Archive for the ‘ಚೌಚೌ ಬಾತ್..’ Category

ಗಯಟೆ, ಗ್ರೇಟ್ ಅನ್ನಿಸಿಕೊಂಡದ್ದು ಹೇಗೆ ಗೊತ್ತ?

ಡಿಸೆಂಬರ್ 30, 2008

123

ಆತ ತಾನು ಸಾಯಲು ಹೆದರಿ ಕಾದಂಬರಿಯ ಕಥಾನಾಯಕನನ್ನು ಸಾಯಿಸಿದ!
ಜಗತ್ತಿನ ಶ್ರೇಷ್ಠ ಸಾಹಿತಿಗಳು ಎಂದು ಪಟ್ಟಿ ಮಾಡಲು ಹೊರಟಾಗ ತಕ್ಷಣ ನೆನಪಾಗುವಾತ ಜರ್ಮನ್ ಸಾಹಿತಿ ಗಯಟೆ (ಎಟಛಿಠಿeಛಿ). ತನ್ನ ಮೊದಲ ಕೃತಿ `ದಿ ಸಾರೋಸ್ ಆಫ್ ವೆರ್ಥರ್’ (Seಛಿ oಟಡ್ಟ್ಟಿಟಡಿo ಟ್ಛ ಛ್ಟಿಠಿe) ಮೂಲಕ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮನೆಮನೆಯ ಮಾತಾದವನು ಗಯಟೆ.
ಬಹುಮಂದಿಗೆ ಗೊತ್ತಿಲ್ಲದ ಸ್ವಾರಸ್ಯವೊಂದಿದೆ. ಅದು ಗಯಟೆಯ ವಿಫಲ ಪ್ರೇಮದ ಕಥೆ. ಏನೆಂದರೆ, ಯೌವನದ ದಿನಗಳಲ್ಲಿ ಉಳಿದೆಲ್ಲರಂತೆಯೇ ಗಯಟೆ ಕೂಟ ಸುಂದರಿಯೊಬ್ಬಳ ಮೋಹದಲ್ಲಿ ಬಿದ್ದ. ಸ್ವಾರಸ್ಯ ಕೇಳಿ: ಆ ವೇಳೆಗಾಗಲೇ ತಾನಿದ್ದ ನಗರದಲ್ಲಿ ಹತ್ತು ಮಂದಿಯಿಂದ ಕವಿ, ಸಾಹಿತಿ ಎಂದು ಕರೆಸಿಕೊಂಡಿದ್ದರೂ; ಆ ಸುಂದರಿಯ ಮುಂದೆ ನಿಂತು`ಐ ಲವ್ ಯೂ’ ಎನ್ನುವ ಧೈರ್ಯ ಗಯಟೆಗೆ ಇರಲಿಲ್ಲ. ಆತ- ಇವತ್ತು, ನಾಳೆ, ನಾಡಿದ್ದು, ಆಚೆನಾಡಿದ್ದು ಈ ವಿಷಯ ಹೇಳಿದರಾಯಿತು ಎಂದು ಹಾಗೇ ದಿನ ನೂಕಿದ. ಈ ಮಧ್ಯೆ ಕಣ್ಣಭಾಷೆಯಲ್ಲೇ ಆ ಬೆಡಗಿಗೆ ಎಲ್ಲವನ್ನೂ ಹೇಳಿಬಿಡಲು ಪ್ರಯತ್ನಿಸಿದ. ಆದರೆ ಪ್ರಯೋಜನವಾಗಲಿಲ್ಲ.
ಕಡೆಗೊಂದು ದಿನ ಭಂಡ ಧೈರ್ಯ ಮಾಡಿ, ಈ ಕವಿ ಸಾರ್ವಭೌಮ ಆ ಬೆಡಗಿಯ ಮುಂದೆ ನಿಂತು ತೊದಲುತ್ತ, ತೊದಲುತ್ತಲೇ `ನಾನು… ನಾನು ನಿಮ್ಮನ್ನು ಪ್ರೀ…ತಿ…ಸ್ತಾ…ಇ…ದೀ…ನಿ’ ಅಂದೇಬಿಟ್ಟ. ಆ ಬೆಡಗಿ ಇವನನ್ನೇ ಒಮ್ಮೆ ಅನುಕಂಪದಿಂದ ನೋಡುತ್ತ-`ಈ ಮಾತು ಹೇಳ್ತೀರ ಅಂತ ನಾನು ಒಂದು ವರ್ಷದಿಂದ ಕಾದಿದ್ದೆ ಕಣ್ರೀ. ನೀವು ಹೇಳಲೇ ಇಲ್ಲ. ತಿಂಗಳ ಹಿಂದಷ್ಟೇ ನನಗೆ ಎಂಗೇಜ್ಮೆಂಟ್ ಆಯ್ತು. ಸಾರಿ’ ಎಂದು ಕಣ್ತುಂಬಿಕೊಂಡು ಹೋಗಿಯೇಬಿಟ್ಟಳು.
ಇಂಥದೊಂದು ಸನ್ನಿವೇಶ ಎದುರಾಗಬಹುದೆಂದು ಗಯಟೆ ಕನಸು ಮನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆ ಸುಂದರಿಯಿಲ್ಲದೆ ಬದುಕುವುದೇ ಸಾಧ್ಯವಿಲ್ಲ ಎಂದಾತ ಲೆಕ್ಕ ಹಾಕಿದ. ಅವಳೇ ಸಿಗಲಿಲ್ಲ ಎಂದ ಮೇಲೆ ಬದುಕಿ ಪ್ರಯೋಜನವೇನು ಎಂದು ಯೋಚಿಸಿ ವಿಷ ಕುಡಿದು ಸತ್ತು ಹೋಗಲು ನಿರ್ಧರಿಸಿದ. ಆದರೆ ವಿಷದ ಬಾಟಲಿ ಕೈಗೆತ್ತಿಕೊಂಡಾಗ ಆತ ನಿಂತಲ್ಲೇ ನಡುಕ ಶುರುವಾಯಿತು. ಥತ್, ಇದೇಕೋ ಸರಿ ಹೋಗುತ್ತಿಲ್ಲ ಎಂದುಕೊಂಡು ಕೆಲ ದಿನಗಳ ನಂತರ ಒಂದು ಬೆಟ್ಟದ ಮೇಲಿಂದ ಜಿಗಿದು ಸಾಯಲು ಹೋದ. ಆದರೆ ಬೆಟ್ಟ ಹತ್ತುವ ಮೊದಲೇ ಅವನ ಕಾಲು ನಡುಗಲು ಆರಂಭಿಸಿದವು!
ಆತ್ಮಹತ್ಯೆ ಮಾಡಿಕೊಳ್ಳುವುದು ನನ್ನಿಂದಾಗದ ಕೆಲಸ ಅನ್ನಿಸಿದ ತಕ್ಷಣ-ತನ್ನ ಬದುಕಿನ ಕಥೆಯನ್ನೇ ಕಾದಂಬರಿ ರೂಪದಲ್ಲಿ ಬರೆದು ಕಥಾನಾಯಕನನ್ನೇ ಕಡೆಯಲ್ಲಿ, ಆತ್ಮಹತ್ಯೆಯ ಮೂಲಕ ಸಾಯಿಸಿಬಿಟ್ಟರೆ ಹೇಗೆ ಎಂದು ಗಯಟೆ ಯೋಚಿಸಿದ. ಮುಂದೆ, ತನ್ನ ಮೊದಲ ಕಾದಂಬರಿಗೆ ಅಂಥದೇ ಅಂತ್ಯವನ್ನು ನೀಡಿದ!
ಇದೇನೂ ಗೊತ್ತಿಲ್ಲದ ಓದುಗರು- ವಿಫಲ ಪ್ರೇಮದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡ ಕಥಾನಾಯಕನಿಗಾಗಿ ಮರುಗಿದರು. ಗಯಟೆಯನ್ನು ಶ್ರೇಷ್ಠ ಸಾಹಿತಿ ಎಂದು ಪರಿಗಣಿಸಿ, ಆತನ ಕೈ ಮುಟ್ಟಿ ಕಣ್ಣಿಗೆ ಒತ್ತಿಕೊಂಡರು!
ಇದು ಸತ್ಯವೂ ಹೌದು; ವಿಚಿತ್ರವೂ ಹೌದು…

ಎಂಜಿನ್ ಓಡ್ತಾ ಇದ್ದಾಗಲೇ ರಿಪೇರಿ ಆಗುತ್ತೆ!

ಡಿಸೆಂಬರ್ 30, 2008

ಹೃದ್ರೋಗ ತಜ್ಞರು ಟೂರ್ ಹೊರಟಿದ್ದರು. ಮಾರ್ಗಮಧ್ಯದಲ್ಲಿ ಆಕಸ್ಮಿಕವಾಗಿ ಅವರ ಕಾರು ಕೆಟ್ಟು ನಿಂತಿತು. ಕಡೆಗೊಮ್ಮೆ ಮೆಕ್ಯಾನಿಕ್ ಬಂದ. ಮಾತುಕತೆಯ ಮಧ್ಯೆ ಕಾರಿನ ಮಾಲೀಕರು ಹೃದ್ರೋಗ ತಜ್ಞರೆಂದು ತಿಳಿದು, ಅವರಿಗೆ ಕಾರ್‌ನ ಎಂಜಿನ್ ತೋರಿಸುತ್ತಾ ಹೇಳಿದ:

`ಇಲ್ನೋಡಿ ಸಾರ್, ನಾನು ಈ ಎಂಜಿನ್‌ನ ಸಂಪೂರ್ಣವಾಗಿ ಬಿಚ್ತೀನಿ. ಅದರೊಳಗಿರುವ ಪ್ರತಿಯೊಂದು ವಾಲ್ವ್, ನಟ್, ಬೋಲ್ಟ್‌ಗಳನ್ನೂ ಬಿಚ್ಚಿ, ಪರೀಕ್ಷಿಸಿ ಸರಿಯಾಗಿದೆಯೇ ಅಂತ ನೋಡ್ತೀನಿ. ಸವೆದು ಹೋಗಿದ್ರೆ ಅವುಗಳನ್ನು ಬದಲಿಸ್ತೀನಿ. ಕಡೆಗೊಮ್ಮೆ ಎಲ್ಲವನ್ನೂ ಮೊದಲಿನ ಥರಾನೇ ಜೋಡಿಸಿ, ಕಾರ್‌ನ ಬಾನೆಟ್ ಮುಚ್ಚಿಬಿಡ್ತೀನಿ. ಹಾಗೆ ನೋಡಿದ್ರೆ ನೀವು ಆಸ್ಪತ್ರೇಲಿ ಮಾಡೋದೂ ಇದೇ ಥರದ ಕೆಲಸ. ಅಲ್ವ ಸಾರ್? ನೀವೂ ಕೂಡ ನನ್ನ ಥರಾನೇ ಹೃದಯದ ಸುತ್ತಮುತ್ತಲಿನ ವಾಲ್ವ್‌ಗಳು ಸರಿಯಾಗಿವೆಯಾ ಅಂತ ನೋಡ್ತೀರಿ. ಹೆಚ್ಚು ಕಡಿಮೆಯಾಗಿದ್ರೆ ಸರಿ ಮಾಡಿ, ಕಡೆಗೊಮ್ಮೆ ಹೊಲಿಗೆ ಹಾಕಿ ಆಪರೇಷನ್ ಮುಗಿಸ್ತೀರಿ. ಆದ್ರೆ ನನ್ನ ದುಡಿಮೆಗೆ ಬರೀ ನೂರಿನ್ನೂರು ರೂ. ಸಂಭಾವನೆ ಸಿಗೊತ್ತೆ. ಆದ್ರೆ ನೀವು ಮಾತ್ರ ಲಕ್ಷಗಟ್ಟಲೆ ಸಂಭಾವನೆ ಪಡ್ಕೋತೀರಿ. ಒಂದೇ ರೀತಿಯ ಕೆಲಸಕ್ಕೆ ಎರಡು ಥರದ ಸಂಬಳ! ಇದು ನ್ಯಾಯವಾ ಸಾರ್…?’

-ಮೆಕ್ಯಾನಿಕ್‌ನ ಮಾತು ಮುಗಿದಾಕ್ಷಣ, ಆ ವೈದ್ಯರು-ಅವನನ್ನೇ ನೋಡುತ್ತ ಹೇಳಿದರು: `ನಮ್ಮಿಬ್ಬರ ಕೆಲಸದಲ್ಲಿ ಒಂದು ವ್ಯತ್ಯಾಸವಿದೆ ತಮ್ಮ. ನೀನು ಎಂಜಿನ್ ನಿಂತುಹೋಗಿರುವಾಗ ಅದರ ರಿಪೇರಿ ಮಾಡ್ತೀಯ. ಆದ್ರೆ, ಅದು ರಭಸದಿಂದ ಓಡ್ತಾ ಇರುವಾಗಲೇ ನಾನು ಅದರ ರಿಪೇರಿ ಮಾಡ್ತೀನಿ!’

ಅವರ ಬದುಕಿನ ಏರಿಳಿತಗಳ ಮಧ್ಯೆ ೧೨೯ ವರ್ಷಗಳ ಅಂತರವಿದೆ !

ಡಿಸೆಂಬರ್ 8, 2008

ಸರ್ವಾಧಿಕಾರಿಗಳು ಎಂದಾಕ್ಷಣ ನೆನಪಿಗೆ ಬರುವ ಹೆಸರುಗಳೆಂದರೆ ನೆಪೋಲಿಯನ್ ಹಾಗೂ ಹಿಟ್ಲರ್‌ದು. ಸ್ವಾರಸ್ಯವೆಂದರೆ, ಈ ಇಬ್ಬರಿಗೂ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ `ಆಳಬೇಕೆಂಬ’ ಆಸೆಯಿತ್ತು. ಇಬ್ಬರೂ ಒಂದು ಕಡೆ ಇಂಗ್ಲಿಷರನ್ನು, ಇನ್ನೊಂದು ಕಡೆ ರಷ್ಯನ್ನರನ್ನು ದ್ವೇಷಿಸಿಕೊಂಡೇ ಬೆಳೆದರು. ಮುಂದೆ ಅಧಿಕಾರ ಬಂದಾಗ ಇಂಗ್ಲೆಂಡ್ ಹಾಗೂ ರಷ್ಯಾದ ಮೇಲೆ ದಂಡೆತ್ತಿ ಹೋದರು. ಆರಂಭದ ದಿನಗಳಲ್ಲಿ ದೇವಲೋಕದ ಇಂದ್ರನೂ ನಾಚುವಂತೆ ಮೆರೆದರು ನಿಜ. ಆದರೆ ಕಡೆಗೊಮ್ಮೆ ಹೀನಾಯವಾಗಿ ಸೋತುಹೋದರು. ಇವರಿಬ್ಬರ ಬದುಕಿಗೆ ಸಂಬಂಧಿಸಿದಂತೆ ಒಂದಿಷ್ಟು ಕುತೂಹಲಕರ ಮಾಹಿತಿಗಳು ಇಲ್ಲಿವೆ. ಓದಿದ ನಂತರ `ಅರೆ, ಇದು ವಿಚಿತ್ರ’ ಎಂದು ಉದ್ಗರಿಸುತ್ತೀರೋ ಅಥವಾ `ಯೋಗಾಯೋಗ’ ಅಂದರೆ ಹೀಗಿರಬೇಕು ಎಂದು ಕಣ್ಣರಳಿಸಿ, ನಂಬಲಾಗದೆ ನಂಬುತ್ತೀರೋ…. ಆಯ್ಕೆ ನಿಮ್ಮದು- ಓದಿ.
* ನೆಪೋಲಿಯನ್ ಜನಿಸಿದ್ದು-೧೭೬೦ ರಲ್ಲಿ
ಹಿಟ್ಲರ್ ಜನಿಸಿದ್ದು-೧೮೮೯ ರಲ್ಲಿ
*ನೆಪೋಲಿಯನ್ ಅಧಿಕಾರಕ್ಕೆ ಬಂದದ್ದು -೧೮೦೪ ರಲ್ಲಿ
ಹಿಟ್ಲರ್ ಅಧಿಕಾರಕ್ಕೆ ಬಂದದ್ದು -೧೯೩೩ ರಲ್ಲಿ !
* ನೆಪೋಲಿಯನ್ ವಿಯಟ್ನಾಂ ನಗರವನ್ನು ಆಕ್ರಮಿಸಿಕೊಂಡದ್ದು ೧೮೦೯ ರಲ್ಲಿ
ಹಿಟ್ಲರ್ ವಿಯಟ್ನಾಂ ಪಟ್ಟಣವನ್ನು ಆಕ್ರಮಿಸಿದ್ದು ೧೯೩೮ ರಲ್ಲಿ
* ನೆಪೋಲಿಯನ್ ರಷ್ಯಾ ದೇಶಕ್ಕೆ ಮುತ್ತಿಗೆ ಹಾಕಿದ್ದು -೧೮೧೨ ರಲ್ಲಿ
ಹಿಟ್ಲರ್ ರಷ್ಯಾ ದೇಶಕ್ಕೆ ಮುತ್ತಿಗೆ ಹಾಕಿದ್ದು -೧೯೪೧ ರಲ್ಲಿ !
* ನೆಪೋಲಿಯನ್ ಯುದ್ಧದಲ್ಲಿ ಸೋತದ್ದು -೧೮೧೬ ರಲ್ಲಿ
ಹಿಟ್ಲರ್ ಯುದ್ಧದಲ್ಲಿ ಸೋತದ್ದು -೧೯೪೫ ರಲ್ಲಿ !
****
`ಈಗ `ವ್ಯತ್ಯಾಸ’ ಏನೆಂದು ಅರ್ಥವಾಯಿತಾ? ಇಲ್ಲ ಎಂದಾದರೆ ಹಾಳೆ, ಪೆನ್ನು ತಗೊಂಡು (ಅಥವಾ ಕ್ಯಾಲ್ಕುಲೇಟರ್ ಇಟ್ಕೊಂಡು) ಲೆಕ್ಕ ಮಾಡ್ತಾಹೋಗಿ. ಈ ಮಹಾನಾಯಕರಿಬ್ಬರ ಬದುಕಿನ ಏರಿಳಿತಗಳ ಮಧ್ಯೆ ೧೨೯ ವರ್ಷಗಳ ವ್ಯತ್ಯಾಸವಿರುವುದು ಗೊತ್ತಾವಾಗುತ್ತದೆ. ಜನನ, ಅಧಿಕಾರ ಹಿಡಿದ ದಿನ, ಯುದ್ಧ ಆರಂಭಿಸಿದ ದಿನ, ಗೆದ್ದ ದಿನ ಕಡೆಗೆ ಸೋತ ಕ್ಷಣದಲ್ಲಿ ಕೂಡ ನೆಪೋಲಿಯನ್ ಹಾಗೂ ಹಿಟ್ಲರ್ ಮಧ್ಯೆ ಸರಿಯಾಗಿ ೧೨೯ ವರ್ಷಗಳ ಅಂತರವಿದೆಯಲ್ಲ?
ಹೇಳಿ, ಅದು ವಿಚಿತ್ರವಲ್ಲವೆ? ಯೋಗಾಯೋಗ ಕೂಡ ಹೌದಲ್ಲವೆ?

ಅಪ್ಪಾ, ನೀನು ಗ್ರೇಟ್…

ಡಿಸೆಂಬರ್ 1, 2008

1111

ನನಗೆ ೬ ವರ್ಷವಿದ್ದಾಗ, ಅರೆ, ಅಪ್ಪನಿಗೆ ಎಷ್ಟೊಂದು ವಿಷಯ ಗೊತ್ತಲ್ವಾ ಅನಿಸುತ್ತಿತ್ತು.
೧೦ನೇ ವರ್ಷಕ್ಕೆ ಕಾಲಿಟ್ಟಾಗ ಅಪ್ಪ ಒಂಥರಾ ಸಿಡುಕನಂತೆ ಕಂಡ.
೧೨ನೇ ವರ್ಷದಲ್ಲಿ ಹಿಂತಿರುಗಿ ನೋಡಿದಾಗ, ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸ್ತು.
೧೪ನೇ ವಯಸ್ಸಿಗೆ ಬಂದಾಗಂತೂ-ಉಫ್, ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ.
೧೬ನೇ ವರ್ಷದಲ್ಲಿ ನನಗೂ ಅಪ್ಪನಿಗೂ ಸಣ್ಣ ಜಗಳವಾಯ್ತು.
೧೮ಕ್ಕೆ ಬಂದೆನಾ? ಅಪ್ಪ, ವಿಪರೀತ ಬಿಗಿಯಾದವನಂತೆ, ತೀರಾ ಒರಟನಂತೆ ಕಂಡ.
೨೦ನೇ ವಯಸ್ಸಿನಲ್ಲಿ ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ.
೨೫ರಲ್ಲಿದ್ದಾಗ ಅಪ್ಪಂಗೂ-ನನಗೂ ಹೊಂದಾಣಿಕೆಯೇ ಇರಲಿಲ್ಲ.
೩೨ನೇ ವರ್ಷದಲ್ಲಿ ನನ್ನ ಮಗ/ ಮಗಳ ರಂಪ ಕಂಡು ತಲೆ ಚಿಟ್ಟು ಹಿಡೀತು.
೩೬ ರಲ್ಲಿದ್ದಾಗ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ: ಅಪ್ಪ ನೆನಪಾದ.
೪೦ನೇ ವಯಸ್ಸಿಗೆ ಬಂದಾಗ ಅಪ್ಪನಿಗಿಂತ ಜಾಸ್ತಿ ಬಿಗಿಯಾಗದೇ ಹೋದ್ರೆ ಮಕ್ಕಳು ಬಗ್ಗಲ್ಲ ಅನ್ನಿಸ್ತು.
೪೫ರ ವಯಸ್ಸಿನಲ್ಲಿ -ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೊಂದು ಕಷ್ಟ ಆಯ್ತೋ ಅಂದುಕೊಂಡೆ.
೫೦ರಲ್ಲಿದ್ದಾಗ ಅಂದುಕೊಂಡೆ: ಒಂದು ಮಗು ಸಾಕೋದೇ ಕಷ್ಟ, ಅಪ್ಪ ನಾಲ್ಕು ಮಕ್ಕಳನ್ನು ಹೇಗೆ ಸಾಕಿದ?
೫೫ನೇ ವಯಸ್ಸಿನಲ್ಲಿ ಮಗ/ಮಗಳು ನನ್ನನ್ನೇ ಹೀನಾಯವಾಗಿ ನಿಂದಿಸಿದ್ದರು ಅಳುಬಂತು ನನಗೆ !.

ಕಡೆಗೂ, ಹಳೆಯದೆಲ್ಲ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಫೋಟೋ ಮುಂದೆ ನಿಂತು, ಅಪ್ಪಾ ಯು ಆರ್ ಗ್ರೇಟ್ ಅಂದಾಗ ನನಗೆ ೬೦ ತುಂಬಿತ್ತು. ಅಪ್ಪನ ಮಹತ್ವ ತಿಳಿಯಲು ೫೪ ವರ್ಷ ಬೇಕಾಯ್ತು !

ದುಂಡಗಿರುವುದು ನಡುವಲ್ಲ!

ನವೆಂಬರ್ 24, 2008

`ಸರ್ವಮಂಗಳ’ ಕಾದಂಬರಿ ಮೂಲಕ ರಾತ್ರೋರಾತ್ರಿ ಪ್ರಸಿದ್ಧರಾದವರು ಚದುರಂಗ. ಆ ಕಾದಂಬರಿ ತಮಗೆ ತಂದುಕೊಟ್ಟ ಜನಪ್ರಿಯತೆಯ ಬಗ್ಗೆ ಹೇಳುತ್ತ ` ಐ ಡಿಟhಛಿ m ಟ್ಞಛಿ ಜ್ಞಿಛಿ ಞಟ್ಟ್ಞಜ್ಞಿಜ Zb ಟ್ಠ್ಞb ಞqs oಛ್ಝ್ಛಿ Zಞಟ್ಠo’ (ರಾತ್ರಿ, ಕಳೆದು ಬೆಳಗಾಗುವುದರೊಂಗೆ ನಾನು ಹೆಸರಾಂತ ವ್ಯಕ್ತಿ ಆಗಿಬಿಟ್ಟಿದ್ದೆ) ಎಂದು ಉದ್ಗರಿಸಿದ್ದರು.
ಒಂದು ಸ್ವಾರಸ್ಯವೆಂದರೆ, ಚದುರಂಗ, ಕಾದಂಬರಿಕಾರರೆಂದು ಹೆಸರು ಮಾಡಿದ್ದು ನಿಜ. ಆದರೆ ಅವರು ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದು ಕವಿತೆ ಬರೆಯುವ ಮೂಲಕ. ವಿದ್ಯಾರ್ಥಿ ದಿಸೆಯಲ್ಲಿ, ಆಗಿನ ವಯೋಧರ್ಮಕ್ಕೆ ಅನುಗುಣವಾಗಿ ಒಂದು ಪ್ರೇಮಗೀತೆ ಬರೆದರು ಚದುರಂಗ. ಅದು ಬೆಡಗಿಯೊಬ್ಬಳನ್ನು ವರ್ಣಿಸುವಂಥ ಕವನ ಎಂದು ಬಿಡಿಸಿ ಹೇಳಬೇಕಿಲ್ಲ ತಾನೆ?
ಹೀಗೆ ಬರೆದ ಪದ್ಯವನ್ನು ಯಾರಾದರೂ ಹಿರಿಯರಿಗೆ ತೋರಿಸಿ ಅವರ ಅಭಿಪ್ರಾಯ ಕೇಳಬೇಕೆಂಬ ಆಸೆಯಾಯಿತು ಚದುರಂಗರಿಗೆ. ಆಗ ತಕ್ಷಣ ನೆನಪಾದವರು `ನಾಯಿಮರಿ ನಾಯಿಮರಿ ತಿಂಡಿಬೇಕೆ’ ಖ್ಯಾತಿಯ ಜಿ.ಪಿ. ರಾಜರತ್ನಂ. ಇವರು ಸಡಗರದಂದಲೇ ಹೋಗಿ ಎದುರು ನಿಂತರು. ತಾವು ಬಂದ ಕಾರಣ ವಿವರಿಸಿ, ಸಂಕೋಚದಿಂದಲೇ ಆ ಪದ್ಯವನ್ನು ರಾಜರತ್ನಂ ಕೈಗಿಟ್ಟರು.
ಆ ಪದ್ಯದಲ್ಲಿ ಹುಡುಗಿಯನ್ನು ವರ್ಣಿಸುತ್ತ `ಬಟ್ಟ ನಡುವಿನ ಬಾಲೆ’ ಎಂದು ಬರೆದಿದ್ದರಂತೆ ಚದುರಂಗ. ಅದನ್ನೇ ಎರಡೆರಡು ಬಾರಿ ಓದಿ ಜೋರಾಗಿ ನಕ್ಕ ರಾಜರತ್ನಂ- `ನಿಮಗೆ ಅನುಭವ ಸಾಲದು. ಅದಕ್ಕೇ ಹೀಗೆ ಬರೆದಿದ್ದೀರಿ’ ಅಂದರಂತೆ. ಮುಂದುವರಿದು- `ಬಟ್ಟ ಎಂದರೆ ದುಂಡಗೆ, ಗುಂಡುಗುಂಡಾಗಿ ಇರುವುದು ಎಂದರ್ಥ. ಬಾಲೆಯ ದೇಹದಲ್ಲಿ ದುಂಡಾಗಿರುವುದು ನಡುವಂತೂ ಅಲ್ಲ. ಒಂದೆರಡು ವರ್ಷ ಕಳೆಯಲಿ. ನನ್ನ ಮಾತಿನ ಅರ್ಥ ಏನೆಂಬುದು ನಿಮಗೇ ಗೊತ್ತಾಗುತ್ತದೆ!’ ಎಂದರಂತೆ.
***
ಸ್ವಲ್ಪ ಅಶ್ಲೀಲ ಎಂಬಂಥ ಸಂಗತಿಯನ್ನು ಇದಕ್ಕಿಂತ ಸರಳವಾಗಿ ಮತ್ತು ಸಹಜವಾಗಿ ಹೇಳಲು ಸಾಧ್ಯವೇ?

ಗಾಂಧಿ ಟೋಪೀನ ಗಾಂಧಿಯೇ ಹಾಕ್ಕೊಲ್ಲ, ಯಾಕೆ?

ನವೆಂಬರ್ 16, 2008

gandi-caps

ಗಾಂಧಿ ಅಂದಾಕ್ಷಣ ನಮ್ಮ ಕಣ್ಮುಂದೆ ಎರಡು ಚಿತ್ರಗಳು ಬಂದು ನಿಲ್ಲುತ್ತವೆ. ಒಂದು-ಬೊಚ್ಚು ಬಾಯಿನ ಮಹಾತ್ಮಗಾಂಧಿಯದ್ದು. ಇನ್ನೊಂದು-ಗಾಂಧಿ ಟೋಪಿಯದ್ದು.
ಗಾಂಧೀಜಿಯವರಷ್ಟೇ ಅಥವಾ ಅವರಿಗಿಂತ ಒಂದು ಕೈ ಜಾಸ್ತಿ ಎನ್ನುವಷ್ಟು ಹೆಸರು ಮಾಡಿರುವುದು ಗಾಂಧಿಟೋಪಿ. ಒಂದು ಕಾಲದಲ್ಲಂತೂ ಗಾಂಧಿ ಟೋಪಿ ಧರಿಸಿದವರನ್ನೆಲ್ಲ ದೇಶಭಕ್ತರು ಎಂದು ನಂಬಲಾಗುತ್ತಿತ್ತು. ನಂತರ ಆ ಹೆಗ್ಗಳಿಕೆಯನ್ನು ದೇಶಭಕ್ತರಿಂದ ನಮ್ಮ ಕಟಪ ರಾಜಕಾರಣಿಗಳು `ಹೊಡೆದುಕೊಂಡರು’.
ವಿಷಯ ಅದಲ್ಲ. ಹಿಂಬಾಲಕರು ಅನ್ನಿಸಿಕೊಂಡ ಲಕ್ಷ ಲಕ್ಷ ಜನರು ದೊಡ್ಡ ಪ್ರೀತಿ- ಭಕ್ತಿ-ಗೌರವದಿಂದ, ಒಂದು ಹೆಮ್ಮೆಯಿಂದ ಗಾಂಧಿ ಟೋಪಿ ಧರಿಸಿದರು ತಾನೆ? ಹಾಗಿದ್ದರೂ ಗಾಂಧೀಜಿಯವರು ಅದೇಕೆ ಗಾಂಧಿಟೋಪಿ ಧರಿಸಲಿಲ್ಲ? ಟೋಪಿ ಧರಿಸಿ ಪ್ರಾರ್ಥನೆಗೆ ಕೂತ, ಭಾಷಣಕ್ಕೆ ನಿಂತ, ಪ್ರತಿಭಟನೆಗೆ ಹೊರಟ ಗಾಂಧೀಜಿಯ ಚಿತ್ರಗಳೇ ನೋಡಲು ಸಿಗುವುದಿಲ್ಲವಲ್ಲ ಏಕೆ? ಗಾಂಧೀಜಿಯವರು ಎಂದೂ ಟೋಪಿ ಧರಿಸಲೇ ಇಲ್ಲವೇ? ಅಥವಾ ಟೋಪಿ ಧರಿಸಿದ ಚಿತ್ರವನ್ನು ತೆಗೆಯಲು ಯಾರಿಗೂ ಅವಕಾಶ ಕೊಡಲಿಲ್ಲವೇ? ಇಂಥವೇ ಕುತೂಹಲಕರ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಏನೆಂದರೆ- ಗಾಂಧೀಜಿಯವರೂ ಆರಂಭದಲ್ಲಿ ಉಳಿದೆಲ್ಲರಂತೆ ಹೆಮ್ಮೆಯಿಂದಲೇ ಟೋಪಿ ಧರಿಸುತ್ತಿದ್ದರು. ಒಂದು ದಿನ ಅವರು ಪ್ರಾರ್ಥನೆಗೆ ಕೂರುವ ಹೊತ್ತಿನಲ್ಲಿ-ಮೈತುಂಬ ಅತ್ತರು ಪೂಸಿಕೊಂಡ ಫುಡಾರಿಯೊಬ್ಬ ಆ ಸಭೆಗೆ ಠಾಕುಠೀಕಾಗಿ ನಡೆದು ಬಂದ. ಪ್ರತಿ ಐದೈದು ನಿಮಿಷಕ್ಕೂ ಆತ ಎಲ್ಲರಿಗೂ ಕಾಣುವಂತೆ ಟೋಪಿಯನ್ನು ಸರಿಮಾಡಿಕೊಳ್ಳುತ್ತಿದ್ದ.
ಅದನ್ನು ಕಂಡ ಮರುಕ್ಷಣವೇ ಗಾಂಧೀಜಿ ತಮ್ಮ ಟೋಪಿಯನ್ನು ಕಳಚಿಟ್ಟರು. ಜತೆಗಿದ್ದವರು ಬೆರಗಿನಿಂದ-ಗಾಂಧೀಜಿ, ಇದ್ಯಾಕೆ ನೀವು ಟೊಪ್ಪಿ ತೆಗೆದು ಕೆಳಗಿಟ್ಟಿರಿ ಎಂದಾಗ- `ಈಗ ತಾನೆ ಒಬ್ಬ ಕಡುಭ್ರಷ್ಟನ ತಲೆಯ ಮೇಲೆ ಗಾಂಧಿ ಟೋಪಿ ಇದ್ದುದನ್ನು ಕಂಡೆ. ಇನ್ನು ಮುಂದೆ ನನ್ನ ತಲೆಯಲ್ಲಿ ಗಾಂಧಿ ಟೊಪ್ಪಿಗೆ ಅವಕಾಶವಿಲ್ಲ’ ಎಂದರಂತೆ!
ಅಂದಿನಿಂದ ಹಾಗೆಯೇ ಸಾಗಿಬಂದಿದೆ. ಗಾಂಧಿ ಟೋಪಿಯೆಂಬುದು …. ರಾಜಕಾರಣಿಗಳ ನೆತ್ತಿಯ ಮೇಲೆ….

ಅವಳನ್ನೇ ಕಳಿಸಿಕೊಡ್ತೇನೆ!

ನವೆಂಬರ್ 7, 2008

ರಾತ್ರಿ ಕಾವಲುಗಾರನ ಕೆಲಸಕ್ಕೆ ಅವನು ಅರ್ಜಿ ಹಾಕಿದ್ದ. ಸಂದರ್ಶನಕ್ಕೆ ಕರೆ ಬಂತು. ಹೋದ, ಕುಳ್ಳನೂ, ಅಳುಮೋರೆಯವನೂ ಆಗಿದ್ದ ಅವನನ್ನು ಒಮ್ಮೆ ಅಡಿಯಿಂದ ಮುಡಿಯವರೆಗೂ ನೋಡಿದ ಸಂದರ್ಶಕರು ಹೀಗೆಂದರು: `ಅಲ್ಲಪ್ಪಾ, ನಿಮಗೆ ಇಡೀ ಎಚ್ಚರದಿಂದಿರುವ, ದಷ್ಟಪುಷ್ಟವಾದ, ಆಕ್ರಮಣಕಾರಿ ಮನೋಭಾವದ, ನೋಡಿದರೆ ಸಾಕು, ಹೆದರಿಕೆಯಾಗುವಂಥ ಮೈಕಟ್ಟಿನವರು ಬೇಕು ಅಂತ ಜಾಹೀರಾತು ನೀಡಿದ್ವಿ. ಈ ಹುದ್ದೆಗೆ ಅರ್ಜಿ ಹಾಕುವ ಮುನ್ನ ನೀನು ಅದನ್ನೆಲ್ಲ ಓದಲಿಲ್ಲ ಅಂತ ಕಾಣುತ್ತೆ…’
ಅವರ ಮಾತು ಮುಗಿದ ತಕ್ಷಣವೇ ಆ ಅಳುಮೋರೆಯ ಮನುಷ್ಯ ಹೀಗೆಂದ: `ಸ್ವಾಮಿ, ನೀವು ಹೇಳಿದ ಎಲ್ಲ ಗುಣಗಳೂ ನನ್ನ ಹೆಂಡತಿಗಿವೆ. ಈಗಲೇ ಮನೆಗೆ ಹೋಗಿ ಅವಳನ್ನು ಕಳಿಸಿಕೊಡುತ್ತೇನೆ

ಕುಡಿದಾಗ ಮನುಷ್ಯ ಮೂರು ಥರಾ ಆಡ್ತಾನೆ,

ಅಕ್ಟೋಬರ್ 20, 2008

ಯಾಕೆ ಗೊತ್ತಾ?

ತುಂಬ ಹಿಂದಿನ ಮಾತು. ಆಗಿನ್ನೂ `ಗುಂಡು’ ಅಥವಾ ಮದ್ಯ ಬಳಕೆಯಲ್ಲಿ ಇರಲಿಲ್ಲ. ಹೀಗಿದ್ದಾಗಲೇ ಮತ್ತೇರಿಸುವ ಪಾನೀಯವನ್ನು ಕಂಡುಹಿಡಿಯುವ ಯೋಚನೆ ಮನುಷ್ಯನಿಗೆ ಬಂತು. ಆತ ತಡಮಾಡಲಿಲ್ಲ. ಒಂದೆರಡು ದಿನ ಏನೇನೋ ಯೋಚಿಸಿದ. ನಂತರ, ಕಾಡಿಗೆ ಬಂದವನೇ-ಅಲ್ಲಿದ್ದ ಗಿಣಿಗಳಿಗೆ ಬಹುಕಾಲದಿಂದಲೂ ಆಶ್ರಯ ನೀಡಿದ್ದ ಒಂದು ದೊಡ್ಡ ಮರವನ್ನು ಉರುಳಿಸಿ, ಅದರ ಬೇರನ್ನು ತೆಗೆದುಕೊಂಡ.
ನಂತರ ಅದೇ ಕಾಡಿನಲ್ಲಿ ಒಂದು ಹುಲಿಯನ್ನು ಬೇಟೆಯಾಡಿ, ಅದರ ಚರ್ಮವನ್ನು ಸಂಗ್ರಹಿಸಿದ. ನಂತರ ಖುಷಿಯಿಂದ ಮನೆಗೆ ಬಂದವನಿಗೆ, ಅಲ್ಲಿದ್ದ ಹಂದಿಯೊಂದು ಕಾಣಿಸಿತು. ಮದ್ಯ ತಯಾರಿಗೆ ಇವರದ್ದೂ ಸ್ವಲ್ಪ ಪಾಲು ಸೇರಲಿ ಎಂದುಕೊಂಡವನೇ ಆ ಹಂದಿಯ ಬಾಲವನ್ನು ಕತ್ತರಿಸಿಕೊಂಡ.
ಹೀಗೆ ಸಂಗ್ರಹಿಸಿದ ಮರದ ಬೇರು, ಹುಲಿಯ ಚರ್ಮ ಹಾಗೂ ಹಂದಿಯ ಬಾಲವನ್ನು ಚೆನ್ನಾಗಿ ಕುಟ್ಟಿ, ಕಾಯಿಸಿ, ಭಟ್ಟಿ ಇಳಿಸಿದ. ಹಾಗೆ ತಯಾರಾದ ಪದಾರ್ಥವನ್ನೇ `ಮದ್ಯ’ ಎಂದು ಕರೆದ. ಖುಷಿ ಹಾಗೂ ಬೇಸರದ ಸಂದರ್ಭಗಳಲ್ಲಿ ಅದನ್ನು ಉಪಯೋಗಿಸತೊಡಗಿದ. ಇವನಿಂದ ನೊಂದಿದ್ದ ಗಿಣಿ, ಹುಲಿ ಹಾಗೂ ಹಂದಿಗಳು-ನಮಗೆ ಹಿಂಸೆ ನೀಡಿ ತಯಾರಿಸಿದ ಆ ದ್ರವ ಪದಾರ್ಥಕ್ಕೆ ನಮ್ಮ ಗುಣಗಳೇ ಕ್ರಮವಾಗಿ ಬರಲಿ ಎಂದು ಶಾಪಕೊಟ್ಟವು.
ಆ ಶಾಪ, ಇಂದಿಗೂ ತನ್ನ ಜಾರಿಯಲ್ಲಿದೆ. ಹಾಗಾಗಿಯೇ ಮನುಷ್ಯ ಕುಡಿದಾಗ-
ಮೊದಲು ಗಿಣಿಯಂತೆ ಮಾತಾಡಲು ಶುರು ಮಾಡುತ್ತಾನೆ.
ಸ್ವಲ್ಪ ಜಾಸ್ತಿ ಕುಡಿದ ನಂತರ ಕ್ರೂರ ಹುಲಿಯಂತೆ ಎಗರಾಡುತ್ತಾನೆ, ಘರ್ಜಿಸುತ್ತಾನೆ.
ಇನ್ನು ಇನ್ನೂ ಹೆಚ್ಚಾಗಿ ಕುಡಿದರೆ-ಹಂದಿಯಂತೆ ಮಲಗಿಬಿಡುತ್ತಾನೆ!

ನಿಮಗಿರುವ ವಿವೇಕ ನನಗೂ ಇರಲಿಲ್ಲ ಅಂದರು ಗಾಂಧೀಜಿ!

ಅಕ್ಟೋಬರ್ 20, 2008

ಗಾಂಧೀಜಿಯವರು ಹರಿಜನ ಸೇವಾ ಆಂದೋಲನ ಆರಂಭಿಸಿದ್ದ ದಿನಗಳಲ್ಲಿ ನಡೆದ ಪ್ರಸಂಗ ಇದು.
ಒಂದು ದಿನ ಮಹಿಳೆಯೊಬ್ಬಳು ತನ್ನ ಒಡವೆಗಳನ್ನು ದಾನ ಮಾಡುವ, ಆ ಮೂಲಕ ಹರಿಜನ ಸೇವಾ ಚಳವಳಿಗೆ ತನ್ನ ಕಿರುಕಾಣಿಕೆ ಸಲ್ಲಿಸುವ ಉದ್ದೇಶದಿಂದ ಗಾಂಧೀಜಿಯವರನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ವಿಷಯ ತಿಳಿದ ಪಕ್ಕದ ಮನೆಯ ಹೆಂಗಸು, ತಾನೂ ಬಂದದ್ದಲ್ಲದೆ, ತನ್ನಲ್ಲಿದ್ದ ಅಷ್ಟೂ ಚಿನ್ನದ ಒಡವೆಗಳನ್ನು ಗಾಂಧೀಜಿಯವರಿಗೆ ಕೊಟ್ಟುಬಿಟ್ಟಳು. ನಂತರ ಆ ಮಹಿಳೆಯ ಪತಿಯೂ ಅಲ್ಲಿಗೆ ಬಂದ. ಕೈ ಮುಗಿದ. ಗಾಂಧೀಜಿಯವರಿಗೆ ಪರಿಚಯ ಹೇಳಿಕೊಂಡ. ಗಾಂಧೀಜಿ ಕೇಳಿದರು:
`ನಿಮ್ಮ ಹೆಂಡತಿ ತನ್ನೆಲ್ಲ ಚಿನ್ನದ ಒಡವೆಗಳನ್ನೂ ನನಗೆ ದಾನವಾಗಿ ಕೊಟ್ಟಿದ್ದಾರೆ. ಈ ಸಂಗತಿ ನಿಮಗೆ ಗೊತ್ತಿದೆ ತಾನೆ? ಹೀಗೆ ಒಡವೆಗಳನ್ನು ಬಿಚ್ಚಿಕೊಡಲು ನೀವು ಆಕೆಗೆ ಅನುಮತಿ ನೀಡಿದ್ದೀರಾ?’
ಆ ಪತಿರಾಯ ಹೀಗೆಂದ: `ಹೌದು, ಆಕೆ ನನಗೆ ಮೊದಲೇ ವಿಷಯ ತಿಳಿಸಿದಳು. ಒಡವೆಗಳನ್ನು ದಾನ ಮಾಡಲು ನನ್ನ ಅನುಮತಿಯನ್ನೂ ಬೇಡಿದಳು. ಆದರೆ ಒಡವೆಗಳು ಆಕೆಯವು. ಆಕೆ ಅವುಗಳನ್ನು ಯಾರಿಗೆ ಬೇಕಾದರೂ ಕೊಡಲಿ. ಅದನ್ನು ತಡೆಯಲು ನನಗೆ ಅಧಿಕಾರವಿಲ್ಲ ಅಂದ್ಕೋತೀನಿ…’
ಈ ಮಾತು ಕೇಳಿ- `ಎಲ್ಲ ಗಂಡಂದಿರೂ ನಿಮ್ಮಷ್ಟು ವಿವೇಕಿಗಳಾಗಿರೊಲ್ಲ’ ಎಂದು ಉದ್ಗರಿಸಿದ ಗಾಂಧೀಜಿ ಮುಂದುವರಿದು- `ಈಗ ನಿಮ್ಮ ವಯಸ್ಸೆಷ್ಟು?’ ಅಂದರು.
ಆ ಪತಿರಾಯ ಸ್ವಲ್ಪ ಸಂಕೋಚದಿಂದ `ನನಗೀಗ ೩೦ ವರ್ಷ’ ಅಂದ.
ತಕ್ಷಣವೇ ಗಾಂಧೀಜಿ- `ಆ ವಯಸ್ಸಿನಲ್ಲಿ ನಿಮಗಿರುವ ವಿವೇಕ ನನಗೂ ಇರಲಿಲ್ಲ’ ಎಂದು ಮತ್ತೊಮ್ಮೆ ಉದ್ಗರಿಸಿದರು….

ಅವರ ಜಾಗ ಯಾವುದೂಂತ ತೋರಿಸ್ತಾ ಇದೀನಿ!

ಅಕ್ಟೋಬರ್ 12, 2008

ಅಮೆರಿಕದಲ್ಲಿ ಅದೊಮ್ಮೆ ಸ್ವಾಮಿ ವಿವೇಕಾನಂದರ ಭಾಷಣ ಏರ್ಪಾಡಾಗಿತ್ತು. ಭಾಷಣ ಕೇಳಲು ವಿದೇಶಿಯರು ಮಾತ್ರವಲ್ಲ, ಅಮೆರಿಕದಲ್ಲಿದ್ದ ಭಾರತೀಯರೂ ಹೋಗಿದ್ದರು. ವಿವೇಕಾನಂದರು ತಮ್ಮ ಭಾಷಣದ ಮಧ್ಯೆ ಸ್ವದೇಶಿ ವಸ್ತುಗಳನ್ನು ಬಳಸಿ, ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಅವರು ಸ್ವದೇಶಿ ನಿಲುವಂಗಿಯನ್ನೇ ಧರಿಸಿದ್ದರು ನಿಜ. ಆದರೆ, ಅವರ ಪಾದರಕ್ಷೆಗಳು ಮಾತ್ರ ವಿದೇಶದಲ್ಲಿ ತಯಾರಾಗಿದ್ದವು ಎಂಬುದು ಅಲ್ಲಿದ್ದ ಎಲ್ಲರಿಗೂ ಮೊದಲ ನೋಟಕ್ಕೇ ಅರ್ಥವಾಯಿತು. ಆ ಕಡೆಗೆ ಗಮನ ಕೊಡದವರಂತೆ ಭಾಷಣ ಮುಂದುವರಿಸಿದ ವಿವೇಕಾನಂದರು ಅಮೆರಿಕದಲ್ಲಿರುವ ಭಾರತೀಯರಾದ ನೀವೆಲ್ಲರೂ ಮುಂದೆ `ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಿ. ಆ ಮೂಲಕ ವಿದೇಶಿಯರನ್ನು ವಸ್ತ್ರದ ವಿಷಯದಲ್ಲಾದರೂ ದೂರವಿಡಿ’ ಎಂದರು.

ತಕ್ಷಣವೇ ಬಾಯಿ ಹಾಕಿದ ಅಮೆರಿಕನ್ ಹೆಂಗಸೊಬ್ಬಳು ವ್ಯಂಗ್ಯವಾಗಿ- `ನೀವು ಸ್ವದೇಶಿ ವಸ್ತ್ರಗಳನ್ನೇ ಧರಿಸಬೇಕೆಂದು ಆಗಿಂದಲೂ ಹೇಳುತ್ತಲೇ ಇದ್ದೀರಿ. ಸರಿ. ನಿಮ್ಮ ವಾದವನ್ನು ಒಪ್ಪೋಣ. ಆದರೆ, ನೀವೇಕೆ ಇಂಗ್ಲೆಂಡಿನಲ್ಲಿ ತಯಾರಾದ ಚಪ್ಪಲಿಗಳನ್ನು ಹಾಕಿಕೊಂಡಿದ್ದೀರಿ?’ ಎಂದು ಕೇಳಿಬಿಟ್ಟಳು.
ವಿವೇಕಾನಂದರು ಕೂಡಲೇ- `ನಮ್ಮ ದೇಶದಲ್ಲಿ ಬ್ರಿಟಿಷರಿಗೆ ಯಾವ ಸ್ಥಾನವಿದೆ ಎಂಬುದನ್ನು ತೋರಿಸಲು ಹಾಗೆ ಮಾಡಿದ್ದೇನೆ’ ಅಂದರಂತೆ!