
  Mayur Says:

  love is born to pain but one thing remembering all youngstars
  you will loveseverybody but believes somebody this secret for you eople

 9. 18
  Mayur Says:

  love is born to pain but one thing remembering all youngstars
  you will loves everybody but believes somebody this secret for you people

 10. 23
  ammu Says:

  prithi anodu allarigu avashyaka but athi adre amruthanu visha aguthe.. prithine jeevana alla prithi annodu jeevanadalli baro ondu sanna bhaga ashte…… prithigintha jeevana doddadu………………. dont forget it……..

 11. 25
  krupa Says:

  hsi friends preethi andre care ,nambike aste……………

 12. 27
  ragini Says:

  hai friend,

  your writting is very super because small moments expressed your love.i really like it this article.nanu ondu huduganannu 5 years inda love madtayidde,adare avanu nanna love madiddu sex ge matra ega bere hudugina love madtayidane.nanage nanna huduga feb 14 ge kotta big gift edu.avanu elle eddaru chennagirali annkolodu preethi alva,egalu avanannu praaaaaanaaaa kintha hechhu love madtayidini avanigoskara wait madbeka bedva anno confuse agide please give solution for me

  thanking you.

  • 28
   ravi Says:

   raginiyavre 5nimishadalli hutto preetina mareyoke 5varsha beku anthadrlli nivu 5varshudinda preethi madi ha hudga nimge mosa madidru avna mathe avngoskora nim pranaa kodthini anthirella nijvaglu avnge nim kai idyo yogyathe illa.

  • ರಾಗಿಣಿಯವರೇ,
   ನಮ್ಮ ಜೀವನ ಒಂದು ಪ್ರಯಾಣ. ಅಲ್ಲಿ ನಾವು ಕಾಯಬೇಕಾದದ್ದು ಕ್ಷೇಮವಾಗಿ ದಡ ಸೇರಿಸುವ ದೋಣಿಗೊಸ್ಕರಾನೆ ಹೊರತು, ಕೊಚ್ಚಿಕೊಂಡು ಹೋಗೋ ಅಲೆಗಳಿಗಲ್ಲ. ಪ್ರೀತಿಯಲ್ಲಿ ಬಯಕೆ ಕೂಡಾ ಒಂದು ಅಂಶ. ಆದರೆ ಅದೇ ಕೊನೆಯಲ್ಲ. ಪ್ರೀತೀನ ಮರೆಯೋದು ಅಸಾಧ್ಯ. ಆದರೆ ಪ್ರೀತಿಯಲ್ಲದ ಕೃತಕ ಭಾವನೆಗಳಿಂದ ತಪ್ಪಿಸಿಕೊಳ್ಳೋದು ಸಾಧ್ಯ. confuse ಬೇಡ. ಧೃಡ ನಿರ್ಧಾರ ಅಗತ್ಯ. ನಿಮ್ಮ ಪ್ರೀತಿಯಲ್ಲಿ ಸಿಗದ ಸುಖವನ್ನು ದೇಹಸುಖದಲ್ಲಿ ಕಾಣಬಯಸುವ, ಅದೂ ಇನ್ನೊಂದು ಹುಡುಗಿಯ ಹಿಂದೆ ಹೋದ ಆ ಹುಡುಗ ನಿಮಗೆ ತಕ್ಕವನಲ್ಲ ಅಂದ್ಕೊಳ್ಳಿ. ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು.

  • ರಾಗಿಣಿಯವರೇ,
   ನಮ್ಮ ಜೀವನ ಒಂದು ಪ್ರಯಾಣ. ಅಲ್ಲಿ ನಾವು ಕಾಯಬೇಕಾದದ್ದು ಕ್ಷೇಮವಾಗಿ ದಡ ಸೇರಿಸುವ ದೋಣಿಗೊಸ್ಕರಾನೆ ಹೊರತು, ಕೊಚ್ಚಿಕೊಂಡು ಹೋಗೋ ಅಲೆಗಳಿಗಲ್ಲ. ಪ್ರೀತಿಯಲ್ಲಿ ಬಯಕೆ ಕೂಡಾ ಒಂದು ಅಂಶ. ಆದರೆ ಅದೇ ಕೊನೆಯಲ್ಲ. ಪ್ರೀತೀನ ಮರೆಯೋದು ಅಸಾಧ್ಯ. ಆದರೆ ಪ್ರೀತಿಯಲ್ಲದ ಕೃತಕ ಭಾವನೆಗಳಿಂದ ತಪ್ಪಿಸಿಕೊಳ್ಳೋದು ಸಾಧ್ಯ. confuse ಬೇಡ. ಧೃಡ ನಿರ್ಧಾರ ಅಗತ್ಯ. ನಿಮ್ಮ ಪ್ರೀತಿಯಲ್ಲಿ ಸಿಗದ ಸುಖವನ್ನು ದೇಹಸುಖದಲ್ಲಿ ಕಾಣಬಯಸುವ, ಅದೂ ಇನ್ನೊಂದು ಹುಡುಗಿಯ ಹಿಂದೆ ಹೋದ ಆ ಹುಡುಗ ನಿಮಗೆ ತಕ್ಕವನಲ್ಲ ಅಂದ್ಕೊಳ್ಳಿ. ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು.
   ನಿಮ್ಮ ನೋವು-ನಲಿವನ್ನು http://navavasantha.wordpress.com ನಲ್ಲಿ ಹಂಚಿಕೊಳ್ಳಿ.

 13. ಗೆಳೆಯರೇ,
  ಪ್ರೀತಿ ಅಂದ್ರೆ ಹೀಗೆ ಅಂತ ನಿರ್ದಿಷ್ಟವಾದ ವ್ಯಾಖ್ಯಾನ ನೀಡೋದು ಅಸಾಧ್ಯಾನೆ ಸರಿ. ಒಬ್ಬೊಬ್ಬರ ಭಾವನೆಗಳು ಒಂದೊಂದು ರೀತಿ. ಆದರೆ ಪ್ರೀತಿ ಅನ್ನೋದು ಒಬ್ಬ ಹುಡುಗ ಅಥವಾ ಒಬ್ಬ ಹುಡುಗಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಅದೊಂದು ಜೀವಾಮೃತ.

 14. 33
  manjunath.r Says:

  kellsakke hogi nana amma dhuddidhu bamthu manege thirallu vaga a yagga mana anatharu thinnallu kottare athannu thanu thinnathe mothallu thanna makkallige kottu mathe thanu thinthlle athe najavatha preethi

 15. 34
  manjunath.r Says:

  kellsakke hogi nana amma dhuddidhu bamthu manege thirallu vaga a yagga mana anatharu thinnallu kottare athannu thanu thinnathe mothallu thanna makkallige kottu mathe thanu thinthlle athe najavatha preethi (manjunath r murugesh palya )

 16. 35
  Ruthvik Says:

  Suma what is the difference between love and sex and vaasne and vaasane?

 17. 36
  ajith Says:

  preeti andra kelasavillada 2 hrudayagala sammilana

 18. 37

  tilidare preeti yallau aadre tiliyaddiddre yenu alla

 19. preti andre ibbarallu irabeku andag matra preti ge preti huttodu. illa andae preti ge artha iralla. ondu vele ibbarallu preti iddu yaru yaregu helade iddre yenu upyogavilla. yakendra idu nanna jivanada mele jambira parinaamwgide. yene aggli priti nimmalli huttidre takeshna hele bidi.

  nimma dukka nagage helalu bayasidara e number ge phone madi
  (09086231738)

 20. 39
  Mahesh Says:

  love is not only a feeling it is gift of nature . Assume that if there is not love in this world what may happen ?

 21. 40
  somashekhar Says:

  Nadiddu exam idru, time 1 o’clock adru nim article odtidinalla idke enantiri?

 22. 42
  hema Says:

  prati yobba manush preethi meli dipend agirthni alva frends ??????? ! adhu yaramili agiru bhaudu


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: